ಅಭಿಮಾನಿ

ನಾ ನಿಮಗೆ…


ನಿಮ್ಮ ಟಿಪ್ಪಣಿ ಬರೆಯಿರಿ

ಮತ್ತೆ ಬರೆಯಲೇನು ನಿನ್ನ ಹೆಸರ

ಮತ್ತೆ ಬರೆಯಲೇನು ನಿನ್ನ ಹೆಸರ
ಅಚ್ಚಳಿಯದಂತೆ ಎದೆಯ ಗೋಡೆಯ ಮೇಲೆ

ದಿಕ್ಕು ತಪ್ಪಿದ ನಾವಿಕನಂತೆ
ಕಡಲ ತೀರವ ಸೇರಲು ಹಾತೊರೆಯುತಿರುವೆ
ಮರಳಿ ಬಂದು ದಾರಿ ತೋರು
ಪ್ರೀತಿಯ ತೀರಕೆ ಸೆಳೆದುಕೊಂಡು ಹೋಗು

ನಾಲ್ಕು ಶಬ್ಧಗಳ ಗೀಚಿ
ಎದೆಯ ಭಾವ ತೋರಲಾರೆ
ನನ್ನ ನೋವು, ವಿರಹ
ತಿಳಿಯದು ನಿನಗೆ
ಮರಳಿ ನಿನ್ನ ಹೃದಯದಿ ಬಂಧಿಸು ನನ್ನ


ನಿಮ್ಮ ಟಿಪ್ಪಣಿ ಬರೆಯಿರಿ

ನೀ ದೂರ ಅಂದುಕೊಂಡಾಗ…

ಕಣ್ಣೀರು ಉಪ್ಪು ಯಾಕೆ….
ಯಾಕೆ ಅಂದರೆ ಮಾಡಿ/ಡದ ತಪ್ಪಿನ ಫಲವದು…

ನನಗೆ ನಾನೇ ನಕ್ಕುಬಿಡುವೆ
ಯಾಕೆಂದರೆ ಅಳಲು ಇನ್ನು ಕಣ್ಣೀರು ಉಳಿದಿಲ್ಲ…

ನಗುವಾಗ ಯಾವಾಗಲೂ ನನಗೆ ಎದೆ ನೋವು ಬರುತ್ತದೆ. ಹೃದಯದ ಅಳುವು ಯಾರಿಗಾದರೂ ಕಾಣಬಹುದೇ?

ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದಾಗಲೂ ನಿನಗೆ ನನ್ನ ಪ್ರೀತಿ ಅರ್ಥವಾಗಲಿಲ್ಲವೆಂದರೆ, ನನ್ನ ಪ್ರೀತಿಯಲ್ಲೇನೋ ಲೋಪವಿದೆಯೇನೋ?

ನಿನ್ನ ಬಿಟ್ಟು ನನಗೆ ಬೇರೇನೂ ಇರಲಿಲ್ಲ…..ನಿನಗೆ ಬೇಡವಾದ ಮೇಲೆ ಉಳಿದಿದ್ದಾರೂ ಏನು?


ನಿಮ್ಮ ಟಿಪ್ಪಣಿ ಬರೆಯಿರಿ

ಅಪ್ಪು ನೀನಿಲ್ಲದೆ

ಒಂದು ಮುದ್ದಿನ ಕಥೆಯ ಹೇಳಿ
ರಾಜಕುಮಾರನಾದೆ
ಶಿವ ಕಾಣನೆಂದು ಕೈಲಾಸದ ಕಡೆ
ನೀನೆ ಮುಖ ಮಾಡಿದೆ

ನೀನು ಹೋಗುವ ಸಮಯವಲ್ಲವಿದು
ಆದರೂ ನೀನು ಹೇಳದೆ ಹೋದೆ
ನಿನ್ನ ಅಗಲುವಿಕೆಯ ನೋವು
ಉಳಿಸಿ ಹೋದೆ…. ನೀನೆ ರಾಜಕುಮಾರ


ನಿಮ್ಮ ಟಿಪ್ಪಣಿ ಬರೆಯಿರಿ

ನೀನು ನನಗೆ….

