ಅಭಿಮಾನಿ

ನಾ ನಿಮಗೆ…


3 ಟಿಪ್ಪಣಿಗಳು

ನೆನಪಾಗುತಿದೆ ಯಾಕೋ ಇಂದು……

ನೆನಪಾಗುತಿದೆ ಯಾಕೋ ಇಂದು
ನಲುಗಿ ಹೋದ ಪ್ರೀತಿಯೂ
ನೋವಲ್ಲು ಕಚಗುಳಿಯಿಟ್ಟು
ನಗಿಸಿ ಹೋದ ಪ್ರೀತಿಯೂ

ನೆನೆಯ ಬಾರದೆಂದೂ ಬಯಸಿದಷ್ಟು
ನೆನಪಾಗುವೆ ಯಾಕೆ ಪ್ರೀತಿಯೆ?
ನೋವಲ್ಲು ನಲಿವಲ್ಲು ಕಾಡುವುದೇ
ನಿನ್ನ ರೀತಿಯೇ

ನೆನಪಾಗುತಿದೆ ಯಾಕೋ ಇಂದು

ನಾನಂದುಕೊಂಡಷ್ಟು ದೂರ ನೀನಿಲ್ಲ
ನಾನು ಕರೆದರು ನೀ ಬರುವ ಹಾಗಿಲ್ಲ
ನನ್ನೊಲವೆಲ್ಲ ನೀನೆ ಆದರೂ
ನೀನಿಲ್ಲದೇ ಏನು ಇಲ್ಲಿಲ್ಲ

ನರಳುತಿದೆ ಪ್ರೀತಿಯಲಿ ಮನವು ಇಂದು……….

Advertisements


ನಿಮ್ಮ ಟಿಪ್ಪಣಿ ಬರೆಯಿರಿ

ಗಣೇಶ

ಎಷ್ಟು ನೆನೆದರು ಮುಗಿಯದು ತಂದೆ
ನಿನ್ನಯ ಗುಣಗಾನ
ಸರ್ವರಲು ನೆಲೆಸಿ ಕಾಪಾಡುತಲಿರುವೆ
ಜಯ ಶ್ರೀ ಗಜಾನನ

 

 ನಿನ್ನ ನಾಮವ ನೆನೆಯುತಲಿದ್ದರೆ
ಇಲ್ಲ ಯಾವ ಪಾಪಭಯ
ನೂರೆಂಟು ನಾಮದ ಗುರುವೇ
ನೀ ಮುನಿದರೆ ಜಗ ಪ್ರಳಯ
 
 ಸಿದ್ಧಿಗೂಬುದ್ಡಿಗೂ
ಅಧಿನಾಯಕ ನೀನೆ
ಕಷ್ಟಗಳ ತೊಲಗಿಸಿ
ದಾರಿಯ ತೋರೊ ವಿನಾಯಕನೆ


ನಿಮ್ಮ ಟಿಪ್ಪಣಿ ಬರೆಯಿರಿ

ಮರೆ ನೀ ಮೌನ

ಮೌನ ಮುರಿಯಬಾರದೇ
ಮನದ ಮಾತು ಕೇಳದೇ
ಮನವ ಕದ್ದು ಅದರೊಳಗಿದ್ದು
ಮೆರೆವ ಪ್ರೀತಿಯೇ 

ಮಾತೆ ಮುತ್ತು
ಮಾತೆ ಮೃತ್ಯು
ಮರೆತು ಹೋಯಿತೆ
ಮಾತನಾಡದೇ ಮೃತ್ಯು ತೋರಿಸಿ
ಮೆರೆವ ಪ್ರೀತಿಯೇ 

ಮೌನ ರಾಗವ
ಮರೆಯೇ ನನ್ನ ಮಲ್ಲಿಗೆ
ಮಾತು ಕೊಡುವೆನು ನಿನಗೆ
ಮತ್ತಾರ ನೆನೆಯೆನು
ಮುಗಿಲ ಅಪ್ಸರೆ ಬಂದರೂ
ಮರೆವುದಿಲ್ಲ ನನ್ನ ಪ್ರೀತಿಯೇ


