ಅಭಿಮಾನಿ

ನಾ ನಿಮಗೆ…


6 ಟಿಪ್ಪಣಿಗಳು

ನಿದ್ದೇನ ಕದ್ದವಳು

ಬರೆಯುವ ಮೊದಲೆ ಅಕ್ಷರವ ಕದಿಯೋಳು

ಬರೆದಾದ ಮೇಲೂ ನಿದ್ದೇನ ಕದ್ದವಳು

ನನ್ನೆದುರಿಗೆ ಬಂದಾಗ ಏನು ಮಾಡಲಿ

ಅವಳೇನಾದರೂ ಕೇಳಿದರೆ ಏನು ಹೇಳಲಿ?

 

ಕಣ್ಣ ನೋಟವ ಕದ್ದು ಎಲ್ಲೋ ಬಚ್ಚಿಟ್ಟು

ಎಲ್ಲಿ ಏನು ಹುಡುಕುವೆ ಎಂದು ಕೇಳೋವಳು

ಮಾತಿಗೆ ಎದುರಾಡದೆ ನಿಂತಾಗ

ನಕ್ಕು ಓಡಿದರೆ ನಾನೇನೂ ಮಾಡಲಿ?

 

ಕದ್ದ ಮಾಲು ಪಡೆಯುವುದಾದರು ಹೇಗೆ

ಕದ್ದ ಕನಸು, ಮನಸು ಬರುವುದೇ ಹಾಗೆ

ನೀವಾದರೂ ಸ್ವಲ್ಪ ಹೇಳಿ ಅವಳಿಗೆ

ಈಗಲಾದರೂ ತಂದು ಕೊಡಲಿ, ಇಲ್ಲವಾದರೆ ಅವಳ ಮನಸ್ಸು ಕೊಡಲಿ

Advertisements


2 ಟಿಪ್ಪಣಿಗಳು

ಗುರು ಮತ್ತು ದಾರಿ

ಎಲ್ಲೋ ಹೊರಡಲು ನಿಂತಿರುವೆ

ನಿಂತು ಯಾರಿಗೋ ಕಾಯುತಿರುವೆ

ಎಲ್ಲಿಗೆ ಹೋಗುವುದು ತಿಳಿಯದಾಗಿದೆ

ಜೊತೆಗೆ ಬರುವವರು ಯಾರೋ?

ನೋವು-ನಲಿವಿನ ಬುತ್ತಿಯುಂಟು

ಆಲಸ್ಯ-ಅನುಭವದ ಗಂಟು ಉಂಟು

ಅನುಭವದ ಗಂಟು ಹೊರುವುದು ಹೇಗೊತಿಳಿಯದಾಗಿದೆ

ನೋವು ಆಲಸ್ಯಗಳ ಗಂಟನ್ನಿಳಿಸುವರಾರೋ?

