Posted by: sundaranadu on: November 6, 2009
ಇಂಥ ಒಂದು ಸುಂದರವಾದ, ಸರಳವಾದ ಅಂಕಣವನ್ನು ನೀಡಿದ್ದಕ್ಕೆ ಕನ್ನಡಪ್ರಭ ಪತ್ರಿಕೆಗೆ ಧನ್ಯವಾದಗಳು.
ಎಲ್ಲೆಡೆ ಕನ್ನಡ ಉಳಿಯಲಿ, ಬೆಳೆಯಲಿ ಮತ್ತು ಹರಡಲಿ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ನಿಮ್ಮ ಅಭಿಮಾನಿ,
ರಾಜಣ್ಣ
Posted by: sundaranadu on: November 12, 2008
ಈ ಚಳಿಗಾಲದಲ್ಲಿ ಮೈ ಸ್ವಲ್ಪ ಚುರುಕು ಕಡಿಮೆ. ಅದರಲ್ಲಿಯೂ ನನ್ನಂಥ ಸೋಮಾರಿಗಳಿಗೆ ಸ್ವಲ್ಪ ಜಾಸ್ತಿನೆ. ಬೆಳಿಗ್ಗೆ ಎದ್ದು ರೆಡಿಯಾಗಿ ತಿಂಡಿಗೆ ಹೊರಡುವ ವೇಳೆಗೆ ಜನರೆಲ್ಲ ಆಫೀಸಿನಲ್ಲಿ ಕೆಲ್ಸಕ್ಕೆ ಹಾಜರಾಗಿರುತ್ತಾರೆ, ಆಗ್ತಿರ್ತಾರೆ. ಅಂದರೆ ಬೆಳಿಗ್ಗೆ ೯ ಅಥವಾ ೧೦ ಗಂಟೆಗೆ.
ನಾನು ಕನ್ನಡ ದಿನಪತ್ರಿಕೆಗಳು ಹಾಗು ಬ್ಲಾಗುಗಳನ್ನು ನೋಡುತ್ತಲೇ ಇರುತ್ತೀನಿ. ಈಗ ಅದು ಗೀಳು ಅಥವಾ ತುಂಬ ಅಭ್ಯಾಸ ಆಗಿ ಹೋಗಿದೆ. ಯಾವುದಾದರು ಹಬ್ಬಗಳು ಬಂದಾಗ, ಭಾರತ ಯಾವುದಾದರು ಕ್ರೀಡೆಯಲ್ಲಿ ಜಯಗಲಿಸಿದಾಗ, ಯಾರಾದರು ಮೃತರಾದಾಗ ವಿಶೇಷವಾದ ಲೇಖನಗಳು ಪುಂಖಾನುಪುಂಖವಾಗಿ ಬರುತ್ತವೆ. [...]
Posted by: sundaranadu on: June 17, 2008
ಮನೆಯೇ ಮಂದಿರವಾಗಲಿ
ಮನಸು ದೇವರಾಗಲಿ
ನಿಮ್ಮ ಪ್ರೀತಿ, ಹಾರೈಕೆಗಳೇ
ನನಗೆ ದಾರಿದೀಪವಾಗಲಿ
Posted by: sundaranadu on: May 6, 2008
ವೇದ ಸುಳ್ಳಾದರು ಗಾದೆ ಸುಳ್ಳಾಗದು.
ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
ಎತ್ತು ಏರಿಗೆಳೀತು, ಕೋಣ ನೀರಿಗೆಳೀತು.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ.
ಕೈ ಕೆಸರಾದರೆ ಬಾಯಿ ಮೊಸರು.
ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
ಮಾತು ಬೆಳ್ಳಿ, ಮೌನ ಬಂಗಾರ.
ಮಾತು ಮನೆ ಮುರಿತು, ತೂತು ಓಲೆ ಕೆಡಿಸಿತು.
ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
ಮನೆಗೆ ಮಾರಿ, ಊರಿಗೆ ಉಪಕಾರಿ.
ಆಳಾಗಬಲ್ಲವನು ಅರಸನಾಗಬಲ್ಲ.
ಊರಿಗೆ ದೊರೆ ಆದರೂ ತಾಯಿಗೆ ಮಗನೆ.
ಹೆತ್ತವರಿಗೆ ಹೆಗ್ಗಣ ಮುದ್ದು.
ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆ) ಬಾಗಿಲು ಹಾಕಿದರಂತೆ.
ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?
ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.
ಮನಸಿದ್ದರೆ ಮಾರ್ಗ.
ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ.
ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ.
ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ.
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
ಬೆಕ್ಕು ಕಣ್ಮುಚ್ಚಿ ಹಾಳು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.
ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು.
ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು.
ಚಿಂತೆ ಇಲ್ಲದವನಿಗೆ ಸನ್ತೇಲು ನಿದ್ದೆ.
ದೇವರು ವರ ಕೊಟ್ಟರು ಪೂಜಾರಿ ಕೊಡೆಬೇಕಲ್ಲ.
ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ.
ತುಂಬಿದ ಕೊಡ ತುಳುಕುವುದಿಲ್ಲ.
ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.
ಹುಚ್ಚರ ಮದುವೆಯಲ್ಲಿ ಉನ್ಡೋನೆ ಜಾಣ.
ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
ಅಭಿಪ್ರಾಯಗಳು