ಉಸಿರಿರುವವರೆಗೂ ನಡೆವೆ ಜೊತೆಗೆ
ಉಸಿರಾಗಿರುವಾಗ ನೀನು ನನಗೆ
ಉಸಿರೇ ಉಸಿರೇ
ನೀನೆಂದು ನನ್ನ ಉಸಿರಾಗಿರು

ನಲ್ಮೆಯ ನೋಟದಿ
ಒಲುಮೆಯ ಭಾವದಿ
ಸೆಳೆದೆ ನೀ ನನ್ನನು
ಸೆಳೆತಕ್ಕೆ ಸಿಕ್ಕು ನಿನ್ನ ಶರಣಾಗಿಹೆನು

ನನ್ನ ಭಾವಂತರಂಗದ ಸೆಲೆಯೋ
ನನ್ನ ಜೀವಾತ್ಮದ ನೆಲೆಯೋ
ನೀ ನನ್ನ ಆತ್ಮಾಭಿಮಾನದ
ನಿಜ ಸೆಲೆ ನೆಲೆ


ನಿಮ್ಮ ಟಿಪ್ಪಣಿ ಬರೆಯಿರಿ

ಸಂಕ್ರಾಂತಿ

ಹೊಸ ಭಾವದ ಹೊಸ ಹುರುಪಿನ
ಉತ್ಸವವಾಗಲಿ
ಜೀವ ತೆರೆಯಲಿ
ಭಾವ ಸಮುದ್ರದ ತೀರದಲಿ
ನೋವುಗಳು ಅಳಿದು ಮನಸಲಿ
ಬೆಳಕು ಹರಿಸುವ ಸೂರ್ಯನು ಬರಲಿ
ಮನದಲ್ಲಾಗಲಿ ಸಂಕ್ರಾಂತಿ


ನಿಮ್ಮ ಟಿಪ್ಪಣಿ ಬರೆಯಿರಿ

ಚುಟುಕುಗಳು…..

ಲೇಡೀಸ್ ಉಪಯೋಗಿಸೋ ಸ್ಕೂಟಿ, ಕಾರು, ಮೊಬೈಲ್ ಎಲ್ಲವನ್ನೂ ಜನ ಕೊಳ್ಳುವಾಗ ಆಧ್ಯತೆ ಕೊಡ್ತಾರೆ. ಯಾಕೆ ಎಂದರೆ ಅವನ್ನು ಸ್ಮೂತ್ ಆಗಿ ಉಪಯೋಗಿಸಿರುತ್ತಾರೆ ಅಂತ. ಆದರೆ ಅವರ ಗಂಡನ್ನ ಕಂಡರೆ ಅಯ್ಯೋ ಅಂತಾರೆ, ಯಾಕೆಂದರೆ ಅಷ್ಟೊಂದು ರಫ್ ಆಗಿ ಉಪಯೋಗಿಸಿರ್ತಾರೆ ಅಂತ…..


ನಿಮ್ಮ ಟಿಪ್ಪಣಿ ಬರೆಯಿರಿ

ಮಳೆ

ಸ್ನೇಹಿತರೊಬ್ಬರು ಕೇಳಿದರು

ಬರೆಯಬಾರದೆ ಕವನ ಪ್ರಳಯ ಮಳೆಯ ಮೇಲೆ

ಹೇಗೆ ಬರೆಯಲಿ ಬರೆಯುವ ಕಾಗದವೇ ಒದ್ದೆಯಾಗಿದೆ

ಮೈ ನೆನೆದು ಮುದ್ದೆಯಾಗಿದೆ


ನಿಮ್ಮ ಟಿಪ್ಪಣಿ ಬರೆಯಿರಿ

ಹೃದಯರಹಿತ

 

ನೀ ನಡೆವ ದಾರಿಯಲ್ಲಿ
ನಗೆ ಹೂವು ಬಾಡದಿರಲಿ
ಎಂದು ಹರಸಿದ ಹಾಡೊಂದಿತ್ತು
ಸಿನೆಮಾವೊಂದರಲ್ಲಿ
ನನ್ನ ಮನಸ್ಸು ಬಯಸ್ಸಿದ್ದು ಅದುವೇ…

ನಿನ್ನ ಮೇಲಿನ ಪ್ರೀತಿಗೆ
ಇರಲಿಲ್ಲ ಯಾವ ಅಂಕೆ
ನಿನಗೆ ಯಾಕೋ ಇದರಲ್ಲಿ ಶಂಕೆ
ಏನಾದರೂ ನಿನ್ನ ಮೇಲಿನ ಪ್ರೀತಿ
ಕರಗುವುದಿಲ್ಲ ಈ ಜನ್ಮಕೆ

ನಿನಗೆ ನನ್ನ ಪ್ರೀತಿ
ಒಪ್ಪಿಗೆಯಾಗದಿದ್ದರೆ
ನೀನು ಯಾವಾಗಲೂ ಸ್ವತಂತ್ರಳು
ನಾನು ನಿನ್ನ ಹಿತಚಿಂತಕ
ಆದರೆ ನೀನಿಲ್ಲದೆ ಈ ಜೀವನ
ವ್ಯರ್ಥ, ದೇಹ ಹೃದಯರಹಿತ…