Posted by: sundaranadu on: April 15, 2008
ನೆನಪಾಗುತಿದೆ ಯಾಕೋ ಇಂದು
ನಲುಗಿ ಹೋದ ಪ್ರೀತಿಯೂ
ನೋವಲ್ಲು ಕಚಗುಳಿಯಿಟ್ಟು
ನಗಿಸಿ ಹೋದ ಪ್ರೀತಿಯೂ
ನೆನೆಯ ಬಾರದೆಂದೂ ಬಯಸಿದಷ್ಟು
ನೆನಪಾಗುವೆ ಯಾಕೆ ಪ್ರೀತಿಯೆ?
ನೋವಲ್ಲು ನಲಿವಲ್ಲು ಕಾಡುವುದೇ
ನಿನ್ನ ರೀತಿಯೇ
ನೆನಪಾಗುತಿದೆ ಯಾಕೋ ಇಂದು
ನಾನಂದುಕೊಂಡಷ್ಟು ದೂರ ನೀನಿಲ್ಲ
ನಾನು ಕರೆದರು ನೀ ಬರುವ ಹಾಗಿಲ್ಲ
ನನ್ನೊಲವೆಲ್ಲ ನೀನೆ ಆದರೂ
ನೀನಿಲ್ಲದೇ ಏನು ಇಲ್ಲಿಲ್ಲ
ನರಳುತಿದೆ ಪ್ರೀತಿಯಲಿ ಮನವು ಇಂದು……….
Posted by: sundaranadu on: April 15, 2008
ಎಷ್ಟು ನೆನೆದರು ಮುಗಿಯದು ತಂದೆ
ನಿನ್ನಯ ಗುಣಗಾನ
ಸರ್ವರಲು ನೆಲೆಸಿ ಕಾಪಾಡುತಲಿರುವೆ
ಜಯ ಶ್ರೀ ಗಜಾನನ
ನಿನ್ನ ನಾಮವ ನೆನೆಯುತಲಿದ್ದರೆ
ಇಲ್ಲ ಯಾವ ಪಾಪ, ಭಯ
ನೂರೆಂಟು ನಾಮದ ಗುರುವೇ
ನೀ ಮುನಿದರೆ ಜಗ ಪ್ರಳಯ
ಸಿದ್ಧಿಗೂ, ಬುದ್ಡಿಗೂ
ಅಧಿನಾಯಕ ನೀನೆ
ಕಷ್ಟಗಳ ತೊಲಗಿಸಿ
ದಾರಿಯ ತೋರೊ ವಿನಾಯಕನೆ
Posted by: sundaranadu on: April 15, 2008
ಮೌನ ಮುರಿಯಬಾರದೇ
ಮನದ ಮಾತು ಕೇಳದೇ
ಮನವ ಕದ್ದು ಅದರೊಳಗಿದ್ದು
ಮೆರೆವ ಪ್ರೀತಿಯೇ
ಮಾತೆ ಮುತ್ತು
ಮಾತೆ ಮೃತ್ಯು
ಮರೆತು ಹೋಯಿತೆ
ಮಾತನಾಡದೇ ಮೃತ್ಯು ತೋರಿಸಿ
ಮೆರೆವ ಪ್ರೀತಿಯೇ
ಮೌನ ರಾಗವ
ಮರೆಯೇ ನನ್ನ ಮಲ್ಲಿಗೆ
ಮಾತು ಕೊಡುವೆನು ನಿನಗೆ
ಮತ್ತಾರ ನೆನೆಯೆನು
ಮುಗಿಲ ಅಪ್ಸರೆ ಬಂದರೂ
ಮರೆವುದಿಲ್ಲ ನನ್ನ ಪ್ರೀತಿಯೇ
Posted by: sundaranadu on: April 15, 2008
ಕಡಲ ತೆರದಿ ಮನಕಪ್ಪಳಿಸುತಿದೆ
ಪ್ರೀತಿಯ ಅಲೆಗಳು
ಪ್ರತಿದಿನವೂ ಹುಣ್ಣಿಮೆಯಾಗಿ
ಅಲ್ಲ
ಇದು ಪ್ರತಿದಿನವೂ ಅಪ್ಪಳಿಸುತಿರುವ ಸುನಾಮಿ
ತಡೆದು ನಿಲ್ಲಿಸ್ಸುವ ಸಹನೆಯ
ತದೆಗೋಡೆಗಳಿಲ್ಲ
ಎಲ್ಲ ತೊರೆದು ಓಡಲು
ಬೇರೆ ದಾರಿಗಳಿಲ್ಲ
ಗೋಡೆ ಒಡೆದಿಹುದು, ದಾರಿ ಮುಚ್ಚಿಹವು
ಮಹಾ ಪ್ರೀತಿಯ ಪ್ರಳಯದ ಪ್ರಮಾದಕೆ
Posted by: sundaranadu on: April 15, 2008
ಬಾ ನಾವಿಕನೆ
ಸ್ನೇಹದ ಒಡಲಿನ ಜೇನಿನ ಕಡಲಿದು
ಇಂದು-ನಾಳೆಗೆ ಮುಗಿಯದು
ನಿತ್ಯ ನಿರಂತರ ಅನಂತ
ದೂರಕು ತೋರುವ ಕಡಲ ಒಡಲಿದು
ಉಬ್ಬರದಿ ಅಬ್ಬರಿಸುವ ಕಡಲ
ಆಳ ನೋಡಬೇಡ
ಮೌನವನ್ನು ಮುರಿಯುವ
ಭೋರ್ಗರೆತಕೆ ಅನ್ಜಬೇಡ
ಸ್ನೇಹದ ಆಳವಿದು
ಸವಿನೆನಪಿನ ಭೋರ್ಗರೆತವಿದು
ಸ್ನೇಹ ಸಾಗರವೆಂಬುದು
ನೆನಪಿನ ಬುತ್ಟಿಯ ಮುತ್ತು ಪಚ್ಚೆಗಳ ಗೂಡು
ಒಡಲಿನೊನ್ದಿಗೆ ಸುಳಿವ
ಸವಿನೆನಪಿನ ಹಾಡು
ಗೆಳೆತನದ ಸೆಲೆಗೆ
ಮನಮಿಡಿಯುವ ತಾಳಕೆ
ಪ್ರೀತಿ-ವಾತ್ಸಲ್ಯದ ಹಾಡು.
Posted by: sundaranadu on: April 8, 2008
ಮಳೆಗಾಲ ಅಂದ್ರೆ ಸುರ್ರನೆ ಸುರಿಯೋ ಮಳೆ . ವಟಗುಟ್ಟುವ ಕಪ್ಪೇಗಳು . ಮಳೆ ನಿಂತರು ನಿಲ್ಲದ ಮರದ ಹನಿಗಳು . ಕಿಟಕಿಯ ಹೊರಗೆ ಮತ್ತೊಂದು ಹೊಸ ಜಗತ್ತು ಅನಾವರಣಗೊಂಡ ಹಾಗಿರುತ್ತೆ . ಮಲೆನಾಡಲ್ಲಿ , ಮಳೆಯ ಹಾಡಿನ ನಡುವೆ ಸೂರ್ಯನ ಬಿಸಿಲನ್ತು ಮಳೆ ಮುಗಿಯೋವರೆಗೆ ಮರೆತೆ [...]
ಅಭಿಪ್ರಾಯಗಳು