ಗಾಢ ಅಂಧಕಾರದ ಊರಲಿ

ಬೆಳಕ ನೀಡಲು ಬೇಕಿದೆ ದೀವಿಗೆ

ಗುರಿಯ ಮುಟ್ಟಲು ಬೇಕಿದೆ ದಾರಿ

ಕೈಯ ಹಿಡಿದು ನಡೆಸೊ ಗುರುವು ಬೇಕಿದೆ


6 ಟಿಪ್ಪಣಿಗಳು

ಕತೆ ನಿನ್ನದೆ

ಹೊಸಕತೆಯ ಮೊದಲ ಸಾಲು

ಬರೆಯೋದು ಹೇಗೆ ಹೇಳು

ಹೆಸರಿಡಲು ಮರೆತೋದ ಕತೆಗೆ

ನೀನೆ ಒಂದು ಹೆಸರು ಹೇಳು

ಕಡಲಿನ ಹಸಿಮರಳಿನ

ಬೆಚ್ಚನೆ ಮನೆಯ ಕಟ್ಟಿದ ಕತೆ ಹೇಳಲೆ

ಸಾವಿರ ಹೂಕನಸುಗಳ

ಜೋಡಿಸಿ ನಲಿದ ಮಾಹಿತಿ ನೀಡಲೆ

ನೀನೊಮ್ಮೆ ನಕ್ಕಾಗ, ನಗುವೊಂದು ಮೊಳೆದಾಗ

ಮುತ್ತೊಂದು ಹುಟ್ಟಿದ ಕತೆಯೆ ಅದ್ಭುತ

ನೀ ಕುಲುಕುತ ನಡೆಯಲು, ಹಿಂದಿರುಗಿ ನೋಡಲು

ಯುವ ಹೃದಯಗಳೆಲಲ್ಲೊಂದು ಕತೆ ನಿಶ್ಚಿತ

ನಿನ್ನ ಕತೆಯ ಬರೆಯಲು ಪದಗಳೆ ಇಲ್ಲ

ಹಟ ಮಾಡದೆ ನನಗೆ ಕೆಲವು ಪದಗಳಾದರು ಕೊಟ್ಟು ಹೋಗು

ಈ ಹೃದಯದಲ್ಲಿ ನಿನ್ನ ಬಿಟ್ಟರೆ ಬೇರಾರಿಲ್ಲ

ನಿನ್ನ ಕತೆಗೆ ನೀನೆ ಹೆಸರಿಟ್ಟು ಹೋಗು


1 ಟಿಪ್ಪಣಿ

ಬಂತೊಂದು ಹೊಸ ವರುಷ

ಹಳೆದು ಬಸವಳಿದು
ಕಳೆದೋಯಿತೊಂದು ವರುಷ
ನಲಿದು ನೆಗೆನೆಗೆದು
ಬಂತೊಂದು ಹೊಸ ವರುಷ
 
ಅಂತೆ-ಕಂತೆಯೆಲ್ಲ
ಏಕೆ ಬೇಕು ಬಾಳಲಿ
ಚಿಂತೆ-ಗಿಂತೆಯೆಲ್ಲ
ಮರೆತು ಬಾಳು ಹಸನಾಗಲಿ
 
ಕಂಡ ಕನಸುಗಳು
ನೂರು ಇವೆ ಜೊತೆಯಲಿ
ನಮ್ಮ ಮನಸುಗಳು
ದುಡಿದು ಕನಸೆಲ್ಲ ನನಸಾಗಲಿ
 
ವರುಷವಿಡಿ ಇರಲಿ
ಎಲ್ಲ ನಲಿದಾಡೋ  ಸಂಭ್ರಮ
ನೋವುಗಳೆಲ್ಲ ಮರೆಯಲಿ
ಸುಖಿಸುತ ಆರೋಗ್ಯ ಕ್ಷೇಮ
 
ಹೊಸ ವರುಷವೊಂದು
ಕೋರುತಿದೆ ನಿಮಗೆ ಶುಭಾಶಯ
ವರುಷದ ಹರ್ಷವೊಂದು
ಕಾಯುತಿದೆ ನಿಮ್ಮನ್ನೇ ಮಹಾಶಯ


3 ಟಿಪ್ಪಣಿಗಳು

ಮೌನವೇ ಮಾತಾಗಿ

ನಡೆದು ಬಾ ಬಳಿಗೆ
ಸುಮ್ಮನೆ ಹಾಗೆ
ಮಾತೊಂದು ಆಡಬೇಡ
ನಗುವೊಂದಿರಲಿ ಜೊತೆಗೆ
 
ಕಣ್ಣುಗಳೇ ಮಾತಾಡುವಾಗ
ಬೇರೆ ಮಾತೇಕೆ ಈಗ
ಮೌನದಿ ಹೃದಯದ ಭಾಷೆ
ಕೇಳಲು ಎಂಥ ಸೊಗಸೆ
 
ಪ್ರೀತಿಯ ಮೂಟೆ ಹೊತ್ತು
ಅದರಲಿ ಸಾವಿರ ಕನಸನಿತ್ತು
ಜೊತೆ ಬಾರೆ ಮೆಲ್ಲಗೆ
ಮೌನದ ಆಭರಣ ಇರಲಿ ತೆಳ್ಳಗೆ
 
