ಅಭಿಮಾನಿ

ನಾ ನಿಮಗೆ…


ನಿಮ್ಮ ಟಿಪ್ಪಣಿ ಬರೆಯಿರಿ

ಎಚ್ಚರ! ಎಚ್ಚರ!

ಎಚ್ಚರಎಚ್ಚರ!
ನನ್ನ ರೂಮಿಗೆ ಬಲವಾದ ಬಾಗಿಲಿದೆ
ಕಿಟಕಿಗಳಿಗೆ ಬಲವಾದ ಸರಳು ಹೊಡೆಸಿದ್ದೀನೇ
ಮನೆಯ ಹೊರಗೆ ಬಿಗಿಯಾದ ಕಾವಲಿಟ್ಟಿದ್ದೇನೆ
ಇನ್ನು ನೀನೆಂದೂ ಬರಲಾಗದು ಒಳಗೆ
ನಿನಗೆ ಮತ್ತೊಮ್ಮೆ ಅವಕಾಶವಿಲ್ಲ

ನನ್ನ ತೋಳಿಗೆ ಆಂಜನೇಯನ ತಾಯತವಿದೆ
ಕೊಳ್ಳೆಗಾಲದ ಮಂತ್ರವಾದಿಯ ನಿಂಬೇ ಹಣ್ಣಿದೆ
ಕನಸಿನಲ್ಲಿಯೂ ನೀ ಬರಬಾರದೆಂದು
ನಿದ್ರೆ ಗುಳಿಗೆ ತಿಂದಿದ್ದೇನೆ

ಅಂದು ಕಳೆದುಕೊಂಡ ಮನಸ್ಸು
ಇನ್ನೂ ನನಗೆ ಸಿಕ್ಕಿಲ್ಲ
ಆಸೆಕನಸುಗಳಿಗೆ
ನೇಣು ಕುಣಿಕೆ ತೋರಿಸಿದೆ ನೀನು
ಪ್ರೀತಿಯಲಿ ನೊಂದ ಜೀವವ
ಮತ್ತೆ ನೋಯಿಸಲು ಬರಲಾಗದು ನೀನು ಮತ್ತೊಮ್ಮೆ

Advertisements


ನಿಮ್ಮ ಟಿಪ್ಪಣಿ ಬರೆಯಿರಿ

ನಾನುಳಿವೆನೆ?

ಬಿಡು ಹೂಬಾಣ
ನಿನ್ನ ಸನಿಹವಿಲ್ಲದೇ
ಧಹಿಸುತಿದೆ ಮನ
ಕೊಲ್ಲಲಿ
ಕೊಂದು ಝೇನ್ಕರಿಸಲಿ
 ಪ್ರೇಮ
ಎಂದು ಪ್ರಿಯೆ ಮರುಗುತಿರಲು

ನಿನ್ನ ಕೊನ್ದೆಡೆ
ನನಗೆ ಉಳಿವುಂಟೆ
ನಿನ್ನ ಪ್ರೇಮಪಾಶಕೆ
ಸಿಲುಕಿದ ಮೀನು ನಾನು
ಎಂದು ಕೊರಗಿತು
ಪ್ರಿಯತಮನ ಮನ


1 ಟಿಪ್ಪಣಿ

ದೀಪಾವಳಿಯ ನೆನೆದು

ಕೈಯಲ್ಲಿ ಎಣ್ಣೆ ಕ್ಯಾನ್ ಹಿಡಿದು
ಅಮ್ಮ ಇಟ್ಟ ದೀಪಗಳ ಕಡೆಗೆ ನಡೆದು
ಬತ್ತಿ ಸರಿಮಾಡಿ ಎಣ್ಣೆ ಸುರಿದು
ದೀಪ ಹಚ್ಚಿದ ನೆನಪು
ಅಪ್ಪ ಮನೆಯ ಹೊರಗೆ
ಬಲ್ಬಿನ ದೀಪದ ಮಾಲೆಯ ಹಚ್ಚಿ
ನೋಡೋ ಹೆಂಗೆ‘ ಅಂದಾಕ್ಷಣ
ಎಲ್ಲ ಸೂಪರ್ಆದರೆ ಇನ್ನೊಂದು
ಲೈನ್ ಹಾಕಬೇಕಿತ್ತು‘ ಅಂತಿದ್ದೆ
ಅಪ್ಪನ ಬಳಿ ಹತ್ತು ರೂಪಾಯಿ
ಅಮ್ಮನ ಹತ್ತಿರ ಐದು ರೂಪಾಯಿ
ಅತ್ತು ಕರೆದು ಪೀಕುತ್ತಿದ್ದೆ
ಎದ್ದು ಬಿದ್ದು ಅಂಗಡಿಗೆ
ಓಡಿದ ನೆನಪು
ಕೈಯಲ್ಲಿ ತರಚಿದ ಗಾಯದ ಕುರುಹು
ಚಿನಕುರುಳಿರಾಕೆಟ್ ಹಿಡಿದು ಆಡಿದ ನೆನಪು
ತಮ್ಮನ ರಾಕೆಟ್ ಎಗರಿಸಿ ಹಾರಿಸಿದ್ದು
ಅದು ಯಾರದೋ ಬೆನ್ನಿಗೆ ಗುದ್ದಿದ್ದು
ನಂತರ ಹೊಡೆದಾಟ…

ಇಂದು ತರಹೇವರಿ ಪಟಾಕಿಯುಂಟು
ಹಬ್ಬಕೆ ಹೋಗುವ ಆಸೆಯೂ ಉಂಟು
ಹಣಕ್ಕೆ ಅಪ್ಪನ ಕೇಳುವ ಹಾಗಿಲ್ಲ
ಬೇಡುತಲಿರುವೆನು ದೇವರಕಂಪನಿ ನನಗೆ
ನಾಲ್ಕು ದಿನ ರಜೆ ನೀಡಲಿ ಎಂದು


ನಿಮ್ಮ ಟಿಪ್ಪಣಿ ಬರೆಯಿರಿ

ಮುನ್ನುಡಿ

ಮುನ್ನುಡಿಯಲ್ಲಿ ಬರೆದ ಸಾಲುಗಳು
ಓದಿದ್ದೆ ಅಂದು
ಕಥಾಸಂಕಲನವಿದು , ಮಿಗಿಲಾದುದು
ಎಂದು ವಿಮರ್ಶೆಯಲ್ಲಿ
ಬರೆದಿತ್ತು
ಅಚ್ಚರಿಆನಂದ ನನಗೆ
ಒಂದೇ ಸಮನೆ
ಲಘುಬಗನೆ ಓದಿದೆ
ಮೊದಲಿನಿಂದ ಕೊನೆಯವರೆಗೂ
ಅದರಲ್ಲಿ
ಕಥೆ ಹೇಳುವರಾರು
ಯಾರ ಕಥೆ
ಎಂದು ಮಾತ್ರ
ತಿಳಿಯಲಿಲ್ಲ
ನನ್ನ ತಲೆಯಲ್ಲಿ
ಉಳಿದಿದ್ದು
ಮುನ್ನುಡಿ ಬರೆದವ ಮಾತ್ರ