ಅಭಿಮಾನಿ

ನಾ ನಿಮಗೆ…


6 ಟಿಪ್ಪಣಿಗಳು

ನಿದ್ದೇನ ಕದ್ದವಳು

ಬರೆಯುವ ಮೊದಲೆ ಅಕ್ಷರವ ಕದಿಯೋಳು

ಬರೆದಾದ ಮೇಲೂ ನಿದ್ದೇನ ಕದ್ದವಳು

ನನ್ನೆದುರಿಗೆ ಬಂದಾಗ ಏನು ಮಾಡಲಿ

ಅವಳೇನಾದರೂ ಕೇಳಿದರೆ ಏನು ಹೇಳಲಿ?

 

ಕಣ್ಣ ನೋಟವ ಕದ್ದು ಎಲ್ಲೋ ಬಚ್ಚಿಟ್ಟು

ಎಲ್ಲಿ ಏನು ಹುಡುಕುವೆ ಎಂದು ಕೇಳೋವಳು

ಮಾತಿಗೆ ಎದುರಾಡದೆ ನಿಂತಾಗ

ನಕ್ಕು ಓಡಿದರೆ ನಾನೇನೂ ಮಾಡಲಿ?

 

ಕದ್ದ ಮಾಲು ಪಡೆಯುವುದಾದರು ಹೇಗೆ

ಕದ್ದ ಕನಸು, ಮನಸು ಬರುವುದೇ ಹಾಗೆ

ನೀವಾದರೂ ಸ್ವಲ್ಪ ಹೇಳಿ ಅವಳಿಗೆ

ಈಗಲಾದರೂ ತಂದು ಕೊಡಲಿ, ಇಲ್ಲವಾದರೆ ಅವಳ ಮನಸ್ಸು ಕೊಡಲಿ

Advertisements


1 ಟಿಪ್ಪಣಿ

ಬಂತೊಂದು ಹೊಸ ವರುಷ

ಹಳೆದು ಬಸವಳಿದು
ಕಳೆದೋಯಿತೊಂದು ವರುಷ
ನಲಿದು ನೆಗೆನೆಗೆದು
ಬಂತೊಂದು ಹೊಸ ವರುಷ
 
ಅಂತೆ-ಕಂತೆಯೆಲ್ಲ
ಏಕೆ ಬೇಕು ಬಾಳಲಿ
ಚಿಂತೆ-ಗಿಂತೆಯೆಲ್ಲ
ಮರೆತು ಬಾಳು ಹಸನಾಗಲಿ
 
ಕಂಡ ಕನಸುಗಳು
ನೂರು ಇವೆ ಜೊತೆಯಲಿ
ನಮ್ಮ ಮನಸುಗಳು
ದುಡಿದು ಕನಸೆಲ್ಲ ನನಸಾಗಲಿ
 
ವರುಷವಿಡಿ ಇರಲಿ
ಎಲ್ಲ ನಲಿದಾಡೋ  ಸಂಭ್ರಮ
ನೋವುಗಳೆಲ್ಲ ಮರೆಯಲಿ
ಸುಖಿಸುತ ಆರೋಗ್ಯ ಕ್ಷೇಮ
 
ಹೊಸ ವರುಷವೊಂದು
ಕೋರುತಿದೆ ನಿಮಗೆ ಶುಭಾಶಯ
ವರುಷದ ಹರ್ಷವೊಂದು
ಕಾಯುತಿದೆ ನಿಮ್ಮನ್ನೇ ಮಹಾಶಯ


3 ಟಿಪ್ಪಣಿಗಳು

ಮೌನವೇ ಮಾತಾಗಿ

ನಡೆದು ಬಾ ಬಳಿಗೆ
ಸುಮ್ಮನೆ ಹಾಗೆ
ಮಾತೊಂದು ಆಡಬೇಡ
ನಗುವೊಂದಿರಲಿ ಜೊತೆಗೆ
 
ಕಣ್ಣುಗಳೇ ಮಾತಾಡುವಾಗ
ಬೇರೆ ಮಾತೇಕೆ ಈಗ
ಮೌನದಿ ಹೃದಯದ ಭಾಷೆ
ಕೇಳಲು ಎಂಥ ಸೊಗಸೆ
 
ಪ್ರೀತಿಯ ಮೂಟೆ ಹೊತ್ತು
ಅದರಲಿ ಸಾವಿರ ಕನಸನಿತ್ತು
ಜೊತೆ ಬಾರೆ ಮೆಲ್ಲಗೆ
ಮೌನದ ಆಭರಣ ಇರಲಿ ತೆಳ್ಳಗೆ
 
ಮೌನದಿ ಬೇಡ ಮಾತಿನ ಮೋಹ
ಆರದು ಎಂದು ಪ್ರೀತಿಯ ದಾಹ
ನೀನಿರದ ಸನಿಹ
ಭರಿಸಲಾಗದು ವಿರಹ


ನಿಮ್ಮ ಟಿಪ್ಪಣಿ ಬರೆಯಿರಿ

ನಾನುಳಿವೆನೆ?

ಬಿಡು ಹೂಬಾಣ
ನಿನ್ನ ಸನಿಹವಿಲ್ಲದೇ
ಧಹಿಸುತಿದೆ ಮನ
ಕೊಲ್ಲಲಿ
ಕೊಂದು ಝೇನ್ಕರಿಸಲಿ
 ಪ್ರೇಮ
ಎಂದು ಪ್ರಿಯೆ ಮರುಗುತಿರಲು

ನಿನ್ನ ಕೊನ್ದೆಡೆ
ನನಗೆ ಉಳಿವುಂಟೆ
ನಿನ್ನ ಪ್ರೇಮಪಾಶಕೆ
ಸಿಲುಕಿದ ಮೀನು ನಾನು
ಎಂದು ಕೊರಗಿತು
ಪ್ರಿಯತಮನ ಮನ


3 ಟಿಪ್ಪಣಿಗಳು

ಕನಸಲಿ ಕಾಡುವೆ ಏಕೆ?

ಕನಸಲಿ ಕಾಡುವೆ ಏಕೆ?
ನೀ ಮನಸಲಿ ಮೂಡಿಹೆ ಏಕೆ?
 ಹೃದಯದ ಭಾರ ನೀಗುತಲಿ
ನೀ ದೂರ ಹೋಗಬಾರದೇಕೆ?

ಪ್ರೀತಿಯ ಹೂವು ಅರಳಲು
ಅಡ್ಡಿಗಳೇತಕೆ ಮುಳ್ಳಾದವೊ?
ನಿನ್ನಯ ಪ್ರೀತಿಯ ಅಲೆಗಳಲಿ
ನನ್ನಯ ಕಣ್ಣು ಗಳೇತಕೆ ಮಂಜಾದವೋ?

ಹೋಗು ಹೋಗು ನೀ
ದೂರ ಹೋಗು
 ಹೃದಯಕೆ ಕಾಣದಂತೆ
ಮರೆಯಾಗಿ ಹೋಗುಮಂಜಿನ
ಹನಿಯಂತೆ ಕರಗಿ ಹೋಗು
ಮತ್ತೊಬ್ಬಳ ನೆನೆಯದಂತೆ
 ಹೃದಯವ ಕೊಂದು ಹೋಗು