ಅಭಿಮಾನಿ

Archive for October 2008

ಎಚ್ಚರ! ಎಚ್ಚರ!

Posted by: sundaranadu on: October 22, 2008

ಎಚ್ಚರ! ಎಚ್ಚರ!
ನನ್ನ ರೂಮಿಗೆ ಬಲವಾದ ಬಾಗಿಲಿದೆ
ಕಿಟಕಿಗಳಿಗೆ ಬಲವಾದ ಸರಳು ಹೊಡೆಸಿದ್ದೀನೇ
ಮನೆಯ ಹೊರಗೆ ಬಿಗಿಯಾದ ಕಾವಲಿಟ್ಟಿದ್ದೇನೆ
ಇನ್ನು ನೀನೆಂದೂ ಬರಲಾಗದು ಒಳಗೆ
ನಿನಗೆ ಮತ್ತೊಮ್ಮೆ ಅವಕಾಶವಿಲ್ಲ
ನನ್ನ ತೋಳಿಗೆ ಆಂಜನೇಯನ ತಾಯತವಿದೆ
ಕೊಳ್ಳೆಗಾಲದ ಮಂತ್ರವಾದಿಯ ನಿಂಬೇ ಹಣ್ಣಿದೆ
ಕನಸಿನಲ್ಲಿಯೂ ನೀ ಬರಬಾರದೆಂದು
ನಿದ್ರೆ ಗುಳಿಗೆ ತಿಂದಿದ್ದೇನೆ
ಅಂದು ಕಳೆದುಕೊಂಡ ಮನಸ್ಸು
ಇನ್ನೂ ನನಗೆ ಸಿಕ್ಕಿಲ್ಲ
ಆಸೆ-ಕನಸುಗಳಿಗೆ
ನೇಣು ಕುಣಿಕೆ ತೋರಿಸಿದೆ ನೀನು
ಪ್ರೀತಿಯಲಿ ನೊಂದ ಜೀವವ
ಮತ್ತೆ ನೋಯಿಸಲು ಬರಲಾಗದು ನೀನು ಮತ್ತೊಮ್ಮೆ

Tags:

ನಾನುಳಿವೆನೆ?

Posted by: sundaranadu on: October 21, 2008

ಬಿಡು ಹೂಬಾಣ
ನಿನ್ನ ಸನಿಹವಿಲ್ಲದೇ
ಧಹಿಸುತಿದೆ ಮನ
ಕೊಲ್ಲಲಿ
ಕೊಂದು ಝೇನ್ಕರಿಸಲಿ
ಈ ಪ್ರೇಮ
ಎಂದು ಪ್ರಿಯೆ ಮರುಗುತಿರಲು
ನಿನ್ನ ಕೊನ್ದೆಡೆ
ನನಗೆ ಉಳಿವುಂಟೆ
ನಿನ್ನ ಪ್ರೇಮಪಾಶಕೆ
ಸಿಲುಕಿದ ಮೀನು ನಾನು
ಎಂದು ಕೊರಗಿತು
ಪ್ರಿಯತಮನ ಮನ

