ಅಭಿಮಾನಿ

ನಾ ನಿಮಗೆ…


2 ಟಿಪ್ಪಣಿಗಳು

ಅವಳ ಹೆಸರಲ್ಲಿ ಏನೂ ಬರೆಯಬಹುದು…

ಅವಳ ಹೆಸರಲ್ಲಿ ಏನೂ ಬರೆಯಬಹುದು… ಹೌದೋ ಅಲ್ಲವೋಗೊತ್ತಿಲ್ಲ
ಆದರೆ ಬರೆಯಲು ಕೂತಾಗ ಅವಳೇ ನನಗೆ ಸಾಮಗ್ರಿಯಾಗಿ ಬಿಡುತ್ತಾಳೆ
ನಾನೊಬ್ಬನೇ ಅಲ್ಲ ಜಗದ ಸಾವಿರಾರುಲಕ್ಷಾಂತರ ಕೈಗಳಿಗೆ ಅವಳೇ 
ವಸ್ತುವಾಗಿ ಬಿಡುತ್ತಾಳೆಅವಳೆಂದರೆ ಪ್ರೀತಿಸಿದ ಹೃದಯಗೆಳತಿಸಂಗಾತಿ
ಸಖಿ..
 
ನಾನು ಇವಳನ್ನು ನೋಡುವ ಮೊದಲು ನಾನು ನಾನಾಗಿದ್ದೆಒಬ್ಬ ಸಾಮಾನ್ಯ 
ಹುಡುಗಗೆಳೆಯರ ಜೊತೆ ಆಡಿಕೊಳ್ಳುತ್ತಿದ್ದೆಮಸ್ತ್ ಮಜವಾಗಿತ್ತು ಲೈಫುಇವಳ
 
ಪರಿಚಯವಾದ ಮೇಲೆ ಒಂದು ಸಲ ನಾನು ಯಾಕೋ ಮೊದಲಿನಂತಿಲ್ಲ ಅನಿಸಿತು
ಅನಿಸಿಕೆ ಹಾಗೆ ಮುಂದುವರಿಯಿತುನನಗಿಂತ ಮೊದಲೇ ಇವಳ ಸಂಗಕ್ಕೆ ಬಂದ
 
ಎಷ್ಟೋ ಕೈಗಳು ರಚಿಸಿದ ಸಾಲುಗಳು ನನಗೀಗ ಅರ್ಥವಾಗತೊಡಗಿದವುಅವರ
 
ಉತ್ಸುಕತೆವಿರಹಪ್ರೇಮ ಅರ್ಥವಾಗುತ್ತಿದೆ ಅನಿಸಿತುಅವಳನ್ನು ನೋಡಿದ 
ಮೇಲೆ ಸ್ವರ್ಗದ ಅಪ್ಸರೆ ನೋಡುತ್ತಿದ್ದೇನೆ ಅನ್ನಿಸಿತುಲತೆಹಂಸಕೋಗಿಲೆನವಿಲುಗಳು
 
ಹೋಲಿಕೆಗೆ ಬಂದವುಇವಳ ಸುತ್ತುವ ಹುಡುಗರೆಲ್ಲಾ ನನ್ನಾಕೆಯ ಚೆಲುವೆಗೆ 
ಚುಚ್ಚುವ ದುಂಬಿಗಳು ಅನ್ನಿಸುತ್ತಿತ್ತುಅವಳ ಪರಿಚಯವಾಯಿತುಅದು ಸ್ನೇಹವಾಯಿತು.
 
ನಂತರ ಪ್ರೇಮಜೀವನದಲ್ಲಿ ಇದಕ್ಕಿಂತ ಮಧುರವಾದದ್ದು ಯಾವುದು ಇಲ್ಲ ಅನಿಸಿತು
ಅದು ಈಗಲೂ ಮಧುರವಾದದ್ದು ಕೂಡಅವಳ ನಗು ಮುಖ ನನ್ನನ್ನು ಯಾವಾಗಲು
 
ಸೆಳೆಯುತ್ತಿತ್ತು ಕಣ್ಣುಗಳ ಸೆಳೆತ ಈಗಲೂ ನನ್ನ ಕಾಡುತ್ತಿದೆಅವಳು ಮುನಿಸಿಕೊಂಡರೆ,
 
ಸಣ್ಣ ಹುಸಿಕೋಪ ತೋರಿದರೆ ನಾನು ನನಗೇನೂ ಗೊತ್ತಿಲ್ಲದಂತೆ ನಟಿಸುತ್ತಿದ್ದೆನನಗೆ
 
ಅವಳ ಹುಸಿಕೋಪದ ಮುಖ ನೋಡಬೇಕಿತ್ತುನೋಡಿ ಮನಸ್ಸಿನಲ್ಲಿಯೇ ಆನಂದಗೊಂಡಿದ್ದೆ.
 
