ಅಭಿಮಾನಿ

ನಾ ನಿಮಗೆ…

ಕನ್ನಡ ಎಸ್ಸೆಮ್ಮೆಸ್ಸು-4 (Kannada SMS)

4 ಟಿಪ್ಪಣಿಗಳು

೧. ಸರ್ದಾರ್: ಕರೆಂಟು ಆಫ್ ಆದರೂ ಸ್ವಲ್ಪ ಹೊತ್ತು ಉರಿಯೊ ೧ ಬಲ್ಬ್ ಕೊಡಪ್ಪ

ಸೇಲ್ಸ್ ಮ್ಯಾನ್: ಅದು ಹೇಗೆ?

ಸರ್ದಾರ್: ಫ್ಯಾನ್ ಆಫ್ ಆದರೂ ಸ್ವಲ್ಪ ಹೊತ್ತು ಸುತ್ತುತ್ತಲ್ಲ ಹಾಗೆ

ಸಿಂಗ್ ಇಸ್ ಕಿಂಗ್

೨. ಟೀಚರ್: ಮಕ್ಕಳೆ ಆನೆ ದೊಡ್ಡದಾ ಅಥವ ಇರುವೆ ದೊಡ್ಡದಾ?

ಸರ್ದಾರ್ ಮಗ: ಸುಮ್ಸುಮ್ನೆ ಹಾಗೆ ಉತ್ತರ ಹೇಳೋಕೆ ಹಾಗಲ್ಲ ಮೇಡಮ್, ಅವುಗಳ ಡೇಟ್ ಆಫ್ ಬರ್ತ್ ಬೇಕು

೩. “ಯಾರು ನಿಮ್ಮನ್ನು ಪ್ರೀತಿಸುತ್ತಾರೋ ನಿಮ್ಮನ್ನು ಹೆಚ್ಚು ಗೋಳು ಓಯ್ಕೊಳ್ತಾರೆ, ಆದರೆ ನೀವು ಅತ್ತಾಗ    ನಿಮ್ಮ ಒಂದು ಹನಿ ಕಣ್ಣೀರು ತಡೆಯಲು ಇಡೀ ಜಗತ್ತಿನೊಂದಿಗೆ ಹೋರಾಡುತ್ತಾರೆ. ಅವರನ್ನು ಉಳಿಸಿಕೊಳ್ಳಿ ಎಂದಿಗೂ”

೪. ಹುಡುಗಿಯರ ಹಿಂದೆ ಯಾಕೆ ಬೀಳ್ತೀಯ ದಡ್ಡ

ಅವರಿಗಾಗಿ ಯಾಕೆ ವೇಸ್ಟ್ ಮಾಡ್ತೀಯ ದುಡ್ಡ

ಅವಳು ಸಿಗದಿದ್ದಾಗ ಬಿಡ್ತೀಯ ಮೀಸೆ ಗಡ್ಡ

ಅವಳು ಕೈ ಕೊಟ್ಟಾಗ ಹುಡುಕ್ತೀಯ ತಪಸ್ಸಿಗೆ ಗುಡ್ಡ

೫. ಸಣ್ಣ ಕೋಪ,

ಪುಟ್ಟ ವೈಮನಸ್ಸು,

ಗೇಲಿ ಮಾಡೋ ಎಸ್ಸೆಮ್ಮೆಸ್ಸು,

ಪ್ರೀತಿಯ ಭಾವನೆ,

ಒಂದು ಸ್ವಲ್ಪ ಕಾಳಜಿ,

ಒಂದು ಸ್ವಲ್ಪ ಸಹಾಯ,

ಕೆಲವು ಹಸಿ ಸುಳ್ಳು,

ಮಧ್ಯದಲ್ಲಿ ಎಲ್ಲಿಯಾದರು ಒಂದು sorry,

ಸೇರಿದರೆ “ಗೆಳೆತನ”

೬. ಒಂದು ತುಂಬಾ ಮುಖ್ಯವಾದ ವಿಷಯ:

“ನಾವು ಒಂದು ಪೆನ್ನು ಕಳೆದುಕೊಂಡರೆ ಮತ್ತೊಂದು ಪೆನ್ನು ಕೊಂಡುಕೊಳ್ಳಬಹುದು, ಆದರೆ…..

