ಅಭಿಮಾನಿ

ನಾ ನಿಮಗೆ…


4 ಟಿಪ್ಪಣಿಗಳು

ಹೊರಟೆ ನೀನು ಎಲ್ಲಿಗೆ?

ಬೆಳಕು ಮೂಡುವ ಮುನ್ನ
ಓಡುವೆ ನೀನು ಎಲ್ಲಿಗೆ?
ಇನ್ನೂ ರವಿ ಬಂದಿಲ್ಲ
ಉಷೆ ಅವನ ಜೊತೆಗಿಲ್ಲ
ನನ್ನ ಕನಸಲ್ಲಿ ತುಸು ಹೊತ್ತು
ನಿಲ್ಲದೆ ಹೋಗುವೆ ಈಗ ಎಲ್ಲಿಗೆ?

ನೀ ಕದ್ದ ಕನಸುಗಳು
ಬೇಕಿವೆ ಇಂದಿಗೆ
ನೀ ನನ್ನ ಬಿಟ್ಟು ಓಡಬೇಡ ಮಲ್ಲಿಗೆ
ನಾವಿಬ್ಬರು ಕೂಡಿ ಹೆತ್ತು
ಸಾಕಿ ಸಲುಹಿದ ಕನಸುಗಳ
ಕದ್ದು ಓಡುವುದಾದರು ಎಲ್ಲಿಗೆ?

ಕನಸ ರಾತ್ರಿಗಳಿಗೆ
ಬೆಳಕಿಲ್ಲೆಂದು ಅನ್ಜಬೇಡ
ಮನಸ ಬತ್ತಿ ಮಾಡಿ ಹಚ್ಚಿಹೆನು
ನನ್ನ ಜೊತೆ ನಡೆ ಮಲ್ಲಿಗೆ
ನೀನು ನಡೆಯುವರೆಗೂ
ಬರುವೆ ಜೊತೆಗೆ

ಆದರೆ,
ನನ್ನ ಬಿಟ್ಟೊಡಬೇಡ ಮನಮಲ್ಲಿಗೆ

Advertisements


1 ಟಿಪ್ಪಣಿ

ನಮ್ಮ ಹುಡುಗನಿಗೆ ಒಂದು ಹುಡುಗಿ ಬೇಕಾಗಿದೆ

ಅವನು ನಮ್ಮೂರ ಹುಡುಗ
ಪ್ರೀತಿಯಲಿ ಒಂಟಿಸಲಗ
ತನ್ನವರ ಕಾಯೋ ಗಿಡುಗ
ಗುಣದಲ್ಲಿ ಅಪರಂಜಿಯೋ

ಮಾತಿನಲ್ಲೇ ಗೆಲ್ಲೋ ಜಾಣ
ಶೌರ್ಯದಲ್ಲಿ ವೀರ ರಾಣ
ಪ್ರೀತಿಗೆ ಸೋಲುವ ಗುಣದ
ವಾತ್ಸಲ್ಯದ ಕಾರನ್ಜಿಯೋ

ರೂಪದಲ್ಲಿ ಮನ್ಮಥನಿವನು
ನೀತಿಯಲಿ ಪಂಡಿತನಿವನು
ರೀತಿಯಲಿ ಎಲ್ಲರಿಗು ಮಾದರಿ
ನಡೆ ಬಂಗಾರದವನು

ನಮ್ಮೂರ ಅಪರಂಜಿಗೆ
ಮಲೆನಾಡ ಗುಣಸಂಪನ್ನಗೆ
ಮುತ್ತಿನಂಥ ಜೋಡಿಯಾಗೋ
ಹುಡುಗಿ ಬೇಕಾಗಿದೆ


ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡ ಎಸ್ಸೆಮ್ಮೆಸ್ಸು-1

೧. ನಿನ್ನ ಮಿಸ್ ಕಾಲಿನಲ್ಲಿಯು ಮಾಯೆಯಿದೆ
ನಿನ್ನ ಎಸ್ಸೆಮ್ಮೆಸ್ಸ್ ನಲ್ಲಿಯೂ ದಿನರಾತ್ರಿಯಿದೆ
ಆಗೀಗಲಾದರು ಫೋನ್ ಮಾಡು
ನಿನ್ನ ಚಮತ್ಕಾರದ ಧನಿಯ ಕೇಳಬೇಕಿದೆ.

