Posted by: sundaranadu on: November 20, 2008
ಹಾಯ್ ಲಿಲ್ಲಿ,
ನಾನು ಬರೆಯೋದನ್ನ ನಿಲ್ಲಿಸೋ ಕಾಲ ಬಂದಿದೆ ಅನ್ನಿಸುತ್ತೆ. ಅಷ್ಟಕ್ಕೂ ನಾನು ಏನು ಬರೆದಿಲ್ಲ.
ನಿನಗೆ ಒಂದು ಪತ್ರವನ್ನು ಬಿಟ್ಟು. ಅದನ್ನು ನಾನು ಕೊಡದೇ ಇಟ್ಟುಕೊಂಡುಬಿಟ್ಟೆ (ನಿನಗೆ ಕೊಡಲು ಹೆದರಿಕೆಯಾಗಿ).
ಹೋಗಲಿ ಬಿಡು. ನಾನು ಈಗ ಬರೆಯೋ ಕಾಗದ ಕೂಡ ನಿನಗೆ ತಲುಪದೇ ಇರಬಹುದು, ನಾನು
ನಿನ್ನ ತಲುಪದೇ ಇರೋ ಹಾಗೆ. ಮನಸ್ಸಿನಲ್ಲಿರೋ ಪ್ರೀತಿ ನಿನಗೆ ಅರ್ಥ ಆಗುತ್ತಾ ಅನ್ನೋದೇ
ನನಗಿರುವ ಸಂಶಯ. ಇಷ್ಟು ಕಾಲ ನಿನ್ನ ಹೆಸರಿನಲ್ಲೇ ಕೆಲವು ಸಾಲುಗಳನ್ನ ಬರೆಯುತ್ತಿದ್ದೆ. ಅದಕ್ಕೆ
ಕೆಲವೊಂದು ಸಲ ಪದ್ಯ ಎನ್ನುತ್ತಿದ್ದೆ, ಕೆಲವೊಂದು ಸಲ ಗದ್ಯ ಎನ್ನುತ್ತಿದ್ದೆ. ಮುಂದೆ ಏನೆಂದು ಹೇಳುವುದು?
ನೀನು ನನ್ನ ಬಿಟ್ಟು ಹೊರಟು ನಿಂತಿದ್ದೀಯ. ನನ್ನಲ್ಲಿರುವ ಕೆಲವು ಸಾಲುಗಳು ಹೊರಬರುತ್ತಿವೆ. ಇವೆ ಕೊನೆಯ
ಸಾಲುಗಳೇನೋ? ಬಹುಶಃ ನಿನಗೆ ಅನ್ನಿಸಿರಬಹುದು ನನ್ನಲ್ಲಿ ಪ್ರೀತಿಯೆಂಬುದು ಬಾರಿ ಆಕರ್ಷಣೆಯಾಗಿತ್ತು
ಮತ್ತು ಅದೀಗ ಸತ್ತು ಹೋಗಿದೆಯೆಂದು. ನಿಜ ಹೇಳ್ತೀನೇ, ಲಿಲ್ಲಿ. ಅದು ಸಾಯುವ ಕೂಸಲ್ಲ. ಅದು ಬಂಡೆಗಲ್ಲು.
ಒಡೆದರೆ ಚೂರಾಗಿ ಮಣ್ಣಾಗುವುದು. ನೆಲದ ಮೇಲೋ, ನೀರಿನ ಕೆಳಗೋ ಇದ್ಡುಬಿಡುತ್ತೆ. ಅದರ
ಪಾಡಿಗೆ ಅದು.
