ಅಭಿಮಾನಿ

ನಾ ನಿಮಗೆ…


ನಿಮ್ಮ ಟಿಪ್ಪಣಿ ಬರೆಯಿರಿ

ನನ್ನ ಕನಸ ಮೇಲೆ ಅವಳ ಕಣ್ಣು

ನನ್ನ ಕನಸ ಮೇಲೆ ಅವಳ ಕಣ್ಣು
ಎಲ್ಲಿ ಹೋದರೂ ಬಿಡಲೊಲ್ಲಳು
ಕಣ್ಮುಚ್ಚಿದರೆ ಸಾಕು ರೆಪ್ಪೆಯ
ದಾಟಿ ಬರುವಳು

ಕನಸಲಿ ಹೊಸ ಕಾರು
ಕೊಳ್ಳುವ ಹಾಗಿಲ್ಲ
ಜೋಕಾಲಿಯಲಿ ಕೂತು
ಹಾರುವ ಹಾಗಿಲ್ಲ
ಅಲ್ಲಿಯೂ ಬಂದು ‘ಸರಿ
ನನಗೂ ಜಾಗ ಬಿಡು
ಎಂದು ಗದರಿಸುವಳು
ನನ್ನ ಸರಿಸಿ ಕೂತುಬಿಡುವಳು

ಕನಸಲಿ ಎಲ್ಲವೂ ಸಾಧ್ಯವೆಂದು
ಮಂಜಿನ ಮನೆಯ ಕಟ್ಟಿ
ಕಾಮನಬಿಲ್ಲನ್ನು ತೋರಣ ಮಾಡಿ
ಶಿವನ ಪೂಜೆಗೆ ಕರೆದಿದ್ದೆ
ನಳನನ್ನು ಅಡಿಗೆಗೆ ಬರಹೇಳಿದ್ದೆ
ಅಲ್ಲಿಯೂ ಬಂದಳು
ಅಡಿಗೆಗೆ ಹುಳಿ ಹಿಂಡಿ
ಶಿವನ ಪೂಜೆಗೆ ಅವಳೊಬ್ಬಳೆ ಕುಳಿತಳು

ಎಲ್ಲಿ ಸಿಕ್ಕರೂ ಬಿಡೆನು ಇನ್ಮುಂದೆ
ಕಲ್ಲು ಸಕ್ಕರೆ ಕನಸ ಪಾಯಸಕ್ಕೆ
ನೊಣವಾಗಿ ಬಿದ್ದವಾಳ ಹಿಡಿದು
ರೆಪ್ಪೆಯಿಂದ ಹೊರಗೆಸೆದುಬಿಡುವೆ
ಕನಸ ಹೊರಗು ಕಾಡುವ
ಬಜಾರೀ ಹೆಣ್ಣಿನ ಸೊಕ್ಕನು
ಮತ್ತೆ ಕನಸಲಿ ಮಣಿಸಿ ಬಿಡುವೆ

Advertisements