ಅಭಿಮಾನಿ

Archive for the ‘Kannada Gaadegalu’ Category

ಕನ್ನಡ ಗಾದೆಗಳು

Posted by: sundaranadu on: July 25, 2008

1. ಆಡಿ ಪೋಕರಿ ಅನ್ನಿಸಿಕೊಳ್ಳುವುದಕಿಂತ ಆಡದೆ ಮೂಗ ಅನ್ನಿಸಿಕೊಳ್ಳುವುದು ಮೇಲು.
2. ಮಾತಿಗೆ ಸಾಯದೇ ಇದ್ದೋನೂ ಏಟಿಗೂ ಸಾಯುವುದಿಲ್ಲ.
3. ಹಾವು ಸಾಯಬಾರದು, ಕೋಲು ಮುರೀಬಾರದು.
4. ಇತ್ತಿತ್ತ ಬಾ ಅಂದರೆ ಇದ್ದ ಮನೆ ಕಿತ್ತುಕೊಂಡರು.
5. ಬೆರಳು ತೋರಿಸಿದರೆ ಅಂಗೈ ನುಂಗಿದಂತೆ.
6. ಅಪ್ಪನ ಕಾಲಕ್ಕೆ ಅರಮನೆ, ಮಗನ ಕಾಲಕ್ಕೆ ಬರೀಮನೆ.

ವೇದ ಸುಳ್ಳಾದರು ಗಾದೆ ಸುಳ್ಳಾಗದು.
ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
ಎತ್ತು ಏರಿಗೆಳೀತು, ಕೋಣ ನೀರಿಗೆಳೀತು.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ. 
ಕೈ ಕೆಸರಾದರೆ ಬಾಯಿ ಮೊಸರು.
ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
ಮಾತು ಬೆಳ್ಳಿ, ಮೌನ ಬಂಗಾರ.
ಮಾತು ಮನೆ ಮುರಿತು, ತೂತು ಓಲೆ ಕೆಡಿಸಿತು.
ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
ಮನೆಗೆ ಮಾರಿ, ಊರಿಗೆ ಉಪಕಾರಿ.
 ಆಳಾಗಬಲ್ಲವನು ಅರಸನಾಗಬಲ್ಲ.
 ಊರಿಗೆ ದೊರೆ ಆದರೂ ತಾಯಿಗೆ ಮಗನೆ.
 ಹೆತ್ತವರಿಗೆ ಹೆಗ್ಗಣ ಮುದ್ದು.
 ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆ) ಬಾಗಿಲು ಹಾಕಿದರಂತೆ.
 ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?
 ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.
 ಮನಸಿದ್ದರೆ ಮಾರ್ಗ.
ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ.
ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ.
ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ.
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
ಬೆಕ್ಕು ಕಣ್ಮುಚ್ಚಿ ಹಾಳು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.
ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು.
ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು.
ಚಿಂತೆ ಇಲ್ಲದವನಿಗೆ ಸನ್ತೇಲು ನಿದ್ದೆ.
ದೇವರು ವರ ಕೊಟ್ಟರು ಪೂಜಾರಿ ಕೊಡೆಬೇಕಲ್ಲ.
ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ.
ತುಂಬಿದ ಕೊಡ ತುಳುಕುವುದಿಲ್ಲ.
ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.
ಹುಚ್ಚರ ಮದುವೆಯಲ್ಲಿ ಉನ್ಡೋನೆ ಜಾಣ.
ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.


All articles, poems and writings are written by myself (Sundaranadu) except Kannada SMS and Proverbs. ಇಲ್ಲಿ ಬರೆದಿರುವ ಎಲ್ಲ ಲೇಖನಗಳು, ಕವಿತೆಗಳು, ಬರಹಗಳು (ಕನ್ನಡ ಗಾದೆಗಳು ಮತ್ತು ಏಸ್ಸೆಮ್ಮೆಸ್ಸು ಹೊರತುಪಡಿಸಿ) ನನ್ನ (ಸುಂದರನಾಡು) ಸ್ವಂತದ್ದಾಗಿವೆ. ಸುಂದರನಾಡಿಗೆ ಬಂದು ಹೋದವರು Locations of visitors to this page

ಸುಂದರನಾಡಿನ ಅತಿಥಿಗಳು

  • 12,686