ಅಭಿಮಾನಿ

ನಾ ನಿಮಗೆ…


6 ಟಿಪ್ಪಣಿಗಳು

ನಿದ್ದೇನ ಕದ್ದವಳು

ಬರೆಯುವ ಮೊದಲೆ ಅಕ್ಷರವ ಕದಿಯೋಳು

ಬರೆದಾದ ಮೇಲೂ ನಿದ್ದೇನ ಕದ್ದವಳು

ನನ್ನೆದುರಿಗೆ ಬಂದಾಗ ಏನು ಮಾಡಲಿ

ಅವಳೇನಾದರೂ ಕೇಳಿದರೆ ಏನು ಹೇಳಲಿ?

 

ಕಣ್ಣ ನೋಟವ ಕದ್ದು ಎಲ್ಲೋ ಬಚ್ಚಿಟ್ಟು

ಎಲ್ಲಿ ಏನು ಹುಡುಕುವೆ ಎಂದು ಕೇಳೋವಳು

ಮಾತಿಗೆ ಎದುರಾಡದೆ ನಿಂತಾಗ

ನಕ್ಕು ಓಡಿದರೆ ನಾನೇನೂ ಮಾಡಲಿ?

 

ಕದ್ದ ಮಾಲು ಪಡೆಯುವುದಾದರು ಹೇಗೆ

ಕದ್ದ ಕನಸು, ಮನಸು ಬರುವುದೇ ಹಾಗೆ

ನೀವಾದರೂ ಸ್ವಲ್ಪ ಹೇಳಿ ಅವಳಿಗೆ

ಈಗಲಾದರೂ ತಂದು ಕೊಡಲಿ, ಇಲ್ಲವಾದರೆ ಅವಳ ಮನಸ್ಸು ಕೊಡಲಿ

Advertisements


ನಿಮ್ಮ ಟಿಪ್ಪಣಿ ಬರೆಯಿರಿ

ಪ್ರೀತಿಯರಮನೆ

ಹೇ ಸಖಿ
ನೋಡುತಲಿದ್ದೆ
ಅನುದಿನವೂ, ಅನುಕ್ಷಣವೂ
ಅನುರಾಗವು
ಎಂದೋ ಮೊಳೆದಿತ್ತು
ನನ್ನ ಕಣ್ಣೋಟವೂ
ನಿನಗೂ ತಿಳಿದಿತ್ತು
 
ಮುಷ್ಟಿ ಗಾತ್ರದ ಹೃದಯದ
ತುಂಬೆಲ್ಲ ನೀನಿದ್ದೆ
ಅದಾಗಿತ್ತು
ನಿನ್ನದೆ ಅರಮನೆ
ನನ್ನದೇ ಪ್ರೀತಿಯ
ತಂಗಾಳಿ ಬೀಸುತಲಿದ್ದೆ
ನಿನ್ನಯ ಮನ ತಣಿಯಲು
 
ಕಾಣದ ಕೈಯೊಂದು
ಕಾಡುತಲಿತ್ತು
ನಮ್ಮಯ ಅನುದಿನದ ಪ್ರೀತಿಯ
ನನ್ನ ಪ್ರೀತಿಯ ತಂಗಾಳಿಗೆ
ವಿಷ ಉಣಿಸಿ
ಪ್ರೀತಿಯರಮನೆಯ ಬರಿದು ಮಾಡಿತು
ಬದುಕು ಮಸಣವಾಯಿತು ಇಂದು


ನಿಮ್ಮ ಟಿಪ್ಪಣಿ ಬರೆಯಿರಿ

ಈ ಸೌಂದರ್ಯಕೆ

ಕೆನ್ನೈದಿಲೆಯ ಹುಡಿ ಮಾಡಿ
ಚಂದ್ರನ ಬೆಳದಿಂಗಳ ಹಾಲ ಮಾಡಿ
ಕಲಸಿ ಮಾಡಿದ ಮೊಗ
ಕಡು ಅನ್ಧಕಾರದಲು
ಮಿನುಗುವುದು ಜಗ-ಮಘ