ಅಲ್ಲಿಯೂ ಅವಳ ಮುಖ ನನ್ನನ್ನು ಕಾಡುತ್ತಿತ್ತುನಂತರ ನಿಧಾನವಾಗಿ ನನ್ನ ತಲೆ ಮೇಲೆ
 
ಹೊಡೆಯುತ್ತಿದ್ದಳುತಲೆ ಕೂದಲನ್ನು ಕೆದರಿಸಿ ಬಿಡುತ್ತಿದ್ದಳುನಾನು ‘ಹೇ ಛೇ‘, ಅಂದಾಕ್ಷಣ
 
ನಗುತ್ತಿದ್ದಳು ನಗು ನನಗೆ ಸಾಕಾಗಿತ್ತುಇಷ್ಟೇನಇಲ್ಲಅವಳೆಂದರೆ ಸಂತೋಷದ
 
ಭಂಡಾರಅಪಾರಆದರೆ ವಿಧಿಯ ಎಣಿಕೆಯೆ ಬೇರೆಯಾಗಿತ್ತು ಭಂಡಾರ ಈಗ 
ಬೇರೆಯವರ ಸ್ವತ್ತುಆದರೆ ಕಾಡುವ ಕಣ್ಣುಗಳೇ ನನಗೆ ಸ್ಪೂರ್ತಿ ಕಣ್ಣುಗಳನ್ನ ಮಾತ್ರ
 
ಇಂದು ನೆನಪಿನಲ್ಲಿಟ್ಟುಕೊಂಡಿದ್ದೇನೆಅವಳನ್ನು ಮರೆಯುತ್ತಿದ್ದೇನೆ.
 
ಅವಳ ನೆನಪು ಎಂದಿಗೂ ಹಸಿರು ನನ್ನೊಂದಿಗೆನನ್ನ ಹಾಗೆ ಸಿಕ್ಕ ಬೇರೆ ಕೈಗಳ ಹೃದಯಗಳಿಗೆ.

Advertisements


1 ಟಿಪ್ಪಣಿ

ಪ್ರಿಯ ಹೃದಯವೇ ನೀನು ಓದದ ಕೊನೆಯ ಪತ್ರ

ಹಾಯ್ ಲಿಲ್ಲಿ,
ನಾನು ಬರೆಯೋದನ್ನ ನಿಲ್ಲಿಸೋ ಕಾಲ ಬಂದಿದೆ ಅನ್ನಿಸುತ್ತೆಅಷ್ಟಕ್ಕೂ ನಾನು ಏನು ಬರೆದಿಲ್ಲ
ನಿನಗೆ ಒಂದು ಪತ್ರವನ್ನು ಬಿಟ್ಟುಅದನ್ನು ನಾನು ಕೊಡದೇ ಇಟ್ಟುಕೊಂಡುಬಿಟ್ಟೆ (ನಿನಗೆ ಕೊಡಲು ಹೆದರಿಕೆಯಾಗಿ). 
ಹೋಗಲಿ ಬಿಡುನಾನು ಈಗ ಬರೆಯೋ ಕಾಗದ ಕೂಡ ನಿನಗೆ ತಲುಪದೇ ಇರಬಹುದುನಾನು
ನಿನ್ನ ತಲುಪದೇ ಇರೋ ಹಾಗೆಮನಸ್ಸಿನಲ್ಲಿರೋ ಪ್ರೀತಿ ನಿನಗೆ ಅರ್ಥ ಆಗುತ್ತಾ ಅನ್ನೋದೇ
ನನಗಿರುವ ಸಂಶಯಇಷ್ಟು ಕಾಲ ನಿನ್ನ ಹೆಸರಿನಲ್ಲೇ ಕೆಲವು ಸಾಲುಗಳನ್ನ ಬರೆಯುತ್ತಿದ್ದೆಅದಕ್ಕೆ
ಕೆಲವೊಂದು ಸಲ ಪದ್ಯ ಎನ್ನುತ್ತಿದ್ದೆಕೆಲವೊಂದು ಸಲ ಗದ್ಯ ಎನ್ನುತ್ತಿದ್ದೆಮುಂದೆ ಏನೆಂದು ಹೇಳುವುದು?
ನೀನು ನನ್ನ ಬಿಟ್ಟು ಹೊರಟು ನಿಂತಿದ್ದೀಯನನ್ನಲ್ಲಿರುವ ಕೆಲವು ಸಾಲುಗಳು ಹೊರಬರುತ್ತಿವೆಇವೆ ಕೊನೆಯ
ಸಾಲುಗಳೇನೋಬಹುಶಃ ನಿನಗೆ ಅನ್ನಿಸಿರಬಹುದು ನನ್ನಲ್ಲಿ ಪ್ರೀತಿಯೆಂಬುದು ಬಾರಿ ಆಕರ್ಷಣೆಯಾಗಿತ್ತು
 
