ಅಭಿಮಾನಿ

ನಾ ನಿಮಗೆ…

ನನ್ನ ಮೊದಲ ಲವ್ ಲೆಟರ್

14 ಟಿಪ್ಪಣಿಗಳು

ಹೈ ಡಿಯರ್ ಲಿಲ್ಲಿ,

ಹೌ ರ್ ಯು? ಈ ಲೆಟರ್ನ ಪೂರ್ತಿಯಾಗಿ ಓದು. ಇದು ನನ್ನ ಮೊದಲ ಲವ್ ಲೆಟರ್. ಹಾಗಾಗಿ ಈ ಲೆಟರ್ ಅನ್ನು ಮೊದಲಿನಿಂದ ಕೊನೆಯವರೆಗೆ ಸಂಪೂರ್ಣವಾಗಿ ಓದು, ನಂತರ ನೀನು ಪ್ರೀತಿಸದೇ ಹೋದರೂ ಪರವಾಗಿಲ್ಲ.

ನಾನು ರಾಜ್, ಎಮ್.ಎನ್.ಸಿ. ಕಂಪನಿ ಒಂದರಲ್ಲಿ ಕೆಲ್ಸ ಮಾಡ್ತಿದ್ದೀನಿ. ನಾನು ಕೆಲ್ಸ ಮಾಡೋ ಕಡೆ ಹತ್ತಾರು, ನೂರಾರು ಹುಡ್ಗೀರನ್ನ ನೋಡಿದ್ದೀನಿ. ನನ್ನ ಮನೆಯ ಎದುರುಗಡೆ ಲೇಡೀಸ್ ಪಿ.ಜಿ. ಇದೆ. ಅಲ್ಲೂ ಹತ್ತಾರು ಹುಡ್ಗೀರು ಇದ್ದಾರೆ. ನೋಡಲಿಕ್ಕೆ ಚೆನ್ನಾಗಿರೋರು ಇದ್ದಾರೆ. ಆದರೆ ಯಾಕೋ ನಿನ್ನ ನೋಡಿದ ಮೇಲೆ ಮತ್ಯಾರನ್ನು ನೋಡಬಾರದು ಅನ್ನಿಸಿತು. ಯಾಕೋ ಮನಸ್ಸು ಅಲ್ಲೇ ಸ್ಟ್ರಕ್ ಆಗಿ ಬಿಟ್ಟಿದೆ. ನನಗೆ ಇದೆ ಪ್ರೀತಿ ಅನಿಸಿತು. ಬುದ್ಧಿ ತುಂಬಾ ಯೋಚನೆ ಮಾಡ್ತು, ಇದು ಯಾವುದೇ ಇನ್‌ಫಾಚುಯೇಶನ್ ಅಲ್ಲ ಅಂತ ಕೂಡ ಬುದ್ಧಿ ಮನಸ್ಸಿಗೆ ಹೇಳಿತು. ನಾನು ನಿನ್ನ ನೋಡಿದ್ದು ಇದೆ ಮೊದಲ ಸಲ ಏನಲ್ಲ. ಇದು ಕ್ರಮೇಣ ಜರುಗಿದ್ದು. ನೀನು ಎಲ್ಲರಿಗಿಂತ ಚೆನ್ನಾಗಿದ್ದೀಯ ಅಂತ ನಾನು ನಿನಗೆ ಸುಳ್ಳು ಹೇಳಬೇಕಾಗಿಲ್ಲ. ನಾನೊಬ್ಬ ಫ್ಲರ್ಟ್ ಕೂಡ ಖಂಡಿತ ಅಲ್ಲ. ನನಗೆ ಹುಡ್ಗೀರಲ್ಲಿ ಫ್ರೆಂಡ್ಸ್ ಇದ್ದಾರೆ. ಆದರೆ ಗರ್ಲ್ ಫ್ರೆಂಡ್ ಇಲ್ಲ. ನೀನು ಬರಿ ನನ್ನ ಗರ್ಲ್ ಫ್ರೆಂಡ್ ಆಗಬೇಕು ಅಂತ ಪೀಠಿಕೆ ಆಗ್ತಾ ಇದ್ದೀನಿ ಅಂತ ಖಂಡಿತ ತಿಳ್ಕೋಬೇಡ. ನೀನು ನನ್ನ ಬಾಳಿ ನುದ್ದಕ್ಕೂ ಇರಬೇಕು, ಅದು ನನ್ನ ಆಸೆ. ನನ್ನ ಮನಸ್ಸಿಗೆ ಅನ್ನಿಸ್ಸಿದ್ದನ್ನ ನಿನಗೆ ನೇರವಾಗಿ ಹೇಳ್ತಾ ಇದ್ದೀನಿ. ಡೋನ್ಟ್ ಥಿಂಕ್ ಸಿಲ್ಲಿ.