ನಾನು ನಿನಗೆ ಇಷ್ಟ ಆಗಿಲ್ಲ ಅನ್ನೋದು ನನಗೆ ಗೊತ್ತು. ಯಾಕೆಂದರೆ ನಿನ್ನಲ್ಲಿರುವ ಹಣ, ಗುಣ, ರೂಪ
ಯಾವುದು ನನ್ನಲ್ಲಿಲ್ಲ. ನಿನಗೆ ಇಷ್ಟವಾಗೋ ಹುಡುಗ ಹೇಗಿರಬೇಕು ಅನ್ನೋದು ನನಗೆ ಗೊತ್ತಿಲ್ಲ. ನಿನ್ನ ತಂದೆ
ತಾಯಿ ತೋರಿಸಿದ ಹುಡುಗನನ್ನೇ ನಿನ್ನ ತಮ್ಮನಿಗೆ ಭಾವನನ್ನಾಗಿ ಮಾಡುತ್ತೀಯೆಂದು ನನಗೆ ಗೊತ್ತು. ಅದೆಲ್ಲ
ಹಾಳಗಿ ಹೋಗಲಿ ಬಿಡು. ಒಟ್ಟಾರೆ ನೀನು ನನ್ನನ್ನ ಮರೆತು, ಮತ್ತೆಂದೂ ಕಾಣಿಸಿಕೊಳ್ಳದಂತೆ ಸಂತೋಷವಾಗಿ
ಹೋಗುತ್ತಿದ್ದೀಯ. ನಾನು ನಿಸ್ವಾರ್ಥ ಪ್ರೇಮಿಯಾಗಬೇಕೆಂದಿದ್ದೆ. ಆದರೆ ನಿನ್ನ ಪ್ರೀತಿ ಹಮ್ಬಲಿಸಿ ಸ್ವಾರ್ಥಿಯಾದೆ.
ನಿನ್ನ ಆಸೆ-ಕನಸುಗಳು ಚಿರಾಯುವಾಗಲಿ. ನನ್ನ ಪ್ರೀತಿ ಸಾಯದಿರಲಿ.
ಕೊನೆಗೊಳ್ಳದ ಪ್ರೀತಿಯಿಂದ
ರಾಜ್
Posted by: sundaranadu on: November 17, 2008
ನಾನು ಪುಸ್ತಕ
ಆ ದೇವ ಲೇಖಕ
ಬರೆಯುತ್ತ ಅವನಿಗೆ ದಣಿವಾಗಲಿಲ್ಲ
ಅವನಿಗೆ ಒಂದೇ ಪುಸ್ತಕವಲ್ಲ…
ಅವನು ಬರೆದದ್ದು
ಮುಂದೆ ಬರೆಯುವುದು
ಎಲ್ಲ ಅವನಿಗೆ ಗೊತ್ತಂತೆ
ಅವನು ಏನೆಲ್ಲಾ ಬರೆದ ಎಂದು
ಈಗ ನನಗೂ ಗೊತ್ತಾಗಿದೆ
ಅವನು ಬರೆದ ಪುಟಗಳಲ್ಲಿ
ಯಾರ್ಯಾರೋ ಬಂದು reffer ಮಾಡಿದರು
ನನ್ನ ಸಾಲುಗಳನ್ನ ತಮ್ಮ ಸಂಗದಿಂದ
ಗೀಚಿ ಹೋದರು
ನೆನಪುಗಳು ಅಲ್ಲಿ ಮಾಸದೆ ಉಳಿದವು
ಕೆಲವರು ಬಂದ ಮೇಲೆ
ಹಾಳೆಗಳು ಹರಿದವು
ಕೆಲವು ಗೆದ್ದಲಿಗೆ ಮೃಷ್ಟಾನ್ನ ಭೋಜನವಾಯಿತು
ನನ್ನ ನೆನಪುಗಳ ಕೆದಕಲು
ಬುಕ್ಮಾರ್ಕರ್ಗಳು ಹತ್ತೆಂಟು ಉಂಟು
ಇಷ್ಟಾದರೂ ಮುಗಿಯಲಿಲ್ಲ
ಅವನ ಬರವಣಿಗೆ
ಲೇಖನಿಯ ಇಂಕಿನ ಜೋರಿನ ಮೆರವಣಿಗೆ
ಈ ಪುಸ್ತಕದ ಮುನ್ನುಡಿ…
ಬರವಣಿಗೆ ಮುಗಿದ ಮೇಲೆ
ವಿಮರ್ಶೆ- ಟೀಕೆ ಯಾರದೋ?