ಮತ್ತು ಅದೀಗ ಸತ್ತು ಹೋಗಿದೆಯೆಂದುನಿಜ ಹೇಳ್ತೀನೇಲಿಲ್ಲಿಅದು ಸಾಯುವ ಕೂಸಲ್ಲಅದು ಬಂಡೆಗಲ್ಲು
ಒಡೆದರೆ ಚೂರಾಗಿ ಮಣ್ಣಾಗುವುದುನೆಲದ ಮೇಲೋನೀರಿನ ಕೆಳಗೋ ಇದ್ಡುಬಿಡುತ್ತೆಅದರ
ಪಾಡಿಗೆ ಅದು.

ನಾನು ನಿನಗೆ ಇಷ್ಟ ಆಗಿಲ್ಲ ಅನ್ನೋದು ನನಗೆ ಗೊತ್ತುಯಾಕೆಂದರೆ ನಿನ್ನಲ್ಲಿರುವ ಹಣಗುಣರೂಪ
ಯಾವುದು ನನ್ನಲ್ಲಿಲ್ಲನಿನಗೆ ಇಷ್ಟವಾಗೋ ಹುಡುಗ ಹೇಗಿರಬೇಕು ಅನ್ನೋದು ನನಗೆ ಗೊತ್ತಿಲ್ಲನಿನ್ನ ತಂದೆ 
ತಾಯಿ ತೋರಿಸಿದ ಹುಡುಗನನ್ನೇ ನಿನ್ನ ತಮ್ಮನಿಗೆ ಭಾವನನ್ನಾಗಿ ಮಾಡುತ್ತೀಯೆಂದು ನನಗೆ ಗೊತ್ತುಅದೆಲ್ಲ
ಹಾಳಗಿ ಹೋಗಲಿ ಬಿಡುಒಟ್ಟಾರೆ ನೀನು ನನ್ನನ್ನ ಮರೆತುಮತ್ತೆಂದೂ ಕಾಣಿಸಿಕೊಳ್ಳದಂತೆ ಸಂತೋಷವಾಗಿ
 
ಹೋಗುತ್ತಿದ್ದೀಯನಾನು ನಿಸ್ವಾರ್ಥ ಪ್ರೇಮಿಯಾಗಬೇಕೆಂದಿದ್ದೆಆದರೆ ನಿನ್ನ ಪ್ರೀತಿ ಹಮ್ಬಲಿಸಿ ಸ್ವಾರ್ಥಿಯಾದೆ.

ನಿನ್ನ ಆಸೆಕನಸುಗಳು ಚಿರಾಯುವಾಗಲಿನನ್ನ ಪ್ರೀತಿ ಸಾಯದಿರಲಿ.

ಕೊನೆಗೊಳ್ಳದ ಪ್ರೀತಿಯಿಂದ
ರಾಜ್1 ಟಿಪ್ಪಣಿ

ದೀಪಾವಳಿಯ ನೆನೆದು

ಕೈಯಲ್ಲಿ ಎಣ್ಣೆ ಕ್ಯಾನ್ ಹಿಡಿದು
ಅಮ್ಮ ಇಟ್ಟ ದೀಪಗಳ ಕಡೆಗೆ ನಡೆದು
ಬತ್ತಿ ಸರಿಮಾಡಿ ಎಣ್ಣೆ ಸುರಿದು
ದೀಪ ಹಚ್ಚಿದ ನೆನಪು
ಅಪ್ಪ ಮನೆಯ ಹೊರಗೆ
ಬಲ್ಬಿನ ದೀಪದ ಮಾಲೆಯ ಹಚ್ಚಿ
ನೋಡೋ ಹೆಂಗೆ‘ ಅಂದಾಕ್ಷಣ
ಎಲ್ಲ ಸೂಪರ್ಆದರೆ ಇನ್ನೊಂದು
ಲೈನ್ ಹಾಕಬೇಕಿತ್ತು‘ ಅಂತಿದ್ದೆ
ಅಪ್ಪನ ಬಳಿ ಹತ್ತು ರೂಪಾಯಿ
ಅಮ್ಮನ ಹತ್ತಿರ ಐದು ರೂಪಾಯಿ
ಅತ್ತು ಕರೆದು ಪೀಕುತ್ತಿದ್ದೆ
ಎದ್ದು ಬಿದ್ದು ಅಂಗಡಿಗೆ
ಓಡಿದ ನೆನಪು
ಕೈಯಲ್ಲಿ ತರಚಿದ ಗಾಯದ ಕುರುಹು
ಚಿನಕುರುಳಿರಾಕೆಟ್ ಹಿಡಿದು ಆಡಿದ ನೆನಪು
ತಮ್ಮನ ರಾಕೆಟ್ ಎಗರಿಸಿ ಹಾರಿಸಿದ್ದು
ಅದು ಯಾರದೋ ಬೆನ್ನಿಗೆ ಗುದ್ದಿದ್ದು
ನಂತರ ಹೊಡೆದಾಟ…

