Posted by: sundaranadu on: June 28, 2009
ನೂರು ಊರು ಸುತ್ತಿದರೂ
ನೂರು ದಾನ ಮಾಡಿದರೂ
ಸಿಗಲಿಲ್ಲ ಪುಣ್ಯ
ನಿನ್ನ ಕೈ ಹಿಡಿದ ಮಾತ್ರಕೆ
ನಾನಾಗುವೆ ಧನ್ಯ
ಕನಕ, ಪುರಂದರ ಹಾಡಿದರೂ
ರವಿವರ್ಮನ ಕಲೆ ಮೆರೆದರೂ
ಸವಿಯಲಾಗಲಿಲ್ಲ ಸವಿಯ
ನಿನ್ನ ಕಂಡ ಮಾತ್ರಕೆ
ಹರಿವುದು ಪ್ರೇಮಕಾವ್ಯ
ಹುಟ್ಟಿನಿಂದಲೂ ಜಗವ ಕಂಡರೇನೂ
ಕೀರ್ತಿಶಿಖರದಲಿ ಕುಳಿತು ಮರೆದರೇನೂ
ಸರಿಸಾಟಿಯಾಗುವುದೇ
ನೀ ಧಾರೆ ಎರೆವ ಪ್ರೀತಿಗೆ
ಕಣ್-ಮನ ಸೆಳೆವ ನಿನ್ನ ಕುಡಿ ನೋಟಕೆ
Posted by: sundaranadu on: June 23, 2009
ಅಂಗಳದಲಿ ತಿಂಗಳು ಇಳಿದರು
ಕಾಣಲಿಲ್ಲ ನಿನ್ನ ಕಂಗಳು
ನಿನ್ನ ವಿರಹದಲ್ಲಿಯೇ
ಬರೆದು ಬರೆದು
ಸೋತವು ನನ್ನ ಕೈಗಳು
ಹತ್ತಾರು ಪ್ರೇಮ ಪುಸ್ತಕಗಳ
ನೂರೆಂಟು ಸಾಲುಗಳ ಹೆಕ್ಕಿ ತಂದೆ
ಅಕ್ಕರೆಯಲಿ ಅಕ್ಷರವ ಜೋಡಿಸುತ
ಬಳಲಿದೆ, ಬಾಡಿ ಬೆಂಡಾದೆ
ವಿರಹಗೀತೆ ಪ್ರೇಮಗೀತೆ ಆಗದೆ
ಉಳಿದೋಯಿತು, ಹರಿದು ಕಡಲಾಯಿತು
ನೂರಾರು ಪ್ರೇಮಿಗಳ ಕಂಡು
ಮಾತಾಡಿಸಿದೆ, ಕೇಳಿ ತಿಳಿದೆ
ಹೇಗೆಂದು ನಿನ್ನ ಒಲಿಸುವುದು
ಕಥೆ, ಕವನ, ಕಾವ್ಯ
ಓದುವುದು ಬಿಟ್ಟೆ, ಸುಟ್ಟೆ
ನೀನಿಲ್ಲದೇ ಕವಿತೆಗಳೆಲ್ಲ ಜಾಳಾದವು
ಕನಸಲ್ಲು ಕಣ್ಣು ನೀರಾದವು
ಅಭಿಪ್ರಾಯಗಳು