Posted by: sundaranadu on: November 12, 2008
ಈ ಚಳಿಗಾಲದಲ್ಲಿ ಮೈ ಸ್ವಲ್ಪ ಚುರುಕು ಕಡಿಮೆ. ಅದರಲ್ಲಿಯೂ ನನ್ನಂಥ ಸೋಮಾರಿಗಳಿಗೆ ಸ್ವಲ್ಪ ಜಾಸ್ತಿನೆ. ಬೆಳಿಗ್ಗೆ ಎದ್ದು ರೆಡಿಯಾಗಿ ತಿಂಡಿಗೆ ಹೊರಡುವ ವೇಳೆಗೆ ಜನರೆಲ್ಲ ಆಫೀಸಿನಲ್ಲಿ ಕೆಲ್ಸಕ್ಕೆ ಹಾಜರಾಗಿರುತ್ತಾರೆ, ಆಗ್ತಿರ್ತಾರೆ. ಅಂದರೆ ಬೆಳಿಗ್ಗೆ ೯ ಅಥವಾ ೧೦ ಗಂಟೆಗೆ.
ನಾನು ಕನ್ನಡ ದಿನಪತ್ರಿಕೆಗಳು ಹಾಗು ಬ್ಲಾಗುಗಳನ್ನು ನೋಡುತ್ತಲೇ ಇರುತ್ತೀನಿ. ಈಗ ಅದು ಗೀಳು ಅಥವಾ ತುಂಬ ಅಭ್ಯಾಸ ಆಗಿ ಹೋಗಿದೆ. ಯಾವುದಾದರು ಹಬ್ಬಗಳು ಬಂದಾಗ, ಭಾರತ ಯಾವುದಾದರು ಕ್ರೀಡೆಯಲ್ಲಿ ಜಯಗಲಿಸಿದಾಗ, ಯಾರಾದರು ಮೃತರಾದಾಗ ವಿಶೇಷವಾದ ಲೇಖನಗಳು ಪುಂಖಾನುಪುಂಖವಾಗಿ ಬರುತ್ತವೆ. [...]
Posted by: sundaranadu on: November 6, 2008
ಕಲ್ಲು ಹೃದಯವಾಯಿತೆ?
ನಿನ್ನದು ನನ್ನ ಪ್ರೀತಿಗೆ
ನೀರ ಗುಳ್ಳೆಯಾಯಿತೆ ನನ್ನ ಪ್ರೀತಿ
ಕ್ಷಣ ಕಾಲವು ಉಳಿಯಲಿಲ್ಲ
ಮೂಡಿದಂತೆ ಭಾವಿಸುತಿರಲು
ಹೆಸರಿಲ್ಲದಂತೆ ಅಳಿಸೋಯಿತಲ್ಲ
ಬಂಡೆಯೊಳಗಿನ ಅಗ್ನಿ ಮಾಡಿ
ಕಾಪಾಡಿದ್ದೆ ನನ್ನ ಪ್ರೀತಿ
ಹೃದಯದ ಒಳಗೆ ಇಟ್ಟು
ಹಗಲು ರಾತ್ರಿ ಕಾದಿದ್ದೆ ನನ್ನ ಪ್ರೀತಿ
ಚೂರು ಮಾಡಿದೆಯಲ್ಲೇ ಈ ಹೃದಯ
ಆರದೆ ಉಳಿಯಿತಲ್ಲೆ ಈ ಗಾಯ
ನೋವಿದೆ ಮನದಲಿ
ನನ್ನ ಕಾಡುತ ಹಗಲಿರುಳು
ಎಲ್ಲಿಯಾದರೂ ಇರಲಿ ನೀನು
ನಿನ್ನ ಸುಖವೊಂದೆ ನನಗೆ ಸಾಕು
ನಿನ್ನ ಒಳಿತಿಗಾಗಿಯೇ ಈ ಪ್ರೀತಿ
ದೇವನಾಡುತ ಕುಳಿತನು ನೋಡುತ ಈ ರೀತಿ
ಅಭಿಪ್ರಾಯಗಳು