ಆದರೆ………

ನಾವು ಒಂದು ಪೆನ್ನಿನ ಕ್ಯಾಪ್ ಕಳೆದುಕೊಂಡರೆ ಮತ್ತೊಂದು ಪೆನ್ನಿನ ಕ್ಯಾಪ್ ಕೊಂಡುಕೊಳ್ಳಲು ಆಗದು”

೭. ಒಂದು ವಿಷಾದದ ಕಥೆ:

ಪ್ರೇಮಿಯೊಬ್ಬಳು ತನ್ನ ಪ್ರೇಮಿಗೊಂದು ಸವಾಲನ್ನು ನೀಡಿದಳು

ಯಾವುದೇ ರೀತಿ ತನ್ನನ್ನು ನೋಡದೆ, ಮಾತಾಡಿಸದೆ, ಸಂಪರ್ಕಿಸದೆ ಒಂದು ದಿನ ಇರಬೇಕು. ಗೆದ್ದರೆ ನಿನ್ನನ್ನು ನಾನು ಎಂದೆಂದಿಗೂ ಪ್ರೀತಿಸುತ್ತೇನೆ ಎಂಬುದು ಸವಾಲಾಗಿತ್ತು

ತನ್ನ ಪ್ರೇಮಿ ಬದುಕಿರುವುದು ಕೇವಲ ಕೆಲವೇ ಗಂಟೆಗಳು ಎಂದು ತಿಳಿಯದ ಪ್ರೇಮಿ ಅದಕ್ಕೆ ಒಪ್ಪಿಕೊಂಡ. ಅವಳಿಗೆ ಕ್ಯಾನ್ಸರ್ ಇದೆ ಎಂಬುದು ಅವನಿಗೆ ಗೊತ್ತಿರಲಿಲ್ಲ.

ಯಾವುದೆ ಫೋನ್ ಕಾಲ್ ಇಲ್ಲದೆ, ಎಸ್ಸೆಮ್ಮೆಸ್ಸು ಇಲ್ಲದೆ ೨೪ ಗಂಟೆಗಳ ತರುವಾಯ ಆ ಪ್ರೇಮಿ ಅವಳ ಮನೆಗೆ ಬಂದ, ಅವಳು ಸತ್ತಿರುವುದು ನೋಡಿ ಅವನ ಕಣ್ಣಲ್ಲಿ ನೀರು.

ಅಲ್ಲೊಂದು ಚೀಟಿ ಅವನಿಗಾಗಿ ” ನೀನು ನಿನ್ನ ಸವಾಲನ್ನ ಗೆಲ್ಲುತ್ತೀಯ ಅಂತ ನನಗೆ ಗೊತ್ತಿತ್ತು, ನನಗಾಗಿ ಪ್ರತಿದಿನ ಹೀಗೆ ಮಾಡುವೆಯ?”

೮. ನಮ್ಮೊಳಗಿನ ಈ ಮಧುರ ಸ್ನೇಹ

ಸದಾ ಕಾಲ ನಗುತಿರಲಿ

ಮರುಜನ್ಮವೊಂದಿದ್ದರೆ ಮತ್ತೆ ಮತ್ತೆ ನನಗೆ ನಿಮ್ಮ ಸ್ನೇಹ ಸದಾ ಸಿಗಲಿ

“ಸ್ನೇಹಿತರ ದಿನಾಚರಣೆಯ ಶುಭಾಶಯಗಳು”

೯. ಅಮ್ಮನಿಗೆ ಕಂದನ ತುಂಬಾ ಸೂಕ್ತ ಮತ್ತು ಪ್ರೀತಿಯ ಮಾತುಗಳು

“ನಿನ್ನನ್ನು ತೋರಿಸಿಕೊಟ್ಟಿದ್ದಕ್ಕೆ ನಿನಗಿಂತ ನಾನು ದೇವರನ್ನ ಹೆಚ್ಚು ಪ್ರೀತಿಸಲೆ ಅಥವಾ

ದೇವರನ್ನ ತೋರಿಸಿಕೊಟ್ಟಿದ್ದಕ್ಕೆ ದೇವರಿಗಿಂತ ನಿನ್ನನ್ನು ನಾನು ಹೆಚ್ಚು ಪ್ರೀತಿಸಲೆ”

Advertisements

Author: sundaranadu

Kannada koosina kosambari

4 thoughts on “ಕನ್ನಡ ಎಸ್ಸೆಮ್ಮೆಸ್ಸು-4 (Kannada SMS)

  1. thunba chennagide

    oddide nima kavana
    nimage heluthini namana

  2. thunba chennagide
    adare Inu vibinavagidhare Chenna

  3. ಬಹಳ ಚೆನ್ನಾಗಿದ್ದಾವೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s