ನಿನಗೆ ಈ ಲೆಟರ್ ಓದಿ, ಸ್ವಲ್ಪ ನಗು ಬಂದರೆ, ಓ ಕೆ, ಐ ವಿಲ್ ಆಲ್ಸೊ ಎಂಜಾಯ್ ಇನ್ ಯುವರ್ ಸ್ಮೈಲ್. ತಲೆನೋವು ಬರೋದಾದರೆ ಐ ಡೋನ್ಟ್ ಬಾದರ್ ಟೂ ಮಚ್. ಯಾಕೆಂದರೆ ಮನಸ್ಸಿನಲ್ಲಿ ಇರೋ ಸವಿ ಪ್ರೀತಿ ನಾನು ತಿಳಿಸುವುದಾದರೂ ಹೇಗೆ?

ಈ ಲೆಟರ್ ನ ಟೈಮ್ ಪಾಸ್‌ಗೆ ಬರೆದಿದ್ದು ಅಂತ ತಿಳ್ಕೋಬೇಡ. ನಾನು ನಿನಗೆ ನೇರವಾಗಿ ಹೇಳೋಣ ಅಂದುಕೊಂಡೆ. ಆದರೆ ಮಾತಾಡಿದಷ್ಟು, ಫಿಲ್ಮ್ನಲ್ಲಿ ಹೇಳಿದಷ್ಟು ಸುಲಭ ಅಲ್ಲ. ಫ್ರೆಂಡ್ಸ್ ಹತ್ತಿರ ಹೇಳಿ ಕಳುಹಿಸೋಣ ಅಂದುಕೊಂಡೆ, ಆದರೆ ಅವರು ಮೀಡಿಯೇಟರ್ ಯಾಕೆ ಆಗಬೇಕು?

ನಿನಗೆ ಹೇಳಬೇಕು ಅನ್ನಿಸಿದ್ದನ್ನ ಸಂಕ್ಷಿಪ್ತವಾಗಿ ಹೇಳಿದ್ದೀನಿ. ನಿನಗೂ ನನ್ನ ಮೇಲೆ ಪ್ರೀತಿ ಬಂದರೆ ಪ್ರೀತಿಸು. ಯಾವ ರೀತಿಯ ಬಲವನ್ತವು ಇಲ್ಲ. ಯಾಕೆಂದರೆ ಪ್ರೀತಿ ಬಲವಂತದಿಂದ ಬರೋದಿಲ್ಲ ಅನ್ನೋದು ನನಗೆ ಗೊತ್ತು. ಆದರೆ ಸುಳ್ಳು ಹೇಳಿ ಕೈ ಕೊಡಬೇಡ. ನನ್ನ ಪರ್ಸನ್ಯಾಲಿಟೀ ನೋಡಿಯೋ, ಪ್ರಾಪರ್ಟೀ ನೋಡಿಯೋ ಪ್ರೀತಿಸಬೇಡ. ಯಾಕೆಂದರೆ ಅದು ಪ್ರೀತಿನೇ ಆಗಿರಲ್ಲ. ಹಾಗಾಗಿ ನಿನ್ನ ಬುದ್ಧಿ ಮಾತಿಗಿಂತ, ಮನಸ್ಸಿನ ಮಾತು ಕೇಳು. ನಿನ್ನ ಮನಸ್ಸಿಗೆ ನಾನು ಸಂಗಾತಿ ಆಗಬಲ್ಲೆನು ಅನ್ನಿಸಿದರೆ, ನಿನ್ನ ಪ್ರೀತಿನ ನನ್ನ ಜೊತೆ ಹಂಚಿಕೊಳ್ಳಬಹುದು. ನೀನು ನನ್ನ ಪ್ರೀತಿನ ಒಪ್ಪಿಕೊಳ್ಳಲೇಬೇಕು ಅಂತಾನೂ ಇಲ್ಲ. ಆದರೆ ನೀನು ನನ್ನ ಜೊತೆ ಮಾತನಾಡಲಿಲ್ಲ ಅಂದರೆ ಮಾತ್ರ, ನನಗೆ ನೆನೆಸಿಕೊಳ್ಳೋದಕ್ಕೆ ಆಗೋದಿಲ್ಲ. ಮತ್ತೆ ಯಾರನ್ನಾದರೂ ನೀನು ಈಗಾಗಲೆ ಪ್ರೀತಿಸುತ್ತಿದ್ದರೆ, ನನ್ನ ಕಡೆಯಿಂದ ಬೆಸ್ಟ್ ವಿಶಸ್ ಮತ್ತು ಸಾರೀ, ನಾನು ಸ್ವಲ್ಪ ಲೇಟ್ ಆದೇ ಅನ್ನಿಸುತ್ತೆ.