ದೀಪಾವಳಿಯ ನೆನೆದು

Posted by: sundaranadu on: October 20, 2008

ಕೈಯಲ್ಲಿ ಎಣ್ಣೆ ಕ್ಯಾನ್ ಹಿಡಿದು
ಅಮ್ಮ ಇಟ್ಟ ದೀಪಗಳ ಕಡೆಗೆ ನಡೆದು
ಬತ್ತಿ ಸರಿಮಾಡಿ ಎಣ್ಣೆ ಸುರಿದು
ದೀಪ ಹಚ್ಚಿದ ನೆನಪು…
ಅಪ್ಪ ಮನೆಯ ಹೊರಗೆ
ಬಲ್ಬಿನ ದೀಪದ ಮಾಲೆಯ ಹಚ್ಚಿ
‘ನೋಡೋ ಹೆಂಗೆ‘ ಅಂದಾಕ್ಷಣ
‘ಎಲ್ಲ ಸೂಪರ್, ಆದರೆ ಇನ್ನೊಂದು
ಲೈನ್ ಹಾಕಬೇಕಿತ್ತು‘ ಅಂತಿದ್ದೆ
ಅಪ್ಪನ ಬಳಿ ಹತ್ತು ರೂಪಾಯಿ
ಅಮ್ಮನ ಹತ್ತಿರ ಐದು ರೂಪಾಯಿ
ಅತ್ತು ಕರೆದು ಪೀಕುತ್ತಿದ್ದೆ
ಎದ್ದು ಬಿದ್ದು ಅಂಗಡಿಗೆ
ಓಡಿದ ನೆನಪು
ಕೈಯಲ್ಲಿ ತರಚಿದ ಗಾಯದ ಕುರುಹು…
ಚಿನಕುರುಳಿ, ರಾಕೆಟ್ ಹಿಡಿದು ಆಡಿದ ನೆನಪು
ತಮ್ಮನ ರಾಕೆಟ್ ಎಗರಿಸಿ ಹಾರಿಸಿದ್ದು
ಅದು ಯಾರದೋ ಬೆನ್ನಿಗೆ ಗುದ್ದಿದ್ದು
ನಂತರ ಹೊಡೆದಾಟ…
ಇಂದು ತರಹೇವರಿ ಪಟಾಕಿಯುಂಟು
ಹಬ್ಬಕೆ ಹೋಗುವ ಆಸೆಯೂ ಉಂಟು
ಹಣಕ್ಕೆ ಅಪ್ಪನ ಕೇಳುವ ಹಾಗಿಲ್ಲ
ಬೇಡುತಲಿರುವೆನು ದೇವರ, ಕಂಪನಿ ನನಗೆ
ನಾಲ್ಕು ದಿನ ರಜೆ ನೀಡಲಿ ಎಂದು

ಮುನ್ನುಡಿ

Posted by: sundaranadu on: October 14, 2008

ಮುನ್ನುಡಿಯಲ್ಲಿ ಬರೆದ ಸಾಲುಗಳು
ಓದಿದ್ದೆ ಅಂದು
ಕಥಾಸಂಕಲನವಿದು , ಮಿಗಿಲಾದುದು
ಎಂದು ವಿಮರ್ಶೆಯಲ್ಲಿ
ಬರೆದಿತ್ತು
ಅಚ್ಚರಿ, ಆನಂದ ನನಗೆ
ಒಂದೇ ಸಮನೆ
ಲಘುಬಗನೆ ಓದಿದೆ
ಮೊದಲಿನಿಂದ ಕೊನೆಯವರೆಗೂ
ಅದರಲ್ಲಿ
ಕಥೆ ಹೇಳುವರಾರು
ಯಾರ ಕಥೆ
ಎಂದು ಮಾತ್ರ
ತಿಳಿಯಲಿಲ್ಲ
ನನ್ನ ತಲೆಯಲ್ಲಿ
ಉಳಿದಿದ್ದು
ಮುನ್ನುಡಿ ಬರೆದವ ಮಾತ್ರ


All articles, poems and writings are written by myself (Sundaranadu) except Kannada SMS and Proverbs. ಇಲ್ಲಿ ಬರೆದಿರುವ ಎಲ್ಲ ಲೇಖನಗಳು, ಕವಿತೆಗಳು, ಬರಹಗಳು (ಕನ್ನಡ ಗಾದೆಗಳು ಮತ್ತು ಏಸ್ಸೆಮ್ಮೆಸ್ಸು ಹೊರತುಪಡಿಸಿ) ನನ್ನ (ಸುಂದರನಾಡು) ಸ್ವಂತದ್ದಾಗಿವೆ. ಸುಂದರನಾಡಿಗೆ ಬಂದು ಹೋದವರು Locations of visitors to this page

ಸುಂದರನಾಡಿನ ಅತಿಥಿಗಳು

  • 12,686