ಜಿಂಕೆಗಳ ಕೊಂದು
ಕಣ್ಣಿಟ್ಟನೊ ಬ್ರಹ್ಮ
ಈ ಸೌಂದರ್ಯಕೆ
ಅಲ್ಲಲ್ಲಿ ಸುಳಿಯುವ
ಹೂವ ಮುಂಗುರುಳು

ಹಂಸಗಳ ವಧೆ ಮಾಡಿ
ರೆಕ್ಕೆಗಳ ಕೊಯ್ದು ತಂದು
ಮಾಡಿದನೆ ಬ್ರಹ್ಮ
ಚೆಲುವೆಯ ಕಣ್ರೆಪ್ಪೆಗಳ

ಹೂವ ಮಕರಂಧವನೆಲ್ಲ
ಕೂಡಿಸಿ
ಹಾಲ ನೊರೆಯಿಂದ ಮುಳುಗಿಸಿ
ಹೆಣೆಯಿತೇ ಬೊಮ್ಮನ ಕೈಗಳು
ಸವಿಯ ಚೆನ್ದುಟಿಯ

ಹಾಲ ಕೊಳದಿ ಬೆಳೆದ
ಕೆಂಪು ಕಮಲವ ಆಯ್ದು ತಂದು
ಜೇನು ಗಂಧಗಳ ಬೆರೆಸಿ
ಅರೆದು ಮಾಡಿದನೆ
ಸೌಗಂಧದ ಚೆಲುವ ಮೈ ಸಿರಿಯ

ಈ ಚೆಲುವೆ
ಕೈ ಯಾಡುವೆಡೆ
ಬಿರುಗಾಳಿ ತಂಗಾಳಿ ಯಾಗುವುದು
ಇವಳು ನಡೆದಾಡು ವೆಡೆ
ಮರುಭೂಮಿ ಹಸಿರು ಕಾನನವಾಗುವುದು

ನಿನ್ನ ಸೌಂದರ್ಯಕೆ
ಪದಗಳೇ ನಿಲುಕವು
ಹಾಡಿ ಹೊಗಳಲೆಂದರೆ
ನಿನ್ನ ನೋಡುತಲೇ
ಎಲ್ಲ ಮರೆವವು

ಹೇಳೆ ಚೆಲುವೆ
ನಿನ್ನ ವರ್ಣಿಸೋ ರಸಿಕನಾರು?
ನಿನ್ನ ಸೌಂದರ್ಯಕೆ
ಸಿಲುಕುವ ಪದಗಳಾವು


6 ಟಿಪ್ಪಣಿಗಳು

ಕಲ್ಲು ಹೃದಯವಾಯಿತೆ

ಕಲ್ಲು ಹೃದಯವಾಯಿತೆ?
ನಿನ್ನದು ನನ್ನ ಪ್ರೀತಿಗೆ
ನೀರ ಗುಳ್ಳೆಯಾಯಿತೆ ನನ್ನ ಪ್ರೀತಿ
ಕ್ಷಣ ಕಾಲವು ಉಳಿಯಲಿಲ್ಲ
ಮೂಡಿದಂತೆ ಭಾವಿಸುತಿರಲು
ಹೆಸರಿಲ್ಲದಂತೆ ಅಳಿಸೋಯಿತಲ್ಲ

ಬಂಡೆಯೊಳಗಿನ ಅಗ್ನಿ ಮಾಡಿ
ಕಾಪಾಡಿದ್ದೆ ನನ್ನ ಪ್ರೀತಿ
ಹೃದಯದ ಒಳಗೆ ಇಟ್ಟು
ಹಗಲು ರಾತ್ರಿ ಕಾದಿದ್ದೆ ನನ್ನ ಪ್ರೀತಿ

ಚೂರು ಮಾಡಿದೆಯಲ್ಲೇ ಈ ಹೃದಯ
ಆರದೆ ಉಳಿಯಿತಲ್ಲೆ ಈ ಗಾಯ
ನೋವಿದೆ ಮನದಲಿ
ನನ್ನ ಕಾಡುತ ಹಗಲಿರುಳು

ಎಲ್ಲಿಯಾದರೂ ಇರಲಿ ನೀನು
ನಿನ್ನ ಸುಖವೊಂದೆ ನನಗೆ ಸಾಕು
ನಿನ್ನ ಒಳಿತಿಗಾಗಿಯೇ ಈ ಪ್ರೀತಿ
ದೇವನಾಡುತ ಕುಳಿತನು ನೋಡುತ ಈ ರೀತಿ