ಸೋ ನೋ ಎಕ್ಸ್‌ಪೆಕ್ಟೇಶನ್, ಓನ್ಲೀ ಲವ್,

ಟೇಕ್ ಕೇರ್,
ರಾಜ್

ಲೇಖಕ: sundaranadu

Kannada koosina kosambari

14 thoughts on “ನನ್ನ ಮೊದಲ ಲವ್ ಲೆಟರ್

 1. papa aa hudugi love madtha idala antha tilidukondu amele lette bariyodalwa . neenu nanna bari girlfriend alla nanna jeevanada koneyavaregoo irbeku antha heltha irodu thumbha chennagide ….premapatrada jotege nijavada preeti kooda idre kandita hudugi jeevanada konevarege iruva jotegarti aagthale ..chennagide

 2. Best Of Luck BUT change Ur style @ REq
  New MOde Better Words.

 3. NANAGE AVANA FEELINGS TUMBA ESTA AYTHU ADARE HUDUGIGE MATOBA LOVER EDANA ELVA TILKONDU NANTARA LETTER KODBEKITU ANSUTE.

 4. mara suttodanna bittu,,,,,, directagi heli…….I LOVE YOU…..anta.!

 5. nice ಲವ್ ಲೆಟರ್”

 6. Modala letter nalli ella heli nivu thumba thappa madideera,. Parichaya vada mele ella helabaudittu

 7. ಮಚ್ಚಾ ಹುಡಿಗಿಯ ಅಪ್ಪನ ಅಮ್ಮನ ಕೇಳಿ ಮದುವೆ ಮಾಡ್ಕೊ ಲವ್ ಮಾಡಿ ಕರೆದುಕೊಂಡು ಹೋಗಿ ತಪ್ಪು ಮಾಡಬೇಡ ಅವರ ಶಾಪ ನಿನ್ನನ್ನು ಬೀಡಲ್ಲ, ಯಾವುದೇ ಲಾಭ ನಷ್ಟಗಳ ನಿರೀಕ್ಷೆಯಿಲ್ಲದೆ ಸುಮಾರು 20-25 ವರ್ಷ ಪೊಷಿಸಿರುತ್ತಾರೆ

 8. yavude ondu hodga bandu i love u anta helidre khandita opkillolla, nin bhavanegalannu baravanigeya mukhantara vektapadisidiys , nin bhananegalige avalu spandistale , yake andre manada matu bayalli helakkagalla , hrudayada matu baravanigeyalli matra sadya, all the best

 9. Super Nim story nange thuba esta agide avalu shite agidre kanditha nimge sikke sigthale don’t feel bad, nim manassina baravanige thuma chennagide.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s