ಇಂದು ತರಹೇವರಿ ಪಟಾಕಿಯುಂಟು
ಹಬ್ಬಕೆ ಹೋಗುವ ಆಸೆಯೂ ಉಂಟು
ಹಣಕ್ಕೆ ಅಪ್ಪನ ಕೇಳುವ ಹಾಗಿಲ್ಲ
ಬೇಡುತಲಿರುವೆನು ದೇವರಕಂಪನಿ ನನಗೆ
ನಾಲ್ಕು ದಿನ ರಜೆ ನೀಡಲಿ ಎಂದು


ನಿಮ್ಮ ಟಿಪ್ಪಣಿ ಬರೆಯಿರಿ

ನೋಡಿ ಆನಂದಿಸಿ…..

ಸ್ನೇಹಿತರೊಬ್ಬರು ಕಳುಹಿಸಿದ್ದುನೀವು ನೋಡಿ ಆನಂದಿಸಿ………


2 ಟಿಪ್ಪಣಿಗಳು

ಕಥೆ ಹೇಳೋದಾಗಲಿ….

ಕಥೆ ಹೇಳೋದಾಗಲಿಕಥೆ ಬರೆಯೋದಾಗಲಿ ಒಂದು ಕಲೆಕಥೆಯೊಂದನ್ನ ತೆರೆದು ಓದುತ್ತಾ
 
ಅಥವಾ ಕೇಳುತ್ತಾ ಕುಳಿತರೆನಮ್ಮ ಎದುರಿಗೆ ಘಟನೆಗಳು ನಡೆಯುತ್ತಿವೆ ಅಥವಾ ನಮ್ಮ
 
ಕಥೆಯೇನಾದರೂ ನಾವೇ ಓದುತ್ತಿದ್ದೇವೆ ಅನ್ನಿಸಿಬಿಡಬೇಕುಕಥೆಯೆನ್ದ್ರೆ ಹಾಗಿರಬೇಕು.
ನಮ್ಮಲ್ಲಿ ಅಂತಹ ಹತ್ತಾರು ಕಥೆಗಾರರು ಇದ್ದಾರೆಇದ್ದರುರವಿ ಬೆಳಗೆರೆಕೆಪಿಪೂರ್ಣಚಂದ್ರ 
ತೇಜಸ್ವಿ. (ನಾನು ಹೆಚ್ಚಿಗೆ ಓದಿದ್ದು ಇವರ ಬರಹಗಳನ್ನೇ). ಕೆಪಿಪೂಅವರ ಕಾಡಿನ ಕಥೆಗಳನ್ನ
 