ಮೌನದಿ ಬೇಡ ಮಾತಿನ ಮೋಹ
ಆರದು ಎಂದು ಪ್ರೀತಿಯ ದಾಹ
ನೀನಿರದ ಸನಿಹ
ಭರಿಸಲಾಗದು ವಿರಹ


ನಿಮ್ಮ ಟಿಪ್ಪಣಿ ಬರೆಯಿರಿ

ನಡುಗುತಿದೆ ಇವನ ನಡೆಗೆ

ಹೆದರಿಕೆ ಶುರುವಾಗಿದೆ
ಯಾಕೋ ಅಮಾವಾಸ್ಯೆಗೆ
ತನ್ನೊಡಲ ಕಗ್ಗತ್ತಲಿನಲೂ
ಸಾಗುವ ಖದೀಮರ ನಿರ್ಭೀತ ನಡೆಗೆ

ಹಣವು ಅಳುತಲಿದೆ
ಹೆಣವು ಅಂಜಿದೆ
ಹಣಕಾಗಿ ಹೆಣವನ್ನು ಕದ್ದೊಯ್ಯುವ
ಲೋಭಿಗಳ ಹಾಳು ನಡೆಗೆ

ಭೂಮಿಯು ನಡುಗುತಿದೆ
ಕಾಡೆಲ್ಲೋ ಮರೆಯಾಗುತಿದೆ
ಕಾಸಿಗಾಗಿ ಮಣ್ಣನು ಬಿಡದ
ಮಾನವನ ಅತಿಆಸೆಯ ನಡೆಗೆ

ನೀರೆಲ್ಲ ನಾಪತ್ತೆ
ಉಸಿರೆಲ್ಲ ವಿಷವಂತೆ
ನೀರಲ್ಲೂ, ಉಸಿರಲ್ಲೂ ವಿಷವ ಹರಡೋ
ದಾನವ ರೂಪಿಯ ನಡೆಗೆ

ನಡುಗುತಿದೆ ಇವನ ನಡೆಗೆ
ಭುವಿ-ಬಾನೆಲ್ಲ
ಮೂಕವಾಗಿಯ ನೋಡುತಿದೆ
ಕಾಯುತ ಕಾಲ


2 ಟಿಪ್ಪಣಿಗಳು

ಹೇಳು ನೀನು ನನಗೆ

 

ಹಕ್ಕಿ  ಹಾಡುವ ಮುನ್ನ

ಹೇಳು ನೀನು ನನಗೆ 

ಹಾಡಿನೊಂದಿಗೆ  ಹೃದಯದ 

ಬಡಿತ ಸೇರಿಸಬೇಕಿದೆ 

ಅವಳಿಗೆ   ಪ್ರೀತಿ ತಿಳಿಸಬೇಕಿದೆ

 

ರವಿ ಮೂಡುವ  ಮುನ್ನ 

ಹೇಳು ನೀನು ನನಗೆ 

ಹಾಡೋ ಹಕ್ಕಿಯ  ಕಲೆತು 

ನಾನು ಹಾಡಬೇಕಿದೆ 

ಅವಳಿಗೆ   ಪ್ರೀತಿ ತೋರಬೇಕಿದೆ 

 

ಗಾಳಿ ಸೋಕುವ ಮುನ್ನ  

ಹೇಳು ನೀನು ನನಗೆ 

ಹೂ ಗಂಧ  ತರೋ ತಂಗಾಳಿಗೆ 

 ಪ್ರೀತಿ ಬೆರೆಸಬೇಕಿದೆ 

ಅವಳಿಗೆ  ಪ್ರೀತಿ ನೀಡಬೇಕಿದೆ