Posted by: sundaranadu on: July 29, 2008
ಶುಕ್ರವಾರ,ದಿನಾಂಕ: 25/07/2008, ಬೆಂಗಳೂರಿನ, ಕರ್ನಾಟಕದ ಇತಿಹಾಸದಲ್ಲಿಯೇ
ಮೊದಲ ಸರಣಿ ಬಾಂಬ್ ಸ್ಪೋಟ ದಾಖಲದ ದಿನ. ಒಂದು ಸಾವಿನೊಂದಿಗೆ,ಕೆಲವು
ಜನ ಗಾಯಗೊಂಡರು. ಇಡೀ ದೇಶಕ್ಕೆ ಇದ್ದಕ್ಕಿದ್ದ ಹಾಗೆ ದಿಗ್ಬ್ರಮೆಯಾಯಿತು.
ವಾರಾಂತ್ಯದ ‘ಮಜ’ ಅನುಭವಿಸಲು ಸಿದ್ಧರಾದವರಿಗೆ ಆಘಾತ. ಕಾಡ್ಗಿಚ್ಚಿನಂತೆ
ಹರಡುತ್ತಿದ್ದ ವದಂತಿಗಳು. ಜನರನ್ನು ಎಚ್ಚರಗೊಳಿಸುವತ್ತ ಮಾಧ್ಯಮಗಳು.
ಅನುಮಾನಾಸ್ಪದವಾಗಿ ಕಂಡು ಬರುವಂತಹ ವಸ್ತುಗಳನ್ನು ಪೊಲೀಸರ
ಗಮನಕ್ಕೆ ತರಬೇಕೆಂದು ಪೊಲೀಸರ, ಮಾಧ್ಯಮದವರ ಮನವಿಯಾಗಿತ್ತು.
ಶನಿವಾರ,ದಿನಾಂಕ: 26/07/2008, ಬೆಂಗಳೂರು ಶುಕ್ರವಾರದ ಘಟನೆಯ
ನಂತರ ಸಹಜ ಸ್ಥಿತಿಗೆ ಮರಳುತ್ತಿತ್ತು. ಕೋರಮಂಗಲದ ‘ಫೋರಮ್ ಮಾಲ್’ ಬಳಿ
ಅಸಹಜವಾದ ವಸ್ತುವೊಂದು ಕಂಡು ಬಂತು. ಅಲ್ಲಿನ ಹತ್ತಿರದ ಅಂಗಡಿಯವನು
ಪೊಲೀಸರಿಗೆ ವಿಷಯ ತಿಳಿಸಲು, ಪೊಲೀಸರು [...]
Posted by: sundaranadu on: July 25, 2008
1. ಆಡಿ ಪೋಕರಿ ಅನ್ನಿಸಿಕೊಳ್ಳುವುದಕಿಂತ ಆಡದೆ ಮೂಗ ಅನ್ನಿಸಿಕೊಳ್ಳುವುದು ಮೇಲು.
2. ಮಾತಿಗೆ ಸಾಯದೇ ಇದ್ದೋನೂ ಏಟಿಗೂ ಸಾಯುವುದಿಲ್ಲ.
3. ಹಾವು ಸಾಯಬಾರದು, ಕೋಲು ಮುರೀಬಾರದು.
4. ಇತ್ತಿತ್ತ ಬಾ ಅಂದರೆ ಇದ್ದ ಮನೆ ಕಿತ್ತುಕೊಂಡರು.
5. ಬೆರಳು ತೋರಿಸಿದರೆ ಅಂಗೈ ನುಂಗಿದಂತೆ.
6. ಅಪ್ಪನ ಕಾಲಕ್ಕೆ ಅರಮನೆ, ಮಗನ ಕಾಲಕ್ಕೆ ಬರೀಮನೆ.
Posted by: sundaranadu on: July 22, 2008
ಕನಸಲಿ ಕಾಡುವೆ ಏಕೆ?
ನೀ ಮನಸಲಿ ಮೂಡಿಹೆ ಏಕೆ?
ಈ ಹೃದಯದ ಭಾರ ನೀಗುತಲಿ
ನೀ ದೂರ ಹೋಗಬಾರದೇಕೆ?
ಪ್ರೀತಿಯ ಹೂವು ಅರಳಲು
ಅಡ್ಡಿಗಳೇತಕೆ ಮುಳ್ಳಾದವೊ?
ನಿನ್ನಯ ಪ್ರೀತಿಯ ಅಲೆಗಳಲಿ
ನನ್ನಯ ಕಣ್ಣು ಗಳೇತಕೆ ಮಂಜಾದವೋ?