ಓದುತ್ತಿದ್ದರೆ ಕಾಡಿನ ದೃಶ್ಯಗಳುಅಲ್ಲಿನ ಆಗಿನ ಜನ ಜೀವನನರಭಕ್ಷಕಗಳ ಭಯಾನಕ 
ದೃಶ್ಯಗಳು ನಮ್ಮ ಕಣ್ಮುಂದೆ ಬರುತ್ತವೆರವಿ ಬೆಳಗೆರೆಯವರ ಕಾದಂಬರಿಗಳನ್ನ ಓದೋಕೆ ಶುರು 
ಮಾಡಿದರೆ ಅದನ್ನ ಓದಿ ಮುಗಿಸೋ ತನಕ ಏನು ಬೇಡವಾಗುತ್ತೆ. (ನಾನು ಓದಿದ್ದು ‘ನೀ ಹೀಂಗ 
ನೋಡಬೇಡ ನನ್ನ‘, ನೀವು ಓದಿಲ್ಲದಿದ್ದರೆ ಒಮ್ಮೆ ಓದಿ ನೋಡಿಇದು ನನ್ನ ರಿಕ್ವೆಸ್ಟ್). ಹೀಗೆ ಓದಿಸಿಕೊಳ್ಳೋ 
ಲೇಖಕರು ಬೇಕು ನಮಗೆಲ್ಲಬಹುದೊಡ್ಡ ನಿಘಂಟು ಇಟ್ಕೊನ್ದುಲೇಖನಗಳನ್ನಕಥೆಕಾದಂಬರಿ 
ಓದೋದು ನನಗೆ ಸಾಧ್ಯವಿಲ್ಲಮತ್ತೊಂದು ಹೆಸರನ್ನ ಹೇಳೋದು ಮರೆತೆನರಸಿಂಹಯ್ಯನವರುಅವರ 
ಪತ್ತೇದಾರಿ ಕಾದಂಬರಿಗಳು ಸೂಪರ್.
ನಮ್ಮ ಬ್ಲಾಗ್‌ಗಿಗರು ಏನು ಕಡಿಮೆ ಇಲ್ಲಅವರು ಬೆರೆಯೋ ಬರಹಗಳು ನಿಜ ಜೀವನದ ಘಟನೆಗಳೇ ಆಗಿವೆ
ಅವರ ಬರವಣಿಗೆಯ ಶೈಲಿ ಕೂಡ ಚೆನ್ನಾಗಿದೆನನಗೆ ಈಗೆಲ್ಲ ಬರೆಯೋಕೆ ಆಗಲ್ಲ ಅನ್ನೋದೇ ಹೊಟ್ಟೆ 
ಉರಿಯ ಮಾತು.
ಏನು ಬರೀಬೇಕು ನನಗೆ ಗೊತ್ತಾಗ್ತಿಲ್ಲನನಗೆ ಅನ್ನಿಸ್ಸಿದ್ದನ್ನ ನಾನು ಬರೆದೆನಿಮಗೆ ಅನ್ನಿಸ್ಸಿದ್ದನ್ನ 
ನೀವು ಬರೆಯಿರಿಆದರೆ ನನಗೂ ಕಲಿಸಿಕೊಡಿ.


14 ಟಿಪ್ಪಣಿಗಳು

ನನ್ನ ಮೊದಲ ಲವ್ ಲೆಟರ್

ಹೈ ಡಿಯರ್ ಲಿಲ್ಲಿ,

ಹೌ ರ್ ಯು? ಈ ಲೆಟರ್ನ ಪೂರ್ತಿಯಾಗಿ ಓದು. ಇದು ನನ್ನ ಮೊದಲ ಲವ್ ಲೆಟರ್. ಹಾಗಾಗಿ ಈ ಲೆಟರ್ ಅನ್ನು ಮೊದಲಿನಿಂದ ಕೊನೆಯವರೆಗೆ ಸಂಪೂರ್ಣವಾಗಿ ಓದು, ನಂತರ ನೀನು ಪ್ರೀತಿಸದೇ ಹೋದರೂ ಪರವಾಗಿಲ್ಲ.

