ಅಭಿಮಾನಿ

ನಾ ನಿಮಗೆ…


1 ಟಿಪ್ಪಣಿ

ಯುಗಾದಿ

ಗೆಲ್ಲುವ ಚಲವಿತ್ತು
ಅಭಿಮಾನದ ಹರಿವಿತ್ತು
ಸಾಹಸ,ಸಾಧನೆ ತೋರಿದ ಧೋನಿಗೆ
ದೇವರೆ ನೀಡಿದ ಈ ಅಣಿಮುತ್ತು

ಜಯಹೋ ಇಂಡಿಯಾ
ಎದುರಾಳಿ ಯಾರಾದರೂ
ಹರಸುವಾಗ ಕೋಟಿ ಹೃದಯ
ನಿಮಗಿಲ್ಲ ಯಾರ ಭಯ

ಆ ಸ್ಥಳವೇ ಭಾರತದ ವಾಂಖೆಡೆ
ಜಗದ ಗಮನವೆಲ್ಲ ಅದರ ಕಡೆ
ಭಾಗ್ಯದ ಲಕ್ಷ್ಮಿ ನಮ್ಮಮ್ಮ
ಯುಗಾದಿಗೆ ಹರಸಿದಳು ಧೋನಿ ಪಡೆ

ಭಾಗ್ಯದ ಭಾರತದ ವಾಸಿಗಳೆಲ್ಲ
ಬಾಳಲಿ ಹರುಷದಿ ವರುಷವೆಲ್ಲ
ಧೋನಿ ಕಂಡ ಹರುಷದ ಯುಗಾದಿ
ಹರಡಲಿ ಹರುಷ ಜಗಕೆಲ್ಲ

Advertisements


1 ಟಿಪ್ಪಣಿ

ಬಂತೊಂದು ಹೊಸ ವರುಷ

ಹಳೆದು ಬಸವಳಿದು
ಕಳೆದೋಯಿತೊಂದು ವರುಷ
ನಲಿದು ನೆಗೆನೆಗೆದು
ಬಂತೊಂದು ಹೊಸ ವರುಷ
 
ಅಂತೆ-ಕಂತೆಯೆಲ್ಲ
ಏಕೆ ಬೇಕು ಬಾಳಲಿ
ಚಿಂತೆ-ಗಿಂತೆಯೆಲ್ಲ
ಮರೆತು ಬಾಳು ಹಸನಾಗಲಿ
 
ಕಂಡ ಕನಸುಗಳು
ನೂರು ಇವೆ ಜೊತೆಯಲಿ
ನಮ್ಮ ಮನಸುಗಳು
ದುಡಿದು ಕನಸೆಲ್ಲ ನನಸಾಗಲಿ
 
ವರುಷವಿಡಿ ಇರಲಿ
ಎಲ್ಲ ನಲಿದಾಡೋ  ಸಂಭ್ರಮ
ನೋವುಗಳೆಲ್ಲ ಮರೆಯಲಿ
ಸುಖಿಸುತ ಆರೋಗ್ಯ ಕ್ಷೇಮ
 
ಹೊಸ ವರುಷವೊಂದು
ಕೋರುತಿದೆ ನಿಮಗೆ ಶುಭಾಶಯ
ವರುಷದ ಹರ್ಷವೊಂದು
ಕಾಯುತಿದೆ ನಿಮ್ಮನ್ನೇ ಮಹಾಶಯ


1 ಟಿಪ್ಪಣಿ

ಶುಭಾಶಯ

ಹೊಸತು ದಿನದ ಹೊಸ ಬೆಳಕು ಮೂಡಲಿ
ನಾಳೆಗಳೆಲ್ಲವೂ ಹೊಸತನದಿ ತುಮ್ಬಲಿ
ಎದೆಯ ತುಂಬ ಭಾರತಭಾರತಭಾರತ
ಎಂಬ ಹೃದಯ ಮಿಡಿತ ಗಟ್ಟಿಯಾಗಿ
ಕೇಳಲಿ ಜಗಕೆಲ್ಲ