೨. ನಮ್ಮ ಸ್ನೇಹ ರೇಮಂಡ್ ನಂತಲ್ಲ, ೧೯೨೫ ರಿಂದ
ಪೆಪ್ಸಿಯನ್ತೆಯು ಅಲ್ಲ, ಏ ದಿಲ್ ಮಾಂಗೆ ಮೋರ್ ಎನ್ನಲು
ಆದರೆ ಎಲ್. ಐ. ಸಿ.ಯಂತೆ
ಜೀವನದ ಜೊತೆಜೊತೆಗೂ, ಜೀವನದ ನಂತರವೂ.


ನಿಮ್ಮ ಟಿಪ್ಪಣಿ ಬರೆಯಿರಿ

ಒಬಾಮ

ಒಲಿಯುವನೆ ಒಬಾಮ?
ಹೊಸ ಮುನ್ನುಡಿ ಬರೆವೆನೆಂದ
ಅಮೆರಿಕಕ್ಕೆ ಬೆಳಕ ತರುವೆನೆಂದ
ಭಾರತದ ಐ, ಟಿ, ಗಳ ಪಾಲಿಗೆ
ಒಲಿದು ಬರುವನೇ?

ಶ್ವೇತ ವರ್ಣಿಗಳ ಮಧ್ಯ ಸೆಣೆಸಿ
ಕಲ್ಲು-ಮುಳ್ಳಿನ ಹಾದಿಯ ಸವೆಸಿ
ದೊಡ್ಡಣ್ಣ ಅಮೇರಿಕಾದ
ದೊಡ್ಡ ಹುದ್ದೆಗೇರಿದ ಒಬಾಮ
ಒಲಿದು ಬರುವನೇ?

ಭಯೋತ್ಪಾದನೆಯ ತೊಳೆವೆನೆಂದ
ಶಾಂತಿ ಕಹಳೆ ಊದುವೆನೆಂದ
ಹಣಕಾಸಲಿ ಬೆಳೆದು ಬಸವಳಿದ
ಅಮೆರಿಕದಲ್ಲಿ ಮತ್ತೆ ಕ್ರಾಂತಿ ತರುವೆನೆಂದ
ಒಬಾಮ ಒಲಿದು ಬರುವನೇ?


2 ಟಿಪ್ಪಣಿಗಳು

ಎಳ್ಳು-ಬೆಲ್ಲದ ಹುಡುಗಿ

ಕಾದು ಕುಳಿತಿಹೆನು ಹುಡುಗಿ
ನೀ ಬಂದೆ ಬರುವಿಯೆಂದು
ಎಳ್ಳು-ಬೆಲ್ಲ ತರುವಿಯೆಂದು

ಹೋದ ಸಲ ಜಡೆಯೆಳೆದು
ಕೆಣಕಿದ್ದು ನೆನಪಿದೆಯ?
ನಿನ್ನ ಬಣ್ಣ ಬಣ್ಣದ
ಮಾತಿಗೆ ಮರುಳಾಗಿ
ಬೆಲ್ಲದಂತಹ ಮುತ್ತ ನೀಡಿದ್ದು
ಮರೆತಿರುವೆಯ ಹುಡುಗಿ?

