ಅಭಿಮಾನಿ

ಎಳ್ಳು-ಬೆಲ್ಲದ ಹುಡುಗಿ

Posted by: sundaranadu on: January 12, 2009

ಕಾದು ಕುಳಿತಿಹೆನು ಹುಡುಗಿ
ನೀ ಬಂದೆ ಬರುವಿಯೆಂದು
ಎಳ್ಳು-ಬೆಲ್ಲ ತರುವಿಯೆಂದು

ಹೋದ ಸಲ ಜಡೆಯೆಳೆದು
ಕೆಣಕಿದ್ದು ನೆನಪಿದೆಯ?
ನಿನ್ನ ಬಣ್ಣ ಬಣ್ಣದ
ಮಾತಿಗೆ ಮರುಳಾಗಿ
ಬೆಲ್ಲದಂತಹ ಮುತ್ತ ನೀಡಿದ್ದು
ಮರೆತಿರುವೆಯ ಹುಡುಗಿ?

ಎಳ್ಳು-ಬೆಲ್ಲದ ಸಂಕ್ರಾಂತಿಯಂದು
ಮನೆಗೆ ನೀ ನಲಿಯುತ ಬಂದು
‘ಆಂಟಿ’ ಎಂದು ಮೆಲ್ಲಗೆ ಕರೆಯಲು
ಮೂಲೆಯಲಿ ಅವಿತು ಕುಳಿತ ನಾನು
ಎದ್ದೋಡಿ ಬರುವೆ
ನಿನ್ನ ಕೂಡಿ ನಲಿವೆ

ನನ್ನ ಅಮ್ಮನಿಗೆ ನೀನೇನು
ಹೇಳುವ ಹಾಗಿಲ್ಲ
ಸೊಸೆಯಾಗುವವಳ ಗುಟ್ಟು ರಟ್ಟಾಗುವುದಲ್ಲ
ಅಮ್ಮನಿಗೆ ಒಳ್ಳೆಯ ಮಗನು ನಾನು
ನೀನೇಳಲು ಅವಳು ನಂಬೋದಿಲ್ಲ

ಕಾಯುತಿರುವೆನು ಹುಡುಗಿ
ಕಾಯಿಸದಿರು ನನ್ನ ಬೆಡಗಿ
ನಿನ್ನ ಬರುವಿಕೆಯ ಘಳಿಗೆ ಎಣಿಸುತಿಹೆನು
ನಿನ್ನಾಗಮನದಿನ್ದಲೆ ನಾನು ಬದುಕುವೆನು

2 Responses to "ಎಳ್ಳು-ಬೆಲ್ಲದ ಹುಡುಗಿ"

ಆ ಹುಡುಗಿ ಬಂದು ಎಳ್ಳು ಬೆಲ್ಲ ಕೊಟ್ಟ್ರ ನನ್ನ ಮರ್‍ತೀರಿ..ಜೋಕಿ…!
-ನಾಗು,ತಳವಾರ್.

Nimmanna mareyuva haagilla. nimma protsahave namage mukhya.

Leave a Reply

All articles, poems and writings are written by myself (Sundaranadu) except Kannada SMS and Proverbs. ಇಲ್ಲಿ ಬರೆದಿರುವ ಎಲ್ಲ ಲೇಖನಗಳು, ಕವಿತೆಗಳು, ಬರಹಗಳು (ಕನ್ನಡ ಗಾದೆಗಳು ಮತ್ತು ಏಸ್ಸೆಮ್ಮೆಸ್ಸು ಹೊರತುಪಡಿಸಿ) ನನ್ನ (ಸುಂದರನಾಡು) ಸ್ವಂತದ್ದಾಗಿವೆ. ಸುಂದರನಾಡಿಗೆ ಬಂದು ಹೋದವರು Locations of visitors to this page

ಸುಂದರನಾಡಿನ ಅತಿಥಿಗಳು

  • 12,167