ಹೋಗು ಹೋಗು ನೀ
ದೂರ ಹೋಗು
ಈ ಹೃದಯಕೆ ಕಾಣದಂತೆ
ಮರೆಯಾಗಿ ಹೋಗು, ಮಂಜಿನ
ಹನಿಯಂತೆ ಕರಗಿ ಹೋಗು
ಮತ್ತೊಬ್ಬಳ ನೆನೆಯದಂತೆ
ಈ ಹೃದಯವ ಕೊಂದು ಹೋಗು
Posted by: sundaranadu on: July 21, 2008
ಕರೆಂಟಿಲ್ಲದೇ ಶಾಕ್ ಹೊಡೆದರೆ ಹೇಗಿರುತ್ತೆ? ಇದೇನು ವಿಚಿತ್ರ ಅನ್ನಬಹುದು. ಈಗ ಕರ್ನಾಟಕದಲ್ಲಿರೋ ಬಹುಪಾಲು
ಜನರಿಗೆ ಇದರ ಅನುಭವ ಆಗಿರಬೇಕು. ಪ್ರತಿದಿನ ಕರೆಂಟ್ (ಪವರ್) ಇಲ್ಲದೇ ಅನುಭವಿಸುತ್ತಿರುವ ಶಾಕ್ ಇದು.
ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆ ಆಗ್ತಾ ಇದೆ. ಮಳೆ ಕಡಿಮೆ ಆದರೆ, ಅಣೆಕಟ್ಟುಗಳಲ್ಲಿಯೂ ನೀರು
ಇರೋದಿಲ್ಲ. ಇದರಿಂದ ಕುಡಿಯೊ ನೀರಿಗೆ, ವ್ಯವಸಾಯಕ್ಕೆ ಮತ್ತು ವಿದ್ಯುತ್ ಉತ್ಪಾದನೆಗೆ, ಎಲ್ಲದಕ್ಕೂ ಕಷ್ಟ.
ಪ್ರತಿದಿನ ಲೆಕ್ಕವಿಲ್ಲದೇ ನಾವು ವ್ಯರ್ಥ ಮಾಡೋ ನೀರು ಮತ್ತು ವಿದ್ಯುತ್ತಿನ ಬೆಲೆ ಈಗ ಎಲ್ಲರಿಗೂ
ಗೊತ್ತಾಗಿರಬೇಕು. ಕೆಲವರಿಗೆ ಇದರ ಅರಿವಿದ್ದರು, ತಿಂಗಳಿಗೆ ಸರಿಯಾಗಿ ಬಿಲ್ ಮಾತ್ರ ಕಟ್ಟುತ್ತಾರೆ,
ಮತ್ತೆ ಬೇಕಾಬಿಟ್ಟಿ ನೀರು, ವಿದ್ಯುತ್ ಬಳಸುತ್ತಾರೆ.
ಒಂದು ಅಂದಾಜಿನ ಪ್ರಕಾರ, ನಮ್ಮ ರಾಜ್ಯದ ಜಲಾಶಯಗಳಲ್ಲಿ ಕೇವಲ ಕೆಲವೇ ದಿನಗಳಿಗಾಗುವಷ್ಟು ನೀರು
ಮಾತ್ರ ಇದೆ. ಅನಂತರ ನೀರು, ವಿದ್ಯುತ್ ಎರಡು ಇಲ್ಲ. ನಮ್ಮ ರೈತರ ಜಮೀನಿನ ಬೆಳೆಯ ನೀರು
ಬೆಂಗಳೂರಂತ ನಗರಗಳಿಗೆ ಕುಡಿಯಲು ನೀಡಲಾಗುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಹಾಗಾಗಿ
ನೀರಿನ ಮೂಲಗಳ ರಕ್ಷಣೆ, ಕೆರೆಗಳ ಒತ್ತುವರಿ ತಪ್ಪಿಸುವುದು, ಮಳೆ ಕೊಯ್ಲು, ಮರಗಳ ರಕ್ಷಣೆ, ಮಿತವಾಗಿ
ನೀರು ಮತ್ತು ವಿದ್ಯುತ್ ಬಳಸುವುದು ನಮ್ಮೆಲ್ಲರ ಕರ್ತವ್ಯ. ಮುಂದಿನ ಪೀಳಿಗೆಗಾಗಿ ನೀರು ಉಳಿಸೋಣ.