ನಾನು ರಾಜ್, ಎಮ್.ಎನ್.ಸಿ. ಕಂಪನಿ ಒಂದರಲ್ಲಿ ಕೆಲ್ಸ ಮಾಡ್ತಿದ್ದೀನಿ. ನಾನು ಕೆಲ್ಸ ಮಾಡೋ ಕಡೆ ಹತ್ತಾರು, ನೂರಾರು ಹುಡ್ಗೀರನ್ನ ನೋಡಿದ್ದೀನಿ. ನನ್ನ ಮನೆಯ ಎದುರುಗಡೆ ಲೇಡೀಸ್ ಪಿ.ಜಿ. ಇದೆ. ಅಲ್ಲೂ ಹತ್ತಾರು ಹುಡ್ಗೀರು ಇದ್ದಾರೆ. ನೋಡಲಿಕ್ಕೆ ಚೆನ್ನಾಗಿರೋರು ಇದ್ದಾರೆ. ಆದರೆ ಯಾಕೋ ನಿನ್ನ ನೋಡಿದ ಮೇಲೆ ಮತ್ಯಾರನ್ನು ನೋಡಬಾರದು ಅನ್ನಿಸಿತು. ಯಾಕೋ ಮನಸ್ಸು ಅಲ್ಲೇ ಸ್ಟ್ರಕ್ ಆಗಿ ಬಿಟ್ಟಿದೆ. ನನಗೆ ಇದೆ ಪ್ರೀತಿ ಅನಿಸಿತು. ಬುದ್ಧಿ ತುಂಬಾ ಯೋಚನೆ ಮಾಡ್ತು, ಇದು ಯಾವುದೇ ಇನ್‌ಫಾಚುಯೇಶನ್ ಅಲ್ಲ ಅಂತ ಕೂಡ ಬುದ್ಧಿ ಮನಸ್ಸಿಗೆ ಹೇಳಿತು. ನಾನು ನಿನ್ನ ನೋಡಿದ್ದು ಇದೆ ಮೊದಲ ಸಲ ಏನಲ್ಲ. ಇದು ಕ್ರಮೇಣ ಜರುಗಿದ್ದು. ನೀನು ಎಲ್ಲರಿಗಿಂತ ಚೆನ್ನಾಗಿದ್ದೀಯ ಅಂತ ನಾನು ನಿನಗೆ ಸುಳ್ಳು ಹೇಳಬೇಕಾಗಿಲ್ಲ. ನಾನೊಬ್ಬ ಫ್ಲರ್ಟ್ ಕೂಡ ಖಂಡಿತ ಅಲ್ಲ. ನನಗೆ ಹುಡ್ಗೀರಲ್ಲಿ ಫ್ರೆಂಡ್ಸ್ ಇದ್ದಾರೆ. ಆದರೆ ಗರ್ಲ್ ಫ್ರೆಂಡ್ ಇಲ್ಲ. ನೀನು ಬರಿ ನನ್ನ ಗರ್ಲ್ ಫ್ರೆಂಡ್ ಆಗಬೇಕು ಅಂತ ಪೀಠಿಕೆ ಆಗ್ತಾ ಇದ್ದೀನಿ ಅಂತ ಖಂಡಿತ ತಿಳ್ಕೋಬೇಡ. ನೀನು ನನ್ನ ಬಾಳಿ ನುದ್ದಕ್ಕೂ ಇರಬೇಕು, ಅದು ನನ್ನ ಆಸೆ. ನನ್ನ ಮನಸ್ಸಿಗೆ ಅನ್ನಿಸ್ಸಿದ್ದನ್ನ ನಿನಗೆ ನೇರವಾಗಿ ಹೇಳ್ತಾ ಇದ್ದೀನಿ. ಡೋನ್ಟ್ ಥಿಂಕ್ ಸಿಲ್ಲಿ.

ನಿನಗೆ ಈ ಲೆಟರ್ ಓದಿ, ಸ್ವಲ್ಪ ನಗು ಬಂದರೆ, ಓ ಕೆ, ಐ ವಿಲ್ ಆಲ್ಸೊ ಎಂಜಾಯ್ ಇನ್ ಯುವರ್ ಸ್ಮೈಲ್. ತಲೆನೋವು ಬರೋದಾದರೆ ಐ ಡೋನ್ಟ್ ಬಾದರ್ ಟೂ ಮಚ್. ಯಾಕೆಂದರೆ ಮನಸ್ಸಿನಲ್ಲಿ ಇರೋ ಸವಿ ಪ್ರೀತಿ ನಾನು ತಿಳಿಸುವುದಾದರೂ ಹೇಗೆ?

ಈ ಲೆಟರ್ ನ ಟೈಮ್ ಪಾಸ್‌ಗೆ ಬರೆದಿದ್ದು ಅಂತ ತಿಳ್ಕೋಬೇಡ. ನಾನು ನಿನಗೆ ನೇರವಾಗಿ ಹೇಳೋಣ ಅಂದುಕೊಂಡೆ. ಆದರೆ ಮಾತಾಡಿದಷ್ಟು, ಫಿಲ್ಮ್ನಲ್ಲಿ ಹೇಳಿದಷ್ಟು ಸುಲಭ ಅಲ್ಲ. ಫ್ರೆಂಡ್ಸ್ ಹತ್ತಿರ ಹೇಳಿ ಕಳುಹಿಸೋಣ ಅಂದುಕೊಂಡೆ, ಆದರೆ ಅವರು ಮೀಡಿಯೇಟರ್ ಯಾಕೆ ಆಗಬೇಕು?

