ಅಭಿಮಾನಿ

ನಾ ನಿಮಗೆ…

ಪ್ರಿಯ ಹೃದಯವೇ ನೀನು ಓದದ ಕೊನೆಯ ಪತ್ರ

1 ಟಿಪ್ಪಣಿ

ಹಾಯ್ ಲಿಲ್ಲಿ,
ನಾನು ಬರೆಯೋದನ್ನ ನಿಲ್ಲಿಸೋ ಕಾಲ ಬಂದಿದೆ ಅನ್ನಿಸುತ್ತೆಅಷ್ಟಕ್ಕೂ ನಾನು ಏನು ಬರೆದಿಲ್ಲ
ನಿನಗೆ ಒಂದು ಪತ್ರವನ್ನು ಬಿಟ್ಟುಅದನ್ನು ನಾನು ಕೊಡದೇ ಇಟ್ಟುಕೊಂಡುಬಿಟ್ಟೆ (ನಿನಗೆ ಕೊಡಲು ಹೆದರಿಕೆಯಾಗಿ). 
ಹೋಗಲಿ ಬಿಡುನಾನು ಈಗ ಬರೆಯೋ ಕಾಗದ ಕೂಡ ನಿನಗೆ ತಲುಪದೇ ಇರಬಹುದುನಾನು
ನಿನ್ನ ತಲುಪದೇ ಇರೋ ಹಾಗೆಮನಸ್ಸಿನಲ್ಲಿರೋ ಪ್ರೀತಿ ನಿನಗೆ ಅರ್ಥ ಆಗುತ್ತಾ ಅನ್ನೋದೇ
ನನಗಿರುವ ಸಂಶಯಇಷ್ಟು ಕಾಲ ನಿನ್ನ ಹೆಸರಿನಲ್ಲೇ ಕೆಲವು ಸಾಲುಗಳನ್ನ ಬರೆಯುತ್ತಿದ್ದೆಅದಕ್ಕೆ
ಕೆಲವೊಂದು ಸಲ ಪದ್ಯ ಎನ್ನುತ್ತಿದ್ದೆಕೆಲವೊಂದು ಸಲ ಗದ್ಯ ಎನ್ನುತ್ತಿದ್ದೆಮುಂದೆ ಏನೆಂದು ಹೇಳುವುದು?
ನೀನು ನನ್ನ ಬಿಟ್ಟು ಹೊರಟು ನಿಂತಿದ್ದೀಯನನ್ನಲ್ಲಿರುವ ಕೆಲವು ಸಾಲುಗಳು ಹೊರಬರುತ್ತಿವೆಇವೆ ಕೊನೆಯ
ಸಾಲುಗಳೇನೋಬಹುಶಃ ನಿನಗೆ ಅನ್ನಿಸಿರಬಹುದು ನನ್ನಲ್ಲಿ ಪ್ರೀತಿಯೆಂಬುದು ಬಾರಿ ಆಕರ್ಷಣೆಯಾಗಿತ್ತು
 
ಮತ್ತು ಅದೀಗ ಸತ್ತು ಹೋಗಿದೆಯೆಂದುನಿಜ ಹೇಳ್ತೀನೇಲಿಲ್ಲಿಅದು ಸಾಯುವ ಕೂಸಲ್ಲಅದು ಬಂಡೆಗಲ್ಲು
ಒಡೆದರೆ ಚೂರಾಗಿ ಮಣ್ಣಾಗುವುದುನೆಲದ ಮೇಲೋನೀರಿನ ಕೆಳಗೋ ಇದ್ಡುಬಿಡುತ್ತೆಅದರ
ಪಾಡಿಗೆ ಅದು.

ನಾನು ನಿನಗೆ ಇಷ್ಟ ಆಗಿಲ್ಲ ಅನ್ನೋದು ನನಗೆ ಗೊತ್ತುಯಾಕೆಂದರೆ ನಿನ್ನಲ್ಲಿರುವ ಹಣಗುಣರೂಪ
ಯಾವುದು ನನ್ನಲ್ಲಿಲ್ಲನಿನಗೆ ಇಷ್ಟವಾಗೋ ಹುಡುಗ ಹೇಗಿರಬೇಕು ಅನ್ನೋದು ನನಗೆ ಗೊತ್ತಿಲ್ಲನಿನ್ನ ತಂದೆ 
ತಾಯಿ ತೋರಿಸಿದ ಹುಡುಗನನ್ನೇ ನಿನ್ನ ತಮ್ಮನಿಗೆ ಭಾವನನ್ನಾಗಿ ಮಾಡುತ್ತೀಯೆಂದು ನನಗೆ ಗೊತ್ತುಅದೆಲ್ಲ
ಹಾಳಗಿ ಹೋಗಲಿ ಬಿಡುಒಟ್ಟಾರೆ ನೀನು ನನ್ನನ್ನ ಮರೆತುಮತ್ತೆಂದೂ ಕಾಣಿಸಿಕೊಳ್ಳದಂತೆ ಸಂತೋಷವಾಗಿ
 
ಹೋಗುತ್ತಿದ್ದೀಯನಾನು ನಿಸ್ವಾರ್ಥ ಪ್ರೇಮಿಯಾಗಬೇಕೆಂದಿದ್ದೆಆದರೆ ನಿನ್ನ ಪ್ರೀತಿ ಹಮ್ಬಲಿಸಿ ಸ್ವಾರ್ಥಿಯಾದೆ.

ನಿನ್ನ ಆಸೆಕನಸುಗಳು ಚಿರಾಯುವಾಗಲಿನನ್ನ ಪ್ರೀತಿ ಸಾಯದಿರಲಿ.

ಕೊನೆಗೊಳ್ಳದ ಪ್ರೀತಿಯಿಂದ
ರಾಜ್


ಲೇಖಕ: sundaranadu

Kannada koosina kosambari

One thought on “ಪ್ರಿಯ ಹೃದಯವೇ ನೀನು ಓದದ ಕೊನೆಯ ಪತ್ರ

  1. same problem boss to me also i understand ur pain , but no words
    to tell you , just am say Be happy dont take bp life is very short With your lovable Memories

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s