ಎಳ್ಳು-ಬೆಲ್ಲದ ಸಂಕ್ರಾಂತಿಯಂದು
ಮನೆಗೆ ನೀ ನಲಿಯುತ ಬಂದು
‘ಆಂಟಿ’ ಎಂದು ಮೆಲ್ಲಗೆ ಕರೆಯಲು
ಮೂಲೆಯಲಿ ಅವಿತು ಕುಳಿತ ನಾನು
ಎದ್ದೋಡಿ ಬರುವೆ
ನಿನ್ನ ಕೂಡಿ ನಲಿವೆ

ನನ್ನ ಅಮ್ಮನಿಗೆ ನೀನೇನು
ಹೇಳುವ ಹಾಗಿಲ್ಲ
ಸೊಸೆಯಾಗುವವಳ ಗುಟ್ಟು ರಟ್ಟಾಗುವುದಲ್ಲ
ಅಮ್ಮನಿಗೆ ಒಳ್ಳೆಯ ಮಗನು ನಾನು
ನೀನೇಳಲು ಅವಳು ನಂಬೋದಿಲ್ಲ

ಕಾಯುತಿರುವೆನು ಹುಡುಗಿ
ಕಾಯಿಸದಿರು ನನ್ನ ಬೆಡಗಿ
ನಿನ್ನ ಬರುವಿಕೆಯ ಘಳಿಗೆ ಎಣಿಸುತಿಹೆನು
ನಿನ್ನಾಗಮನದಿನ್ದಲೆ ನಾನು ಬದುಕುವೆನು


2 ಟಿಪ್ಪಣಿಗಳು

ಅವಳ ಹೆಸರಲ್ಲಿ ಏನೂ ಬರೆಯಬಹುದು…

ಅವಳ ಹೆಸರಲ್ಲಿ ಏನೂ ಬರೆಯಬಹುದು… ಹೌದೋ ಅಲ್ಲವೋಗೊತ್ತಿಲ್ಲ
ಆದರೆ ಬರೆಯಲು ಕೂತಾಗ ಅವಳೇ ನನಗೆ ಸಾಮಗ್ರಿಯಾಗಿ ಬಿಡುತ್ತಾಳೆ
ನಾನೊಬ್ಬನೇ ಅಲ್ಲ ಜಗದ ಸಾವಿರಾರುಲಕ್ಷಾಂತರ ಕೈಗಳಿಗೆ ಅವಳೇ 
ವಸ್ತುವಾಗಿ ಬಿಡುತ್ತಾಳೆಅವಳೆಂದರೆ ಪ್ರೀತಿಸಿದ ಹೃದಯಗೆಳತಿಸಂಗಾತಿ
ಸಖಿ..
 
ನಾನು ಇವಳನ್ನು ನೋಡುವ ಮೊದಲು ನಾನು ನಾನಾಗಿದ್ದೆಒಬ್ಬ ಸಾಮಾನ್ಯ 
ಹುಡುಗಗೆಳೆಯರ ಜೊತೆ ಆಡಿಕೊಳ್ಳುತ್ತಿದ್ದೆಮಸ್ತ್ ಮಜವಾಗಿತ್ತು ಲೈಫುಇವಳ
 
ಪರಿಚಯವಾದ ಮೇಲೆ ಒಂದು ಸಲ ನಾನು ಯಾಕೋ ಮೊದಲಿನಂತಿಲ್ಲ ಅನಿಸಿತು
ಅನಿಸಿಕೆ ಹಾಗೆ ಮುಂದುವರಿಯಿತುನನಗಿಂತ ಮೊದಲೇ ಇವಳ ಸಂಗಕ್ಕೆ ಬಂದ
 
ಎಷ್ಟೋ ಕೈಗಳು ರಚಿಸಿದ ಸಾಲುಗಳು ನನಗೀಗ ಅರ್ಥವಾಗತೊಡಗಿದವುಅವರ
 
ಉತ್ಸುಕತೆವಿರಹಪ್ರೇಮ ಅರ್ಥವಾಗುತ್ತಿದೆ ಅನಿಸಿತುಅವಳನ್ನು ನೋಡಿದ 
ಮೇಲೆ ಸ್ವರ್ಗದ ಅಪ್ಸರೆ ನೋಡುತ್ತಿದ್ದೇನೆ ಅನ್ನಿಸಿತುಲತೆಹಂಸಕೋಗಿಲೆನವಿಲುಗಳು
 
