ಅಭಿಮಾನಿ

ನಾ ನಿಮಗೆ…


6 ಟಿಪ್ಪಣಿಗಳು

ಪ್ರೀತಿ ಎಲ್ಲಿದ್ದರೂ ಚೆನ್ನಾಗಿರಲಿ

ಹೇ ಹುಡುಗಿ ಹೇಗಿದ್ದೀಯಾ?

ಎಷ್ಟೊಂದು ದಿನ ಆಯ್ತು ನಿನ್ನನ್ನ ನೋಡಿ? ಎಲ್ಲಿದ್ದೀಯ? ಏನು ಮಾಡ್ತಿದ್ದೀಯಾ? ನಿನಗೆ ಹೀಗೆಲ್ಲ ನಾನು ಪ್ರಶ್ನೆ ಕೇಳಿ, ನಿನ್ನ  ಉತ್ತರ ಕೇಳಿ, ನನಗೆ ತುಂಬಾ ಸಮಾಧಾನ ಆಯ್ತು. ನನ್ನ ಮನಸ್ಸಲ್ಲಿ ಆದ ಸಮಾಧಾನ ಸಂತೋಷ ನಿನ್ನೆದುರಿಗೆ ವ್ಯಕ್ತಪಡಿಸೋದು ಎಷ್ಟು ಕಷ್ಟ ಅಂತ ನಿನಗೂ ಗೊತ್ತಾಗಬಹುದು ಅಂದ್ಕೋತೀನಿ. 

ನಮ್ಮ ಹಿಂದಿನ ಸವಿ ಪ್ರೀತೀನ ಯಾವತ್ತೂ ನೆನಪು ಮಾಡ್ಕೋಬೇಡ. ಅವತ್ತು ಸವಿಯಾಗಿದ್ದ ಪ್ರೀತಿ ಇಂದಿಗೂ ನನಗೆ ಸವಿಯೇ. ಆದರೆ ಅದೆ ಸಮಾಜಕ್ಕೆ ಹುಳಿಯ ವಾಸನೆ ಬರುತ್ತೆ. ಅದು ಅವರ ಮೂಗಿನ ನೇರದ ನ್ಯಾಯಕ್ಕೆ ಅರ್ಥ  ಆಗಲ್ಲ.  

ಹೋಗಲಿ ಬಿಡು. ನೀನು ನನಗಿಂತ ಚೆನ್ನಾಗಿ ಬದುಕು ಕಟ್ಟಿಕೊಂಡದ್ದು, ನಿಜವಾಗಿಯೂ ಒಂದು ಸಾಹಸವೇ ಹೌದು. ಇನ್ನು ಏನು ಹೇಳೋಕು ಮನಸ್ಸು ತಡವರಿಸುತ್ತಿದೆ, ತೊದಲುತ್ತಿದೆ. ನೀನು ಚೆನ್ನಾಗಿದ್ದೀಯಾ ಅನ್ನೋ ಒಂದು ಸಿಹಿ ಸತ್ಯ ಸಾಕು. ನಾವೇನು ಪ್ರೀತಿಗಾಗಿ ತಾಜ್್ಮಹಲ್ ಕಟ್ಟಬೇಕಾಗಿರಲಿಲ್ಲ, ನಮ್ಮ ಬದುಕು ಕಟ್ಟಿಕೊಂಡರೆ ಸಾಕಿತ್ತು. ಈ ದಿನ ನಿನ್ನ ಬದುಕು ಹಸನಾಗಿದೆ. ನಾನೂ ಪರವಾಗಿಲ್ಲ. ಜೀವನವೆಂಬುದು ರೇಸಲ್ಲ, ನಾವೂ ಸೋಲಲಿಲ್ಲ. ನಿನ್ನ ಬದುಕು ಹೀಗೆ ಸುಂದರವಾಗಿರಲೆಂದೆ ನನ್ನ ಹಾರೈಕೆ.

                                                                                                                                   …………….

Advertisements


7 ಟಿಪ್ಪಣಿಗಳು

ನಿಮ್ಮ ಅಭಿಪ್ರಾಯ ಮುಖ್ಯ…

ಪ್ರಿಯ ಗೆಳೆಯರೆ,

ಯಾಕೋ ಎನೋ ಮನಸ್ಸಲ್ಲಿ ಪ್ರಶ್ನೆಯೊಂದು ಕಾಡುತ್ತಿದೆ. ಏನೆಂದರೆ ನಮಗೆ ನೆಮ್ಮದಿ ಮುಖ್ಯನೋ ಅಥವಾ ಮದುವೆ ಮುಖ್ಯನೋ? ಕುತೂಹಲಕ್ಕಷ್ಟೆ ಈ ಪ್ರಶ್ನೆ. ನಿಮ್ಮ ಅಭಿಪ್ರಾಯ ತಿಳಿಸಿ…………ನಿರೀಕ್ಷೆಯಲ್ಲಿ!

