ಅಭಿಮಾನಿ

ನಾ ನಿಮಗೆ…

ನಿಮಗೆ ಧನ್ಯವಾದಗಳು

ನಿಮ್ಮ ಟಿಪ್ಪಣಿ ಬರೆಯಿರಿ

ಈ ಚಳಿಗಾಲದಲ್ಲಿ ಮೈ ಸ್ವಲ್ಪ ಚುರುಕು ಕಡಿಮೆ. ಅದರಲ್ಲಿಯೂ ನನ್ನಂಥ ಸೋಮಾರಿಗಳಿಗೆ ಸ್ವಲ್ಪ ಜಾಸ್ತಿನೆ. ಬೆಳಿಗ್ಗೆ ಎದ್ದು ರೆಡಿಯಾಗಿ ತಿಂಡಿಗೆ ಹೊರಡುವ ವೇಳೆಗೆ ಜನರೆಲ್ಲ ಆಫೀಸಿನಲ್ಲಿ ಕೆಲ್ಸಕ್ಕೆ ಹಾಜರಾಗಿರುತ್ತಾರೆ,  ಆಗ್ತಿರ್ತಾರೆ. ಅಂದರೆ ಬೆಳಿಗ್ಗೆ ೯ ಅಥವಾ ೧೦ ಗಂಟೆಗೆ.
ನಾನು ಕನ್ನಡ ದಿನಪತ್ರಿಕೆಗಳು ಹಾಗು ಬ್ಲಾಗುಗಳನ್ನು ನೋಡುತ್ತಲೇ ಇರುತ್ತೀನಿ. ಈಗ ಅದು ಗೀಳು ಅಥವಾ ತುಂಬ ಅಭ್ಯಾಸ ಆಗಿ ಹೋಗಿದೆ. ಯಾವುದಾದರು ಹಬ್ಬಗಳು ಬಂದಾಗ, ಭಾರತ ಯಾವುದಾದರು ಕ್ರೀಡೆಯಲ್ಲಿ ಜಯಗಲಿಸಿದಾಗ, ಯಾರಾದರು ಮೃತರಾದಾಗ ವಿಶೇಷವಾದ ಲೇಖನಗಳು ಪುಂಖಾನುಪುಂಖವಾಗಿ ಬರುತ್ತವೆ. ಬ್ಲಾಗುಗಳಲ್ಲಿಯು ಕೂಡ. ನನಗೆ ಆಶ್ಚರ್ಯ ಅಗೋ ಸಂಗತಿಯೆಂದರೆ ಪತ್ರಕರ್ತರೇನೊ ಸದಾ ಸುದ್ದಿಯ ಸಂಗ್ರಹದಲ್ಲಿರುತ್ತಾರೆ. ಅವರಿಗೆ ಲೇಖನಗಳನ್ನು ಬರೆಯೋದು ಕಷ್ಟದ ಕೆಲಸವಾಗಿರಲಾರದು. ಆದರೆ ಬ್ಲಾಗಿಗರು ಅದು ಹೇಗೆ ಲೇಖನಗಳನ್ನ ಬರೆಯುತ್ತಾರೆ. ಏಕೆಂದರೆ ಅದರಲ್ಲಿ ಬರೆಯುವ ಬಹಳಷ್ಟು ಮಂದಿ ಹವ್ಯಾಸಿ ಬರಹಗಾರರೆಂದು ನನ್ನ ಅಭಿಪ್ರಾಯ. ಅವರಿಗೆ ಈ ಸಂದರ್ಭಗಳಲ್ಲಿ ಹೇಗೆ ಸಮಯ ಸಿಗುತ್ತದೆಂದು? ನಾನು ಹವ್ಯಾಸಕ್ಕಾಗಿ ಬರೆಯುತ್ತೇನೆ. ಆದರೆ ಬರಹಗಾರನಲ್ಲವೆಂದು ನಿಮಗೆ ಇದು ಓದುತ್ತಲೇ ತಿಳಿಯುತ್ತದೆ.
ಅವಧಿ, ನವಿಲಗರಿ, ಚಂಡೆಮದ್ದಳೆ, ಕೆನೆಕಾಫಿ, ಕುಂದಾಪ್ರಕನ್ನಡ, ಹಾಗು ಇತರೆ ಕನ್ನಡ ಬ್ಲಾಗುಗಳು ಸದಾ ಹೊಸ ವಿಚಾರಗಳಿಗೆ ತೆರೆದುಕೊಂದಿರುತ್ತವೆ, ಹೊಸ ರೀತಿಯಲ್ಲಿ ಬರೆಯುತ್ತಲೇ ಇರುತ್ತವೆ. ನಮ್ಮ ಬಾಲ್ಯದ ನೆನಪುಗಳನ್ನ, ಮನಸ್ಸಿನ ಕಸಿವಿಸಿ, ಕನಸು, ಕೋಪ-ತಾಪ ಎಲ್ಲವು ನಮ್ಮಲ್ಲಿ ಕೆಲವೊಮ್ಮೆ ವ್ಯಕ್ತವಾದರೂ ಅವೆಲ್ಲ ಹೇಗೆ ಅಕ್ಷರ ರೂಪ ಪಡೆದು ಈ ಬ್ಲಾಗುಗಳಲ್ಲಿ ಬಂದಿವೆ ಎಂದು ನನಗೆ ಅಚ್ಚರಿಯಾಯ್ತು.
ಈ ನನ್ನ ಮಾತುಗಳು ಭಾವವನ್ನು ಅಕ್ಷರಗಳಿಗೆ ಇಳಿಸಿದ ಅಕ್ಷರಬ್ರಹ್ಮರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುವುದಕ್ಕಾಗಿ ಬರೆದದ್ದು. ಆದರೆ ಹೇಗೆ ಬರೆದಿದ್ದೆನೆಂದು ನನಗೆ ಗೊತ್ತಿಲ್ಲ. ನನ್ನ ಭಾವ ನಿಮ್ಮ ತಲುಪಿದರೆ ಅಷ್ಟೆ ಸಾಕು.

ನಿಮ್ಮ ಅಭಿಮಾನಿ

Advertisements

Author: sundaranadu

Kannada koosina kosambari

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s