1 ಟಿಪ್ಪಣಿ

ಪ್ರೀತಿಯ ಸುನಾಮಿ

ಕಡಲ ತೆರದಿ ಮನಕಪ್ಪಳಿಸುತಿದೆ
ಪ್ರೀತಿಯ ಅಲೆಗಳು
ಪ್ರತಿದಿನವೂ ಹುಣ್ಣಿಮೆಯಾಗಿ
ಅಲ್ಲ
ಇದು ಪ್ರತಿದಿನವೂ ಅಪ್ಪಳಿಸುತಿರುವ ಸುನಾಮಿ
ತಡೆದು ನಿಲ್ಲಿಸ್ಸುವ ಸಹನೆಯ
ತದೆಗೋಡೆಗಳಿಲ್ಲ

ಎಲ್ಲ
 ತೊರೆದು 
ಓಡಲು
ಬೇರೆ
 
ದಾರಿಗಳಿಲ್ಲ
ಗೋಡೆ
 ಒಡೆದಿಹುದುದಾರಿ 
ಮುಚ್ಚಿಹವು
ಮಹಾ
 ಪ್ರೀತಿಯ ಪ್ರಳಯದ ಪ್ರಮಾದಕೆ
  


1 ಟಿಪ್ಪಣಿ

ಸ್ನೇಹದ ಕಡಲು

ಬಾ ನಾವಿಕನೆ
ಸ್ನೇಹದ ಒಡಲಿನ ಜೇನಿನ ಕಡಲಿದು
ಇಂದುನಾಳೆಗೆ ಮುಗಿಯದು
ನಿತ್ಯ ನಿರಂತರ ಅನಂತ
ದೂರಕು ತೋರುವ ಕಡಲ ಒಡಲಿದು

ಉಬ್ಬರದಿ ಅಬ್ಬರಿಸುವ ಕಡಲ
ಆಳ ನೋಡಬೇಡ
ಮೌನವನ್ನು ಮುರಿಯುವ
ಭೋರ್ಗರೆತಕೆ ಅನ್ಜಬೇಡ
ಸ್ನೇಹದ ಆಳವಿದು
ಸವಿನೆನಪಿನ ಭೋರ್ಗರೆತವಿದು
ಸ್ನೇಹ ಸಾಗರವೆಂಬುದು
ನೆನಪಿನ ಬುತ್ಟಿಯ ಮುತ್ತು ಪಚ್ಚೆಗಳ ಗೂಡು
ಒಡಲಿನೊನ್ದಿಗೆ ಸುಳಿವ
ಸವಿನೆನಪಿನ ಹಾಡು
ಗೆಳೆತನದ ಸೆಲೆಗೆ
ಮನಮಿಡಿಯುವ ತಾಳಕೆ
ಪ್ರೀತಿವಾತ್ಸಲ್ಯದ ಹಾಡು.


ನಿಮ್ಮ ಟಿಪ್ಪಣಿ ಬರೆಯಿರಿ

ಕಾಫೀ ಮತ್ತು ಪಕೋಡ

ಮಳೆಗಾಲ   ಅಂದ್ರೆ   ಸುರ್ರನೆ   ಸುರಿಯೋ   ಮಳೆ ವಟಗುಟ್ಟುವ   ಕಪ್ಪೇಗಳು ಮಳೆ   ನಿಂತರು   ನಿಲ್ಲದ   ಮರದ   ಹನಿಗಳು ಕಿಟಕಿಯ   ಹೊರಗೆ   ಮತ್ತೊಂದು   ಹೊಸ   ಜಗತ್ತು    ಅನಾವರಣಗೊಂಡ   ಹಾಗಿರುತ್ತೆ ಮಲೆನಾಡಲ್ಲಿ ಮಳೆಯ   ಹಾಡಿನ   ನಡುವೆ   ಸೂರ್ಯನ   ಬಿಸಿಲನ್ತು   ಮಳೆ   ಮುಗಿಯೋವರೆಗೆ   ಮರೆತೆ   ಬಿಡಬೇಕು ಹಾಗಂತ   ಬಿಸಿಲು   ಇರೋದೇ   ಇಲ್ಲ   ಅಂತಾನು   ಹೇಳೊಕಾಗಲ್ಲ ಕಂಡರೆ   ಅದೊಂದು   ಎಳೆ   ಬಿಸಿಲು   ಇದ್ದ   ಹಾಗೆ ಮನಸ್ಸಿಗೆ   ಒಂಥರ    ಹಿತವಾಗಿರುತ್ತೆ .  ಚಳಿ   ಮಳೆಗಾಲದ   ಅವಿಭಾಜ್ಯ   ಅಂಗ   ಅಂದುಕೊಳ್ಳಿ ಅನ್ದುಕೊಳ್ಳೋದೆನು   ಅದು   ಇದ್ದೇ   ಇರುತ್ತೆ ಆದರೆ   ರೈತಾಪಿ   ಜನಗಳಿಗೆ   ಮಳೆಗಾಲ   ಶುರು   ಆಯ್ತು   ಅಂದ್ರೆ   ಆರಂಭ  ( ಕೃಷಿ ವ್ಯವಸಾಯ ಮಾಡೋ   ಕಾಲ ಮನೆಗೆ    ಅದಕ್ಕಿಂತ   ಮುಂಚೆ   ಸೌಧೆ  ( ಉರುವಲು ಜೋಡಿಸ್ಬೇಕು ಮನೆಯ   ಅಟ್ಟನಿಗೆ   ಎಲ್ಲ   ಸರಿ   ಮಾಡ್ಬೇಕು ವ್ಯವಸಾಯಕ್ಕೆ   ಬೇಕಾಗೋ   ಅದು   ಇದು   ಎಲ್ಲ   ಸಿದ್ಧ   ಮಾಡಿ   ಇಟ್ಕೋಬೇಕು

