ಅಭಿಮಾನಿ

ನಾ ನಿಮಗೆ…


6 ಟಿಪ್ಪಣಿಗಳು

ಪ್ರೀತಿ ಎಲ್ಲಿದ್ದರೂ ಚೆನ್ನಾಗಿರಲಿ

ಹೇ ಹುಡುಗಿ ಹೇಗಿದ್ದೀಯಾ?

ಎಷ್ಟೊಂದು ದಿನ ಆಯ್ತು ನಿನ್ನನ್ನ ನೋಡಿ? ಎಲ್ಲಿದ್ದೀಯ? ಏನು ಮಾಡ್ತಿದ್ದೀಯಾ? ನಿನಗೆ ಹೀಗೆಲ್ಲ ನಾನು ಪ್ರಶ್ನೆ ಕೇಳಿ, ನಿನ್ನ  ಉತ್ತರ ಕೇಳಿ, ನನಗೆ ತುಂಬಾ ಸಮಾಧಾನ ಆಯ್ತು. ನನ್ನ ಮನಸ್ಸಲ್ಲಿ ಆದ ಸಮಾಧಾನ ಸಂತೋಷ ನಿನ್ನೆದುರಿಗೆ ವ್ಯಕ್ತಪಡಿಸೋದು ಎಷ್ಟು ಕಷ್ಟ ಅಂತ ನಿನಗೂ ಗೊತ್ತಾಗಬಹುದು ಅಂದ್ಕೋತೀನಿ. 

ನಮ್ಮ ಹಿಂದಿನ ಸವಿ ಪ್ರೀತೀನ ಯಾವತ್ತೂ ನೆನಪು ಮಾಡ್ಕೋಬೇಡ. ಅವತ್ತು ಸವಿಯಾಗಿದ್ದ ಪ್ರೀತಿ ಇಂದಿಗೂ ನನಗೆ ಸವಿಯೇ. ಆದರೆ ಅದೆ ಸಮಾಜಕ್ಕೆ ಹುಳಿಯ ವಾಸನೆ ಬರುತ್ತೆ. ಅದು ಅವರ ಮೂಗಿನ ನೇರದ ನ್ಯಾಯಕ್ಕೆ ಅರ್ಥ  ಆಗಲ್ಲ.  

ಹೋಗಲಿ ಬಿಡು. ನೀನು ನನಗಿಂತ ಚೆನ್ನಾಗಿ ಬದುಕು ಕಟ್ಟಿಕೊಂಡದ್ದು, ನಿಜವಾಗಿಯೂ ಒಂದು ಸಾಹಸವೇ ಹೌದು. ಇನ್ನು ಏನು ಹೇಳೋಕು ಮನಸ್ಸು ತಡವರಿಸುತ್ತಿದೆ, ತೊದಲುತ್ತಿದೆ. ನೀನು ಚೆನ್ನಾಗಿದ್ದೀಯಾ ಅನ್ನೋ ಒಂದು ಸಿಹಿ ಸತ್ಯ ಸಾಕು. ನಾವೇನು ಪ್ರೀತಿಗಾಗಿ ತಾಜ್್ಮಹಲ್ ಕಟ್ಟಬೇಕಾಗಿರಲಿಲ್ಲ, ನಮ್ಮ ಬದುಕು ಕಟ್ಟಿಕೊಂಡರೆ ಸಾಕಿತ್ತು. ಈ ದಿನ ನಿನ್ನ ಬದುಕು ಹಸನಾಗಿದೆ. ನಾನೂ ಪರವಾಗಿಲ್ಲ. ಜೀವನವೆಂಬುದು ರೇಸಲ್ಲ, ನಾವೂ ಸೋಲಲಿಲ್ಲ. ನಿನ್ನ ಬದುಕು ಹೀಗೆ ಸುಂದರವಾಗಿರಲೆಂದೆ ನನ್ನ ಹಾರೈಕೆ.

                                                                                                                                   …………….

Advertisements


ನಿಮ್ಮ ಟಿಪ್ಪಣಿ ಬರೆಯಿರಿ

ನನ್ನ ಪ್ರೀತಿ

ನನ್ನ ಪ್ರೀತಿಯ ಸಾಲುಗಳಿವು
ಕವನವಾಗಬೇಕೆಂದೇನು ಇಲ್ಲ
ಆಗದಿದ್ದರೆ ನನ್ನ ಪ್ರೀತಿಗೆ
ಪೀಠಿಕೆಯಾದರೂ ಆಗಲಿ

ನನ್ನ ಪ್ರೀತಿ ನಿನಗೆ
ಇಷ್ಟವಾಗಬೇಕೆಂದೇನು ಇಲ್ಲ
ಆಗದಿದ್ದರೂ ನಾ ನಿನ್ನ
ಪ್ರೀತಿಸುವುದ ಬಿಡುವುದಿಲ್ಲ

ನಿನ್ನೀ ಮೊಗದಿ
ನಗು ಕಳೆ ತುಮ್ಬಿರೆ ಸಾಕು
ಸಾರ್ಥಕ ನನ್ನ
ಬದುಕು, ಪ್ರೀತಿ


3 ಟಿಪ್ಪಣಿಗಳು

ಕನಸಲಿ ಕಾಡುವೆ ಏಕೆ?

ಕನಸಲಿ ಕಾಡುವೆ ಏಕೆ?
ನೀ ಮನಸಲಿ ಮೂಡಿಹೆ ಏಕೆ?
 ಹೃದಯದ ಭಾರ ನೀಗುತಲಿ
ನೀ ದೂರ ಹೋಗಬಾರದೇಕೆ?

ಪ್ರೀತಿಯ ಹೂವು ಅರಳಲು
ಅಡ್ಡಿಗಳೇತಕೆ ಮುಳ್ಳಾದವೊ?
ನಿನ್ನಯ ಪ್ರೀತಿಯ ಅಲೆಗಳಲಿ
ನನ್ನಯ ಕಣ್ಣು ಗಳೇತಕೆ ಮಂಜಾದವೋ?

ಹೋಗು ಹೋಗು ನೀ
ದೂರ ಹೋಗು
 ಹೃದಯಕೆ ಕಾಣದಂತೆ
ಮರೆಯಾಗಿ ಹೋಗುಮಂಜಿನ
ಹನಿಯಂತೆ ಕರಗಿ ಹೋಗು
ಮತ್ತೊಬ್ಬಳ ನೆನೆಯದಂತೆ
 ಹೃದಯವ ಕೊಂದು ಹೋಗು