Posted by: sundaranadu on: September 26, 2008
ಸ್ನೇಹಿತರೊಬ್ಬರು ಕಳುಹಿಸಿದ್ದು. ನೀವು ನೋಡಿ ಆನಂದಿಸಿ………
Posted by: sundaranadu on: September 23, 2008
ಕಥೆ ಹೇಳೋದಾಗಲಿ, ಕಥೆ ಬರೆಯೋದಾಗಲಿ ಒಂದು ಕಲೆ. ಕಥೆಯೊಂದನ್ನ ತೆರೆದು ಓದುತ್ತಾ
ಅಥವಾ ಕೇಳುತ್ತಾ ಕುಳಿತರೆ, ನಮ್ಮ ಎದುರಿಗೆ ಘಟನೆಗಳು ನಡೆಯುತ್ತಿವೆ ಅಥವಾ ನಮ್ಮ
ಕಥೆಯೇನಾದರೂ ನಾವೇ ಓದುತ್ತಿದ್ದೇವೆ ಅನ್ನಿಸಿಬಿಡಬೇಕು. ಕಥೆಯೆನ್ದ್ರೆ ಹಾಗಿರಬೇಕು.
ನಮ್ಮಲ್ಲಿ ಅಂತಹ ಹತ್ತಾರು ಕಥೆಗಾರರು ಇದ್ದಾರೆ, ಇದ್ದರು. ರವಿ ಬೆಳಗೆರೆ, ಕೆ. ಪಿ. ಪೂರ್ಣಚಂದ್ರ
ತೇಜಸ್ವಿ. (ನಾನು ಹೆಚ್ಚಿಗೆ ಓದಿದ್ದು ಇವರ ಬರಹಗಳನ್ನೇ). ಕೆ. ಪಿ. ಪೂ. ಅವರ ಕಾಡಿನ ಕಥೆಗಳನ್ನ
ಓದುತ್ತಿದ್ದರೆ ಕಾಡಿನ ದೃಶ್ಯಗಳು, ಅಲ್ಲಿನ ಆಗಿನ ಜನ ಜೀವನ, ನರಭಕ್ಷಕಗಳ ಭಯಾನಕ
ದೃಶ್ಯಗಳು ನಮ್ಮ ಕಣ್ಮುಂದೆ ಬರುತ್ತವೆ. ರವಿ ಬೆಳಗೆರೆಯವರ ಕಾದಂಬರಿಗಳನ್ನ ಓದೋಕೆ ಶುರು
ಮಾಡಿದರೆ ಅದನ್ನ ಓದಿ ಮುಗಿಸೋ ತನಕ ಏನು ಬೇಡವಾಗುತ್ತೆ. (ನಾನು ಓದಿದ್ದು ’ನೀ ಹೀಂಗ
ನೋಡಬೇಡ ನನ್ನ‘, ನೀವು ಓದಿಲ್ಲದಿದ್ದರೆ ಒಮ್ಮೆ ಓದಿ ನೋಡಿ, ಇದು ನನ್ನ ರಿಕ್ವೆಸ್ಟ್). ಹೀಗೆ ಓದಿಸಿಕೊಳ್ಳೋ
ಲೇಖಕರು ಬೇಕು ನಮಗೆಲ್ಲ. ಬಹುದೊಡ್ಡ ನಿಘಂಟು ಇಟ್ಕೊನ್ದು, ಲೇಖನಗಳನ್ನ, ಕಥೆ, ಕಾದಂಬರಿ
ಓದೋದು ನನಗೆ ಸಾಧ್ಯವಿಲ್ಲ. ಮತ್ತೊಂದು ಹೆಸರನ್ನ ಹೇಳೋದು ಮರೆತೆ. ನರಸಿಂಹಯ್ಯನವರು. ಅವರ
ಪತ್ತೇದಾರಿ ಕಾದಂಬರಿಗಳು ಸೂಪರ್.
ನಮ್ಮ ಬ್ಲಾಗ್‌ಗಿಗರು ಏನು ಕಡಿಮೆ ಇಲ್ಲ. ಅವರು ಬೆರೆಯೋ ಬರಹಗಳು ನಿಜ ಜೀವನದ ಘಟನೆಗಳೇ ಆಗಿವೆ.
ಅವರ ಬರವಣಿಗೆಯ ಶೈಲಿ ಕೂಡ ಚೆನ್ನಾಗಿದೆ. ನನಗೆ ಈಗೆಲ್ಲ ಬರೆಯೋಕೆ ಆಗಲ್ಲ ಅನ್ನೋದೇ ಹೊಟ್ಟೆ
ಉರಿಯ ಮಾತು.
ಏನು ಬರೀಬೇಕು ನನಗೆ ಗೊತ್ತಾಗ್ತಿಲ್ಲ. ನನಗೆ ಅನ್ನಿಸ್ಸಿದ್ದನ್ನ ನಾನು ಬರೆದೆ. ನಿಮಗೆ ಅನ್ನಿಸ್ಸಿದ್ದನ್ನ
ನೀವು ಬರೆಯಿರಿ. ಆದರೆ ನನಗೂ ಕಲಿಸಿಕೊಡಿ.
Posted by: sundaranadu on: September 18, 2008
ಹೊಸತು ದಿನದ ಹೊಸ ಬೆಳಕು ಮೂಡಲಿ
ನಾಳೆಗಳೆಲ್ಲವೂ ಹೊಸತನದಿ ತುಮ್ಬಲಿ
ಎದೆಯ ತುಂಬ ಭಾರತ, ಭಾರತ, ಭಾರತ
ಎಂಬ ಹೃದಯ ಮಿಡಿತ ಗಟ್ಟಿಯಾಗಿ
ಕೇಳಲಿ ಜಗಕೆಲ್ಲ
Posted by: sundaranadu on: September 18, 2008
ಅಂಧಕಾರವೆಂದರೇನೋ ಎಂದು
ತಿಳಿಯ ಬಯಸಿ ಹುಡುಕುತ ಹೊರಟೆ
ಕಂಡು-ಕಂಡವರ ಕೇಳಿದೆ
ಬುಕ್ಕು, ಅಂತರ್ಜಾಲವ ತಡಕಾಡಿದೆ
ಆದರೆ ನನಗೆ ತಿಳಿಯದೇ ಹೋಯಿತು
ನನ್ನ ಕಣ್ಣಿಗೆ ಪೊರೆ ಬಂದಿದೆಯೆಂದು
ಅಭಿಪ್ರಾಯಗಳು