ಹೋಲಿಕೆಗೆ ಬಂದವುಇವಳ ಸುತ್ತುವ ಹುಡುಗರೆಲ್ಲಾ ನನ್ನಾಕೆಯ ಚೆಲುವೆಗೆ 
ಚುಚ್ಚುವ ದುಂಬಿಗಳು ಅನ್ನಿಸುತ್ತಿತ್ತುಅವಳ ಪರಿಚಯವಾಯಿತುಅದು ಸ್ನೇಹವಾಯಿತು.
 
ನಂತರ ಪ್ರೇಮಜೀವನದಲ್ಲಿ ಇದಕ್ಕಿಂತ ಮಧುರವಾದದ್ದು ಯಾವುದು ಇಲ್ಲ ಅನಿಸಿತು
ಅದು ಈಗಲೂ ಮಧುರವಾದದ್ದು ಕೂಡಅವಳ ನಗು ಮುಖ ನನ್ನನ್ನು ಯಾವಾಗಲು
 
ಸೆಳೆಯುತ್ತಿತ್ತು ಕಣ್ಣುಗಳ ಸೆಳೆತ ಈಗಲೂ ನನ್ನ ಕಾಡುತ್ತಿದೆಅವಳು ಮುನಿಸಿಕೊಂಡರೆ,
 
ಸಣ್ಣ ಹುಸಿಕೋಪ ತೋರಿದರೆ ನಾನು ನನಗೇನೂ ಗೊತ್ತಿಲ್ಲದಂತೆ ನಟಿಸುತ್ತಿದ್ದೆನನಗೆ
 
ಅವಳ ಹುಸಿಕೋಪದ ಮುಖ ನೋಡಬೇಕಿತ್ತುನೋಡಿ ಮನಸ್ಸಿನಲ್ಲಿಯೇ ಆನಂದಗೊಂಡಿದ್ದೆ.
 
ಅಲ್ಲಿಯೂ ಅವಳ ಮುಖ ನನ್ನನ್ನು ಕಾಡುತ್ತಿತ್ತುನಂತರ ನಿಧಾನವಾಗಿ ನನ್ನ ತಲೆ ಮೇಲೆ
 
ಹೊಡೆಯುತ್ತಿದ್ದಳುತಲೆ ಕೂದಲನ್ನು ಕೆದರಿಸಿ ಬಿಡುತ್ತಿದ್ದಳುನಾನು ‘ಹೇ ಛೇ‘, ಅಂದಾಕ್ಷಣ
 
ನಗುತ್ತಿದ್ದಳು ನಗು ನನಗೆ ಸಾಕಾಗಿತ್ತುಇಷ್ಟೇನಇಲ್ಲಅವಳೆಂದರೆ ಸಂತೋಷದ
 
ಭಂಡಾರಅಪಾರಆದರೆ ವಿಧಿಯ ಎಣಿಕೆಯೆ ಬೇರೆಯಾಗಿತ್ತು ಭಂಡಾರ ಈಗ 
ಬೇರೆಯವರ ಸ್ವತ್ತುಆದರೆ ಕಾಡುವ ಕಣ್ಣುಗಳೇ ನನಗೆ ಸ್ಪೂರ್ತಿ ಕಣ್ಣುಗಳನ್ನ ಮಾತ್ರ
 
ಇಂದು ನೆನಪಿನಲ್ಲಿಟ್ಟುಕೊಂಡಿದ್ದೇನೆಅವಳನ್ನು ಮರೆಯುತ್ತಿದ್ದೇನೆ.
 
ಅವಳ ನೆನಪು ಎಂದಿಗೂ ಹಸಿರು ನನ್ನೊಂದಿಗೆನನ್ನ ಹಾಗೆ ಸಿಕ್ಕ ಬೇರೆ ಕೈಗಳ ಹೃದಯಗಳಿಗೆ.