ನಿಮ್ಮ ಅಭಿಮಾನಿ


ನಿಮ್ಮ ಟಿಪ್ಪಣಿ ಬರೆಯಿರಿ

2011 in review

The WordPress.com stats helper monkeys prepared a 2011 annual report for this blog.

Here’s an excerpt:

The concert hall at the Sydney Opera House holds 2,700 people. This blog was viewed about 27,000 times in 2011. If it were a concert at Sydney Opera House, it would take about 10 sold-out performances for that many people to see it.

Click here to see the complete report.


ನಿಮ್ಮ ಟಿಪ್ಪಣಿ ಬರೆಯಿರಿ

2010 in review

The stats helper monkeys at WordPress.com mulled over how this blog did in 2010, and here’s a high level summary of its overall blog health:

Healthy blog!

The Blog-Health-o-Meter™ reads Wow.

Crunchy numbers

Featured image

A helper monkey made this abstract painting, inspired by your stats.

About 3 million people visit the Taj Mahal every year. This blog was viewed about 28,000 times in 2010. If it were the Taj Mahal, it would take about 3 days for that many people to see it.

In 2010, there were 5 new posts, growing the total archive of this blog to 61 posts.

The busiest day of the year was August 24th with 232 views. The most popular post that day was ಕನ್ನಡ ಜನಪ್ರಿಯ ಗಾದೆಗಳು (Kannada Popular Proverbs (Janapriya Gaadegalu)).

Where did they come from?

The top referring sites in 2010 were google.co.in, kn.wordpress.com, thatskannada.oneindia.in, search.conduit.com, and kannadabala.blogspot.com.

Some visitors came searching, mostly for ಕನ್ನಡ ಗಾದೆಗಳು, ಗಾದೆಗಳು, ಕವನಗಳು, ಚುಟುಕಗಳು, and kannada sms.

Attractions in 2010

These are the posts and pages that got the most views in 2010.

1

ಕನ್ನಡ ಜನಪ್ರಿಯ ಗಾದೆಗಳು (Kannada Popular Proverbs (Janapriya Gaadegalu)) May 2008
23 comments

2

ಕನ್ನಡ ಏಸ್ಸೆಮ್ಮೆಸ್ಸು (Kannada SMS) June 2008
51 comments

3

ಕನ್ನಡ ಚುಟುಕಗಳು July 2008
8 comments

4

ಕನ್ನಡ ಗಾದೆಗಳು July 2008
1 comment

5

ಕನ್ನಡ ಎಸ್ಸೆಮ್ಮೆಸ್ಸು January 2010
2 comments


ನಿಮ್ಮ ಟಿಪ್ಪಣಿ ಬರೆಯಿರಿ

ಅಂಚೆ ಚೀಟಿಯಲ್ಲಿ ಕನ್ನಡಿಗರು

Anche cheetiyalli Kannadigaru

ಅಂಚೆ ಚೀಟಿಯಲ್ಲಿ ಕನ್ನಡಿಗರು

ಇಂಥ ಒಂದು ಸುಂದರವಾದ, ಸರಳವಾದ ಅಂಕಣವನ್ನು ನೀಡಿದ್ದಕ್ಕೆ ಕನ್ನಡಪ್ರಭ ಪತ್ರಿಕೆಗೆ ಧನ್ಯವಾದಗಳು.
ಎಲ್ಲೆಡೆ ಕನ್ನಡ ಉಳಿಯಲಿ, ಬೆಳೆಯಲಿ ಮತ್ತು ಹರಡಲಿ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ನಿಮ್ಮ ಅಭಿಮಾನಿ,
ರಾಜಣ್ಣ


