ಅಭಿಮಾನಿ

ನಾ ನಿಮಗೆ…


1 ಟಿಪ್ಪಣಿ

ಬಂತೊಂದು ಹೊಸ ವರುಷ

ಹಳೆದು ಬಸವಳಿದು
ಕಳೆದೋಯಿತೊಂದು ವರುಷ
ನಲಿದು ನೆಗೆನೆಗೆದು
ಬಂತೊಂದು ಹೊಸ ವರುಷ
 
ಅಂತೆ-ಕಂತೆಯೆಲ್ಲ
ಏಕೆ ಬೇಕು ಬಾಳಲಿ
ಚಿಂತೆ-ಗಿಂತೆಯೆಲ್ಲ
ಮರೆತು ಬಾಳು ಹಸನಾಗಲಿ
 
ಕಂಡ ಕನಸುಗಳು
ನೂರು ಇವೆ ಜೊತೆಯಲಿ
ನಮ್ಮ ಮನಸುಗಳು
ದುಡಿದು ಕನಸೆಲ್ಲ ನನಸಾಗಲಿ
 
ವರುಷವಿಡಿ ಇರಲಿ
ಎಲ್ಲ ನಲಿದಾಡೋ  ಸಂಭ್ರಮ
ನೋವುಗಳೆಲ್ಲ ಮರೆಯಲಿ
ಸುಖಿಸುತ ಆರೋಗ್ಯ ಕ್ಷೇಮ
 
ಹೊಸ ವರುಷವೊಂದು
ಕೋರುತಿದೆ ನಿಮಗೆ ಶುಭಾಶಯ
ವರುಷದ ಹರ್ಷವೊಂದು
ಕಾಯುತಿದೆ ನಿಮ್ಮನ್ನೇ ಮಹಾಶಯ
Advertisements


3 ಟಿಪ್ಪಣಿಗಳು

ಮೌನವೇ ಮಾತಾಗಿ

ನಡೆದು ಬಾ ಬಳಿಗೆ
ಸುಮ್ಮನೆ ಹಾಗೆ
ಮಾತೊಂದು ಆಡಬೇಡ
ನಗುವೊಂದಿರಲಿ ಜೊತೆಗೆ
 
ಕಣ್ಣುಗಳೇ ಮಾತಾಡುವಾಗ
ಬೇರೆ ಮಾತೇಕೆ ಈಗ
ಮೌನದಿ ಹೃದಯದ ಭಾಷೆ
ಕೇಳಲು ಎಂಥ ಸೊಗಸೆ
 
ಪ್ರೀತಿಯ ಮೂಟೆ ಹೊತ್ತು
ಅದರಲಿ ಸಾವಿರ ಕನಸನಿತ್ತು
ಜೊತೆ ಬಾರೆ ಮೆಲ್ಲಗೆ
ಮೌನದ ಆಭರಣ ಇರಲಿ ತೆಳ್ಳಗೆ
 
ಮೌನದಿ ಬೇಡ ಮಾತಿನ ಮೋಹ
ಆರದು ಎಂದು ಪ್ರೀತಿಯ ದಾಹ
ನೀನಿರದ ಸನಿಹ
ಭರಿಸಲಾಗದು ವಿರಹ


ನಿಮ್ಮ ಟಿಪ್ಪಣಿ ಬರೆಯಿರಿ

ನೆರೆ ಹೊರೆ

 

ನೆಲ ಬಿರಿದಿತ್ತು
ಕಾಣಲೊಂದು ಹುಲ್ಲು ಇರಲಿಲ್ಲ
ಮೈಯನ್ನೆ ಸುಡುವ ಬಿಸಿಲು
ಸ್ವಚ್ಛ ನೀಲಿ ಆಕಾಶದ ಹೊರತು
ಜೀವ ತಣಿಸೋ
ಮಳೆಯ ಮೋಡಗಳಿರಲಿಲ್ಲ

ರೈತ ಆಕಾಶಕೆ ಕೈ ಮುಗಿದಾಯಿತು
ತಲೆ ಮೇಲೆ ಕೈ ಹೊತ್ತು ಕೂರಬೇಕಾಯಿತು
ಊರದೇವರ ಜಾತ್ರೆಯಾಯಿತು
ಕಪ್ಪೆಗಳ ಮದುವೆಯಾಯಿತು
ಇಲ್ಲ ಇಲ್ಲ
ಒಂದೇ ಒಂದು ಹನಿ ಮಳೆಯಾಗಲಿಲ್ಲ

ಎಲ್ಲೆಡೆ ನಿಟ್ಟುಸಿರು
ಸಾಲದ ಕರಿನೆರಳು
ಸಾವಿಗೆ ಶರಣಾಯಿತು ಜೀವ
ಬಿರಿದ ಹೊಲದಲ್ಲಿ ವಿಷ ಕುಡಿದ ದೇಹ
ಒಣಗಿದ ಮರದಲ್ಲೂ ನೇತಾಡಿತು ಜೀವ
ಕಣ್ಣೀರೊಂದೇ ಕಾಣಬೇಕಾಯಿತು

ಅದೊಂದು ಮಳೆ
ಎಲ್ಲಿ ಅಡಗಿತ್ತೋ
ಭುವಿ-ಬಾನು ಒಂದಾಗುವಂತೆ ಗುಡುಗಿತು
ಅಬ್ಬಾ! ಅದೇನು ಮಳೆಯೋ?
ನೆಲ-ಜನ-ಪ್ರಾಣಗಳೆಲ್ಲ ಅಯೋಮಯ
ನೀರು-ನೀರೆಂದು ಹಾತೊರೆದವರ
ಮನೆಯೇನು, ಪ್ರಾಣವು ನಡುಗಿತು

ನೊಂದ ಮನದ ಆಕ್ರಂದನಕೆ
ಹಲವು ಹೃದಯಗಳು ಮಣಿದವು
ತುಂಬಿದ ಹೊಳೆಯಂತೆ ಹರಿದಿತು
ನೆರವಿನ ಮಹಾಪೂರ
ನವಗ್ರಾಮಗಳ ನಿರ್ಮಾಣಕೆ
ಬುನಾದಿ ಹಾಕಿದರು ಹಲವರು

ಇಚ್ಚಾಶಕ್ತಿ ಮೆರೆಯಲಿ ಮೇಲಾಗಿ
ದುಡಿಯಲಿ ಎಲ್ಲ ಸಕ್ರಿಯವಾಗಿ
ನೊಂದವರ ಕಣ್ಣೀರು ಒರೆಸಲಿ
ರಾಜ್ಯವಾಳುವ ಕೈಗಳು
ನಲುಗಿದವರು ಮತ್ತೊಮ್ಮೆ ನಸುನಗಲಿ
ಹಸಿದವರ ಬದುಕು ಹಸನಾಗಲಿ


ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡ ಚುಟುಕಗಳು-೨

೧. ಇವಳ ನೋಡುತಲಿದ್ದರೆ
 ವರ್ಷಗಳು ನಿಮಿಷದಂತೆ ತೋರುವವು
ಇವಳು ಅಲಂಕಾರಕೆ ನಿಂತರೆ
ನಿಮಿಷಗಳೆಲ್ಲಿ ವರ್ಷಗಳೇ ಬೇಕಾಗುವವು
 
೨. ನಾನು ಸದಾ ಒಂಟಿ ಸಂಚಾರಿ
ಏಕೆಂದರೆ
ನನ್ನವಳ ಜೊತೆಗೆ ಹೊರಟರೆ
ಜೇಬಿಗೆ ಖಂಡಿತ ಕತ್ತರಿ