ಅಭಿಮಾನಿ

ನಾ ನಿಮಗೆ…


ನಿಮ್ಮ ಟಿಪ್ಪಣಿ ಬರೆಯಿರಿ

ಚಳಿ

ಓ ಚಳಿ
ಕೊಡದಿರು ಕಚಗುಳಿ
ಬೆಳ್ಲಂಬೆಳಗೆ ಹಾಸಿಗೆಯಲಿ
ಮಾಡದಿರು ಯಾವ ಹಾವಳಿ
ಸುಂದರ ಕನಸು
ಕೈಗೂಡುತಲಿಹುದು
ಕನಸು, ಸವಿಗನಸು
ಎಲ್ಲರ ಪ್ರೀತಿಯ ದೊರೆಯಾದ ಕನಸು
ಕೈ ತುಂಬಾ ಕಾಸು
ಮನಕೊಪ್ಪಿದ ಹುಡುಗಿಯ
ಕೈ ಹಿಡಿದ ಸೊಗಸು
ಕಾಡಬೇಡವೋ ಚಳಿ
ನಿನಗಿಲ್ಲವೇ ಪ್ರೀತಿಯ ಕಳಕಳಿ
ಹೇ  ಚಳಿ,
ನೀ ಬಿಟ್ಟು ಹೋದರೆ 
ಅದೇ ನನಗೆ ಬಳುವಳಿ

Advertisements


ನಿಮ್ಮ ಟಿಪ್ಪಣಿ ಬರೆಯಿರಿ

Costly ಪ್ರೀತಿ

ನನ್ನ ಪ್ರೀತಿಯ ನೋಡು
ಚೆಲುವೆ ಕಡಲಾಳಕು ಮಿಗಿಲು
ನಿನ್ನ ಪ್ರೀತಿಯ ರೀತಿಯಂದರೆ
ನನಗೇಕೋ ದಿಗಿಲು

ಜೇಬಿನ ಭಾರವೆಲ್ಲ
ಕರಗಲು ಕಾಣೆಯಾಗುವೆ
ಐಸ್ಕ್ರೀಮ್ ಹಿಡಿದು ಪ್ರಾರ್ಥಿಸೆ
ತಕ್ಷಣ ನಿನ್ನ ವರದಾನ

ಬಿಡುವೆನು ನಿನ್ನ ನಾನು
ಕರೆದಿಹಳು ಮತ್ತೊಬ್ಬಳು
ನಿನ್ನ ಪ್ರೀತಿ ತುಂಬಾ ಕಾಸ್ಟ್ಲೀ
ಬೆಲೆ ಕಡಿಮೆಯೆನಿಸೆ ಮತ್ತೆ ಬರುವೆ


ನಿಮ್ಮ ಟಿಪ್ಪಣಿ ಬರೆಯಿರಿ

ನನ್ನ ಪ್ರೀತಿ

ನನ್ನ ಪ್ರೀತಿಯ ಸಾಲುಗಳಿವು
ಕವನವಾಗಬೇಕೆಂದೇನು ಇಲ್ಲ
ಆಗದಿದ್ದರೆ ನನ್ನ ಪ್ರೀತಿಗೆ
ಪೀಠಿಕೆಯಾದರೂ ಆಗಲಿ

ನನ್ನ ಪ್ರೀತಿ ನಿನಗೆ
ಇಷ್ಟವಾಗಬೇಕೆಂದೇನು ಇಲ್ಲ
ಆಗದಿದ್ದರೂ ನಾ ನಿನ್ನ
ಪ್ರೀತಿಸುವುದ ಬಿಡುವುದಿಲ್ಲ

ನಿನ್ನೀ ಮೊಗದಿ
ನಗು ಕಳೆ ತುಮ್ಬಿರೆ ಸಾಕು
ಸಾರ್ಥಕ ನನ್ನ
ಬದುಕು, ಪ್ರೀತಿ