Posted by: sundaranadu on: July 18, 2008
ಹೂವಾಗಿ ಬರ್ತೀನಿ ಬಾಲೆ
ಮುಡಿಯಲಿ ಮೂಡಿದು ಬಾರೇಲೇ
ನಿನ್ನ ಮುಡಿಯಾಗೇ ಕುಂತು ನಾ
ಶೋಭೆ ತರ್ತೀನ್ಲೆ
ಸಂಜೆಗೆ ಬಾಡಿ
ಇರುಳ ಚಂದ್ರನಾಗ್ತೀನ್ಲೆ
ನೀನು ಮಲಗೋಕೆ
ಸವಿ ಜೋಗುಳ ಹಾಡುತ ಕೂರ್ತೀನ್ಲೆ
ಕನಸಲಿ ಬರ್ತೀನ್ಲೆ
ನಿನ್ನ ಮನದೊಳಿಳಿತೀನ್ಲೆ
ನಿನ್ನ ನನ್ನ ಪ್ರೇಮ
ಸಮಾಚಾರ ಮಾತಾಡ್ತಾ ಕೂರ್ತೀನ್ಲೆ
ಬೆಳಿಗ್ಗೆ ಎದ್ದ ಕೂಡಲೇ
ಲೋಟದಾಗೆ ಬಿಸಿ ಕಾಫೀಯಾಗಿ ಬರ್ತೀನ್ಲೆ
ನಿನ್ನ ಚೆನ್ದುಟಿಯ ಸವರಿ
ಮನಕೆ ಜೋಶ್ ತರ್ತೀನ್ಲೆ
ಕೊನೆಯವರೆಗೂ ಬರ್ತೀನೆ ಚೆಲುವೆ
ಕಷ್ಟ-ಸುಖಕೂ ಇರ್ತೀನಿ
ಬೆಳದಿಂಗಳ ಚಂದ್ರನ ಮಾಡಿ
ನಿನ್ನ ಬಾಳ್ವೆ ಕಾಯ್ತೀನ್ಲೆ
Posted by: sundaranadu on: July 15, 2008
ಹೈ ಡಿಯರ್ ಲಿಲ್ಲಿ,
ಹೌ ರ್ ಯು? ಈ ಲೆಟರ್ನ ಪೂರ್ತಿಯಾಗಿ ಓದು. ಇದು ನನ್ನ ಮೊದಲ ಲವ್ ಲೆಟರ್. ಹಾಗಾಗಿ ಈ ಲೆಟರ್ ಅನ್ನು ಮೊದಲಿನಿಂದ ಕೊನೆಯವರೆಗೆ ಸಂಪೂರ್ಣವಾಗಿ ಓದು, ನಂತರ ನೀನು ಪ್ರೀತಿಸದೇ ಹೋದರೂ ಪರವಾಗಿಲ್ಲ.
ನಾನು ರಾಜ್, ಎಮ್.ಎನ್.ಸಿ. ಕಂಪನಿ ಒಂದರಲ್ಲಿ ಕೆಲ್ಸ ಮಾಡ್ತಿದ್ದೀನಿ. ನಾನು ಕೆಲ್ಸ ಮಾಡೋ ಕಡೆ ಹತ್ತಾರು, ನೂರಾರು ಹುಡ್ಗೀರನ್ನ ನೋಡಿದ್ದೀನಿ. ನನ್ನ ಮನೆಯ ಎದುರುಗಡೆ ಲೇಡೀಸ್ ಪಿ.ಜಿ. ಇದೆ. ಅಲ್ಲೂ ಹತ್ತಾರು ಹುಡ್ಗೀರು ಇದ್ದಾರೆ. ನೋಡಲಿಕ್ಕೆ ಚೆನ್ನಾಗಿರೋರು ಇದ್ದಾರೆ. ಆದರೆ [...]
Posted by: sundaranadu on: July 4, 2008
ಅತ್ತು ಕರೆದರು ಬಾರದಿದ್ದೆ
ಎಲ್ಲರ ಕಣ್ತಪ್ಪಿಸಿ ಓಡುತಲಿದ್ದೆ
ನಿನ್ನ ನೋಡುವರ್ಯಾರು ಇರಲಿಲ್ಲ
ಅಂದು
ಕಿರು ಮರ, ಹೆಮ್ಮರಗಳ
ಬುಡಮೇಲು ಮಾಡಿ
ರಸ್ತೆ, ಮನೆಗಳ ಹೊಡೆದು
ಹರಿದಾವು ಕಣ್ಣೀರಿನ ಕೋಡಿ
ಇಂದು ನಿನ್ನ ಆಟಾಟೋಪಕೆ
ಮಳೆ ಮಳೆ ಎನುತಲಿದ್ದವರ
ಎಳೆ ಎಳೆ ಉಸಿರ ತೆಗೆದು
ಹಸಿರ ಉತ್ತಿ ಬಿತ್ತುತಲಿರುವೆ
ಮಹಾಮಳೆಯೆ ನಿನಗೆ ನಾ ತಲೆ ಬಾಗುವೆ
ಅಭಿಪ್ರಾಯಗಳು