ನಿಮ್ಮ ಟಿಪ್ಪಣಿ ಬರೆಯಿರಿ

ನಿಮಗೆ ಧನ್ಯವಾದಗಳು

ಈ ಚಳಿಗಾಲದಲ್ಲಿ ಮೈ ಸ್ವಲ್ಪ ಚುರುಕು ಕಡಿಮೆ. ಅದರಲ್ಲಿಯೂ ನನ್ನಂಥ ಸೋಮಾರಿಗಳಿಗೆ ಸ್ವಲ್ಪ ಜಾಸ್ತಿನೆ. ಬೆಳಿಗ್ಗೆ ಎದ್ದು ರೆಡಿಯಾಗಿ ತಿಂಡಿಗೆ ಹೊರಡುವ ವೇಳೆಗೆ ಜನರೆಲ್ಲ ಆಫೀಸಿನಲ್ಲಿ ಕೆಲ್ಸಕ್ಕೆ ಹಾಜರಾಗಿರುತ್ತಾರೆ,  ಆಗ್ತಿರ್ತಾರೆ. ಅಂದರೆ ಬೆಳಿಗ್ಗೆ ೯ ಅಥವಾ ೧೦ ಗಂಟೆಗೆ.
ನಾನು ಕನ್ನಡ ದಿನಪತ್ರಿಕೆಗಳು ಹಾಗು ಬ್ಲಾಗುಗಳನ್ನು ನೋಡುತ್ತಲೇ ಇರುತ್ತೀನಿ. ಈಗ ಅದು ಗೀಳು ಅಥವಾ ತುಂಬ ಅಭ್ಯಾಸ ಆಗಿ ಹೋಗಿದೆ. ಯಾವುದಾದರು ಹಬ್ಬಗಳು ಬಂದಾಗ, ಭಾರತ ಯಾವುದಾದರು ಕ್ರೀಡೆಯಲ್ಲಿ ಜಯಗಲಿಸಿದಾಗ, ಯಾರಾದರು ಮೃತರಾದಾಗ ವಿಶೇಷವಾದ ಲೇಖನಗಳು ಪುಂಖಾನುಪುಂಖವಾಗಿ ಬರುತ್ತವೆ. ಬ್ಲಾಗುಗಳಲ್ಲಿಯು ಕೂಡ. ನನಗೆ ಆಶ್ಚರ್ಯ ಅಗೋ ಸಂಗತಿಯೆಂದರೆ ಪತ್ರಕರ್ತರೇನೊ ಸದಾ ಸುದ್ದಿಯ ಸಂಗ್ರಹದಲ್ಲಿರುತ್ತಾರೆ. ಅವರಿಗೆ ಲೇಖನಗಳನ್ನು ಬರೆಯೋದು ಕಷ್ಟದ ಕೆಲಸವಾಗಿರಲಾರದು. ಆದರೆ ಬ್ಲಾಗಿಗರು ಅದು ಹೇಗೆ ಲೇಖನಗಳನ್ನ ಬರೆಯುತ್ತಾರೆ. ಏಕೆಂದರೆ ಅದರಲ್ಲಿ ಬರೆಯುವ ಬಹಳಷ್ಟು ಮಂದಿ ಹವ್ಯಾಸಿ ಬರಹಗಾರರೆಂದು ನನ್ನ ಅಭಿಪ್ರಾಯ. ಅವರಿಗೆ ಈ ಸಂದರ್ಭಗಳಲ್ಲಿ ಹೇಗೆ ಸಮಯ ಸಿಗುತ್ತದೆಂದು? ನಾನು ಹವ್ಯಾಸಕ್ಕಾಗಿ ಬರೆಯುತ್ತೇನೆ. ಆದರೆ ಬರಹಗಾರನಲ್ಲವೆಂದು ನಿಮಗೆ ಇದು ಓದುತ್ತಲೇ ತಿಳಿಯುತ್ತದೆ.
ಅವಧಿ, ನವಿಲಗರಿ, ಚಂಡೆಮದ್ದಳೆ, ಕೆನೆಕಾಫಿ, ಕುಂದಾಪ್ರಕನ್ನಡ, ಹಾಗು ಇತರೆ ಕನ್ನಡ ಬ್ಲಾಗುಗಳು ಸದಾ ಹೊಸ ವಿಚಾರಗಳಿಗೆ ತೆರೆದುಕೊಂದಿರುತ್ತವೆ, ಹೊಸ ರೀತಿಯಲ್ಲಿ ಬರೆಯುತ್ತಲೇ ಇರುತ್ತವೆ. ನಮ್ಮ ಬಾಲ್ಯದ ನೆನಪುಗಳನ್ನ, ಮನಸ್ಸಿನ ಕಸಿವಿಸಿ, ಕನಸು, ಕೋಪ-ತಾಪ ಎಲ್ಲವು ನಮ್ಮಲ್ಲಿ ಕೆಲವೊಮ್ಮೆ ವ್ಯಕ್ತವಾದರೂ ಅವೆಲ್ಲ ಹೇಗೆ ಅಕ್ಷರ ರೂಪ ಪಡೆದು ಈ ಬ್ಲಾಗುಗಳಲ್ಲಿ ಬಂದಿವೆ ಎಂದು ನನಗೆ ಅಚ್ಚರಿಯಾಯ್ತು.
ಈ ನನ್ನ ಮಾತುಗಳು ಭಾವವನ್ನು ಅಕ್ಷರಗಳಿಗೆ ಇಳಿಸಿದ ಅಕ್ಷರಬ್ರಹ್ಮರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುವುದಕ್ಕಾಗಿ ಬರೆದದ್ದು. ಆದರೆ ಹೇಗೆ ಬರೆದಿದ್ದೆನೆಂದು ನನಗೆ ಗೊತ್ತಿಲ್ಲ. ನನ್ನ ಭಾವ ನಿಮ್ಮ ತಲುಪಿದರೆ ಅಷ್ಟೆ ಸಾಕು.

ನಿಮ್ಮ ಅಭಿಮಾನಿ