ವ್ಯವಸಾಯ   ಮಾಡೋದೇನೋ   ಸರಿಹೊಟ್ಟೆಗೆ ಮಳೆಗಾಲಕ್ಕೆ   ಮುಂಚೆ   ಖಾರದ   ಪುಡಿಹಪ್ಪಳಸನ್ಡಿಗೆಚಕ್ಕಲಿ   ಎಲ್ಲ   ತಯಾರು   ಮಾಡ್ಕೊಬೇಕುಮಾಡ್ಕೊಳ್ಳದೇ   ಹೋದ್ರೆಮಕ್ಕಳ   ಗತಿ   ಏನು ?
ಮಳೆ   ಬರ್ತಾ   ಇದೆಚಳಿ   ಆಗ್ತಾ   ಇದೆಏನಾದ್ರೂ   ತಿನ್ಲಿಕ್ಕೆ   ಕೊಡಮ್ಮಇಲ್ಲೇ   ಇರ್ತೀವಿಹೊರಗೆಲ್ಲೂ   ಹೋಗಲ್ಲ   ಅಂತ   ಅಂದ್ರೆ   ಸಾಕುಅಮ್ಮ   ತಡೀರಿ   ಮಕ್ಕ್ಳಅಂಥ  ಹೇಳಿ   ಕಾಫೀ   ಜೊತೆ   ಬಿಸಿ   ಬಿಸಿ   ಪಕೋಡನೊ ಮೆಣಸಿನ   ಕಾಯಿ   ಬಜ್ಜಿನೋ   ಮಾಡಿ   ಕೊಡ್ತಾರೆ

ಕಾಫೀ   ಕುಡಿತಮಳೆ   ನೋಡ್ತಾಪಕೋಡ   ತಿಂತಿದ್ದ್ರೆ ಆಹಾಮಜವೋ   ಮಜಒಳ್ಳೇ   ಮೈ   ಜುಂ   ಅನ್ನುತ್ತೆಮೈ   ಬೆಚ್ಚಗಾಗುತ್ತೆ

ನನಗೆ   ಪಕೋಡ   ಮಾಡ್ಲಿಕ್ಕೆ   ಖಂಡಿತ   ಬರಲ್ಲ ಆದ್ರೆ   ತಿನ್ನೋಕೆ   ಮಾತ್ರ…………….  ಈಗ   ಆದಲ್ಲ   ನೆನಪು   ಮಾತ್ರನಾನು   ಮನೆ   ಬಿಟ್ಟು   ಬೆಂಗಳೂರಲ್ಲಿ   ಕೆಲ್ಸಾ   ಮಾಡ್ತಿದ್ದೇನೆ ಮಳೆಗಾಲ   ಬಂದಾಗ   ಅಮ್ಮನ   ಪ್ರೀತಿಕಾಫೀಪಕೋಡ   ಎಲ್ಲವೂ   ನೆನಪಾಗುತ್ತೆ ಅಮ್ಮನ   ನೋಡಬೇಕು   ಅಂದಾಗ   ಮನೆಗೆ   ಹೋಗಬಹುದುಆದರೆ   ಎಲ್ಲ   ಕಾಲವು   ಮಳೆಗಾಲವಾಗಿರಲ್ಲ   ಅಲ್ಲವೇ?