ನಿನಗೆ ಹೇಳಬೇಕು ಅನ್ನಿಸಿದ್ದನ್ನ ಸಂಕ್ಷಿಪ್ತವಾಗಿ ಹೇಳಿದ್ದೀನಿ. ನಿನಗೂ ನನ್ನ ಮೇಲೆ ಪ್ರೀತಿ ಬಂದರೆ ಪ್ರೀತಿಸು. ಯಾವ ರೀತಿಯ ಬಲವನ್ತವು ಇಲ್ಲ. ಯಾಕೆಂದರೆ ಪ್ರೀತಿ ಬಲವಂತದಿಂದ ಬರೋದಿಲ್ಲ ಅನ್ನೋದು ನನಗೆ ಗೊತ್ತು. ಆದರೆ ಸುಳ್ಳು ಹೇಳಿ ಕೈ ಕೊಡಬೇಡ. ನನ್ನ ಪರ್ಸನ್ಯಾಲಿಟೀ ನೋಡಿಯೋ, ಪ್ರಾಪರ್ಟೀ ನೋಡಿಯೋ ಪ್ರೀತಿಸಬೇಡ. ಯಾಕೆಂದರೆ ಅದು ಪ್ರೀತಿನೇ ಆಗಿರಲ್ಲ. ಹಾಗಾಗಿ ನಿನ್ನ ಬುದ್ಧಿ ಮಾತಿಗಿಂತ, ಮನಸ್ಸಿನ ಮಾತು ಕೇಳು. ನಿನ್ನ ಮನಸ್ಸಿಗೆ ನಾನು ಸಂಗಾತಿ ಆಗಬಲ್ಲೆನು ಅನ್ನಿಸಿದರೆ, ನಿನ್ನ ಪ್ರೀತಿನ ನನ್ನ ಜೊತೆ ಹಂಚಿಕೊಳ್ಳಬಹುದು. ನೀನು ನನ್ನ ಪ್ರೀತಿನ ಒಪ್ಪಿಕೊಳ್ಳಲೇಬೇಕು ಅಂತಾನೂ ಇಲ್ಲ. ಆದರೆ ನೀನು ನನ್ನ ಜೊತೆ ಮಾತನಾಡಲಿಲ್ಲ ಅಂದರೆ ಮಾತ್ರ, ನನಗೆ ನೆನೆಸಿಕೊಳ್ಳೋದಕ್ಕೆ ಆಗೋದಿಲ್ಲ. ಮತ್ತೆ ಯಾರನ್ನಾದರೂ ನೀನು ಈಗಾಗಲೆ ಪ್ರೀತಿಸುತ್ತಿದ್ದರೆ, ನನ್ನ ಕಡೆಯಿಂದ ಬೆಸ್ಟ್ ವಿಶಸ್ ಮತ್ತು ಸಾರೀ, ನಾನು ಸ್ವಲ್ಪ ಲೇಟ್ ಆದೇ ಅನ್ನಿಸುತ್ತೆ.

ಸೋ ನೋ ಎಕ್ಸ್‌ಪೆಕ್ಟೇಶನ್, ಓನ್ಲೀ ಲವ್,

ಟೇಕ್ ಕೇರ್,
ರಾಜ್


2 ಟಿಪ್ಪಣಿಗಳು

ಮಳೆಗಾಲದ ಒಂದು ಮುಸ್ಸಂಜೆ

 ಮಳೆಗಾಲದ ಒಂದು ಮುಸ್ಸಂಜೆ ಅದುಮಳೆ ಆಗ ತಾನೇ ಮುಗಿದಿತ್ತುಸಣ್ಣಗೆ ತಣ್ಣನೆ ಗಾಳಿ 

ಬೀಸುತಿತ್ತು ಮಧುರವಾದತಣ್ಣನೆ ಸಂಜೆಯಲಿ ನನ್ನವಳ ನೆನಪು ಕಾಡುತಿತ್ತುಮರದ 

ಹನಿಗಳು ನಿಲ್ಲುವಂತಾಗಿದ್ದರುನೆನಪಿನ ಹನಿಗಳು ನಿಂತಿರಲಿಲ್ಲ.

 

ನಿನ್ನ ಹೆಸರು ನೆನೇದರೇನೆ
ಸುರಿವುದಲ್ಲ ಪ್ರೀತಿಯ ಸೋನೆ
 ತನ್ಗಾಳಿಯಲು…..
ನಿನ್ನ ನೆನಪೆನೇ

 

ಅವಳ ಹೆಸರು ಬೇಡ ಹೆಸರಲ್ಲೆ ಏನೋ ಇದೆನೆನೆದಷ್ಟು ದಟ್ಟಆದರೆ ನೆನೆಯೋದಕ್ಕೆ 

ಒಂದು ಸಲವಾದರು ಮರೀಬೇಕಲ್ಲಅವಳ ಹೆಸರು ಹಾಗೇನೆ.

