Posted by: sundaranadu on: January 28, 2009
ಬೆಳಕು ಮೂಡುವ ಮುನ್ನ
ಓಡುವೆ ನೀನು ಎಲ್ಲಿಗೆ?
ಇನ್ನೂ ರವಿ ಬಂದಿಲ್ಲ
ಉಷೆ ಅವನ ಜೊತೆಗಿಲ್ಲ
ನನ್ನ ಕನಸಲ್ಲಿ ತುಸು ಹೊತ್ತು
ನಿಲ್ಲದೆ ಹೋಗುವೆ ಈಗ ಎಲ್ಲಿಗೆ?
ನೀ ಕದ್ದ ಕನಸುಗಳು
ಬೇಕಿವೆ ಇಂದಿಗೆ
ನೀ ನನ್ನ ಬಿಟ್ಟು ಓಡಬೇಡ ಮಲ್ಲಿಗೆ
ನಾವಿಬ್ಬರು ಕೂಡಿ ಹೆತ್ತು
ಸಾಕಿ ಸಲುಹಿದ ಕನಸುಗಳ
ಕದ್ದು ಓಡುವುದಾದರು ಎಲ್ಲಿಗೆ?
ಕನಸ ರಾತ್ರಿಗಳಿಗೆ
ಬೆಳಕಿಲ್ಲೆಂದು ಅನ್ಜಬೇಡ
ಮನಸ ಬತ್ತಿ ಮಾಡಿ ಹಚ್ಚಿಹೆನು
ನನ್ನ ಜೊತೆ ನಡೆ ಮಲ್ಲಿಗೆ
ನೀನು ನಡೆಯುವರೆಗೂ
ಬರುವೆ ಜೊತೆಗೆ
ಆದರೆ,
ನನ್ನ ಬಿಟ್ಟೊಡಬೇಡ ಮನಮಲ್ಲಿಗೆ
super! kanasuna jote maataadiddu hosa bhaavane.
thumba chenaagidhe
kavana tumba chennagide. ege innastu kavana nimminda moodi barali. all the best.
February 3, 2009 at 4:33 pm
ಹೊರಟೆ ನೀನು ಎಲ್ಲಿಗೆ …..? ಪದ್ಯ ಚನ್ನಾಗಿ ಮೂಡಿ ಬಂದಿದೆ. ಕೊನೆಯಲ್ಲಿ ಅದ್ಯಾಕೋ ಭಾವನೆ ಕೊಂಚ ವಿಚಲಿತಗೊಂಡಿದೆ..!
-ನಾಗು,ತಳವಾರ್.