Posted by: sundaranadu on: January 19, 2009
ಅವನು ನಮ್ಮೂರ ಹುಡುಗ
ಪ್ರೀತಿಯಲಿ ಒಂಟಿಸಲಗ
ತನ್ನವರ ಕಾಯೋ ಗಿಡುಗ
ಗುಣದಲ್ಲಿ ಅಪರಂಜಿಯೋ
ಮಾತಿನಲ್ಲೇ ಗೆಲ್ಲೋ ಜಾಣ
ಶೌರ್ಯದಲ್ಲಿ ವೀರ ರಾಣ
ಪ್ರೀತಿಗೆ ಸೋಲುವ ಗುಣದ
ವಾತ್ಸಲ್ಯದ ಕಾರನ್ಜಿಯೋ
ರೂಪದಲ್ಲಿ ಮನ್ಮಥನಿವನು
ನೀತಿಯಲಿ ಪಂಡಿತನಿವನು
ರೀತಿಯಲಿ ಎಲ್ಲರಿಗು ಮಾದರಿ
ನಡೆ ಬಂಗಾರದವನು
ನಮ್ಮೂರ ಅಪರಂಜಿಗೆ
ಮಲೆನಾಡ ಗುಣಸಂಪನ್ನಗೆ
ಮುತ್ತಿನಂಥ ಜೋಡಿಯಾಗೋ
ಹುಡುಗಿ ಬೇಕಾಗಿದೆ
January 20, 2009 at 8:03 am
ನಿಮ್ಮ ಹುಡುಗ ಚನ್ನಾಗಿದ್ದಾನೆ ಬಿಡಿ ಎರಡನೇ ಮಾತಿಲ್ಲ. ಕಲ್ಲರೆ ಮಹೇಶ ರ ಮಗಳು “ಬೆಳಕು” ತುಂಬಾ ಸುಂದರವಾಗಿದ್ದಾಳೆ: ನಿಮ್ಮ ಹುಡುಗನಿಗೆ ಜೋಡಿಯಾಗಬಹುದು..ಒಮ್ಮೆ, ಕಲ್ಲೆರೆ ಮನೆಗೆ ಹೋಗಿಬನ್ನಿ..ನಾನು ಹೇಳಿ ಕಳುಹಿಸಿದ್ದೇನೆಂದು ಹೇಳಿ ಅಡ್ಡಿ ಇಲ್ಲ.
ನಾಗು,ತಳವಾರ್.