 

ಮರೆಯಬಾರದೇ ಮನವು ನಿನ್ನನು
ಮರೆತೆಯೆನ್ದರೆ ಅಯ್ಯೋ ಮರೆವೆ ನನ್ನನು
ಹೇಳೆ ಚೆಲುವೆ……..
ಮರೆಯದೇ ನೀ ಕಾಡುತಲಿರುವೆ

 

ಮನೆಬಿಟ್ಟು ಹಾಗೆ ಸುತ್ತಾಡಿಕೊಂಡು ಬರೋಣೇವೆಂದು ಪಾರ್ಕಿನ ಕಡೆಗೆ ಹೊರಟೆಎಲೆಗಳ 

ಮೇಲೆ ಕೂತ ಮಳೆ ಹನಿಗಳುಅವಳ ಜಪ ಮಾಡುತ್ತಿರುವಂತೆ ಕಂಡವುನನಗೆ ಅದನ್ನು 

ಸಹಿಸಲಾಗದೆಅವುಗಳನ್ನು ಮೆಲ್ಲಗೆ ಅಲ್ಲಾಡಿಸಿದೆಎಲೆಯ ಮೇಲಿದ್ದ ಹನಿಗಳೆಲ್ಲ ಅವಳ 

ಹೆಸರನ್ನೇ ಹೇಳುತ್ತಾ ಉದುರಿದವುಆಗ ಮಾತ್ರ ಏನನ್ನೋ ಕಳೆದುಕೊಂಡಂತೆ ಅನಿಸಿತು.

 

ನಿನ್ನ ಹೆಸರನ್ನೇ ಹೇಳುತಲಿದ್ದವು
ಸಾಲು ಮಳೆ ಹನಿ
ನಿನ್ನ ಜಪವ ಮಾಡುತ
ಹೇಳಿ ಧನ್ಯನೆನ್ನುತ

 

 ಭಾರವಾದ ಹೆಜ್ಜೆಗಳೊಡನೆ ಹೋಗಿ ಪಾರ್ಕಿನ ಬೆಂಚಿನ ಮೇಲೆ ಕುಳಿತೆಮಳೆಗೆ ತೊಯ್ದ 

ಹಕ್ಕಿಗಳು ತಮ್ಮ ರೆಕ್ಕೆಗಳನ್ನು ಶುಭ್ರ ಮಾಡಿಕೊಳ್ಳುತ್ತಿದ್ದವುಅಳಿಲು ಅತ್ತಿಂದಿತ್ತ ಏನೋ 

ಹುಡುಕುತ್ತಿತ್ತುಹೂಗಳು ಮಳೆ ಭಾರಕ್ಕೆ ಹಾಗೆ ಬಾಗಿದ್ದವುನಾನು ಹೀಗೆ ಏಕೆ ಎಂದು ಕೇಳಿದೆ.

 ಆಗ

 

ನಿನ್ನ ಪ್ರೀತಿಯ ವರ್ಷಧಾರೆಯ
ನಾ ತಡೆವುದು ಹೇಗೆನ್ದಿತು ಹೂ
ಪ್ರೀತಿಯಿಲ್ಲದೇ ಬೇಯುತಲಿದ್ದ
ಅಳಿಲು ಸೂಸಿತು ಅಕ್ಕರೆಯ ನಗುವು

 

ಆಗ ಮತ್ತೆ ಮನಸ್ಸಲ್ಲಿ ಗಾಢವಾಗಿ ಕಾಡಲಾರಮ್ಭಿಸಿತು ಅವಳು ಮತ್ತು ಅವಳ ಪ್ರೀತಿ

ಎಂದು ನೋಡುವೆನು ಅವಳನ್ನು ಎನ್ನುತಾ ಮನಸ್ಸು ಲೆಕ್ಕಾಚರದಲ್ಲಿ ತೊಡಗಿತುಮೋಡದ 

ಯಾವುದೋ ತೀರದಲ್ಲಿ ಮಿಂಚು ಕಾಣಿಸಿಕೊಂಡಿತುಮತ್ತೊಮ್ಮೆ ಮಳೆ ಆಗುವುದು ಎಂದು

ಕೊಂಡುಮನೆಗೆ ಹೊರಡಲು ಅನುವಾದೆಆಗ ನನ್ನ ಹುಡುಗಿ ಕಾಣಿಸಿಕೊಳ್ಳಲುಮತ್ತೆ 

ಶುರುವಾಯಿತು ಪ್ರೀತಿಯ ಮಳೆ.

ಮತ್ತೆ ಸುರಿವುದೆನ್ದು ನಿನ್ನ ಪ್ರೇಮಧಾರೆ
ಮನವು ಎಣಿಸುತಿರಲು
ಮಿಂಚಾಗಿ ಬಳಿ ಬಂದೆ
ಪ್ರೀತಿಯ ಮಳೆ ಕರೆದೆ