ಅಭಿಮಾನಿ

ನಾ ನಿಮಗೆ…


ನಿಮ್ಮ ಟಿಪ್ಪಣಿ ಬರೆಯಿರಿ

‘ಸುಕುಮಾರ್’ ಗೆ ಧನ್ಯವಾದಗಳು

ಶುಕ್ರವಾರ,ದಿನಾಂಕ: 25/07/2008, ಬೆಂಗಳೂರಿನ, ಕರ್ನಾಟಕದ ಇತಿಹಾಸದಲ್ಲಿಯೇ
ಮೊದಲ ಸರಣಿ ಬಾಂಬ್ ಸ್ಪೋಟ ದಾಖಲದ ದಿನ. ಒಂದು ಸಾವಿನೊಂದಿಗೆ,ಕೆಲವು
ಜನ ಗಾಯಗೊಂಡರು. ಇಡೀ ದೇಶಕ್ಕೆ ಇದ್ದಕ್ಕಿದ್ದ ಹಾಗೆ ದಿಗ್ಬ್ರಮೆಯಾಯಿತು.
ವಾರಾಂತ್ಯದ ‘ಮಜ’ ಅನುಭವಿಸಲು ಸಿದ್ಧರಾದವರಿಗೆ ಆಘಾತ. ಕಾಡ್ಗಿಚ್ಚಿನಂತೆ
ಹರಡುತ್ತಿದ್ದ ವದಂತಿಗಳು. ಜನರನ್ನು ಎಚ್ಚರಗೊಳಿಸುವತ್ತ ಮಾಧ್ಯಮಗಳು.
ಅನುಮಾನಾಸ್ಪದವಾಗಿ ಕಂಡು ಬರುವಂತಹ ವಸ್ತುಗಳನ್ನು ಪೊಲೀಸರ
ಗಮನಕ್ಕೆ ತರಬೇಕೆಂದು ಪೊಲೀಸರ, ಮಾಧ್ಯಮದವರ ಮನವಿಯಾಗಿತ್ತು.

ಶನಿವಾರ,ದಿನಾಂಕ: 26/07/2008, ಬೆಂಗಳೂರು ಶುಕ್ರವಾರದ ಘಟನೆಯ
ನಂತರ ಸಹಜ ಸ್ಥಿತಿಗೆ ಮರಳುತ್ತಿತ್ತು. ಕೋರಮಂಗಲದ ‘ಫೋರಮ್ ಮಾಲ್’ ಬಳಿ
ಅಸಹಜವಾದ ವಸ್ತುವೊಂದು ಕಂಡು ಬಂತು. ಅಲ್ಲಿನ ಹತ್ತಿರದ ಅಂಗಡಿಯವನು
ಪೊಲೀಸರಿಗೆ ವಿಷಯ ತಿಳಿಸಲು, ಪೊಲೀಸರು ಜಾಗೃತರಾಗಿ ‘ಬಾಂಬ್ ನಿಷ್ಕ್ರಿಯ
ದಳ’ದೊನ್ದಿಗೆ ಆಗಮಿಸಿದರು. ಫೋರಮ್ಮಿಗೆ ಬರುವ ರಸ್ತೆಗಳನ್ನೆಲ್ಲ ಮುಂಜಾಗ್ರತಾ
ಕ್ರಮವಾಗಿ ಬಂಧ್ ಮಾಡಲಾಯಿತು. ನಮ್ಮ ಹೀರೊ ‘ಸುಕುಮಾರ್’ ಕೂಡ ಈ ‘ಬಾಂಬ್ ನಿಷ್ಕ್ರಿಯ
ದಳ’ದಲ್ಲಿ ಇದ್ದರು.

ನಿಧಾನವಾಗಿ ಹೆಜ್ಜೆ ಇಡುತ್ತ ಸಾಗಿದ ‘ಸುಕುಮಾರ್’, ಆ ಅಸಹಜ ವಸ್ತುವಿನ ಬಳಿ
ಸಾಗಿ, ಅದನ್ನು ಸಜೀವ ಬಾಂಬ್ ಎಂದು ಧೃಡಪಡಿಸಿದರು. ನಂತರ ತಮ್ಮ
ಪ್ರಾಣದ ಹಂಗು ತೊರೆದು ಆ ಬಾಂಬನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾದರು.
ನೆರೆದವರ ಮನದಲ್ಲಿ ಮಂದಹಾಸ, ಕೇಕೆ, ಕುಣಿತ. ಆ ದಿನದ ನಿಜವಾದ ಹೀರೊ
‘ಸುಕುಮಾರ್’.

ಸರ್ಕಾರ ಇವರ ಸೇವೆಯನ್ನು ಗಮನಿಸಿ ಒಂದು ಲಕ್ಷ ರೂ. ನಗದು ಬಹುಮಾನ
ಘೋಷಿಸಿತು. ಆದರೆ ಆ ಲಕ್ಷ ರೂಪಾಯಿಗಿಂತ ಕೋಟಿ ಹೃದಯದ ಪ್ರೀತಿಯೇ
ಅವರಿಗೆ ಸಂದಿದೆ. ಸುಕುಮಾರ್, ನಿಮ್ಮಂಥ ಧೈರ್ಯವಂತ ಅಧಿಕಾರಿಗಳಿಗೆ
ನನ್ನ ಅಭಿನಂದನೆಗಳು.


ನಿಮ್ಮ ಟಿಪ್ಪಣಿ ಬರೆಯಿರಿ

ಕರೆಂಟ್ ಶಾಕ್

ಕರೆಂಟಿಲ್ಲದೇ ಶಾಕ್ ಹೊಡೆದರೆ ಹೇಗಿರುತ್ತೆಇದೇನು ವಿಚಿತ್ರ ಅನ್ನಬಹುದುಈಗ ಕರ್ನಾಟಕದಲ್ಲಿರೋ ಬಹುಪಾಲು
 
ಜನರಿಗೆ ಇದರ ಅನುಭವ ಆಗಿರಬೇಕುಪ್ರತಿದಿನ ಕರೆಂಟ್ (ಪವರ್ಇಲ್ಲದೇ ಅನುಭವಿಸುತ್ತಿರುವ ಶಾಕ್ ಇದು.
ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆ ಆಗ್ತಾ ಇದೆಮಳೆ ಕಡಿಮೆ ಆದರೆಅಣೆಕಟ್ಟುಗಳಲ್ಲಿಯೂ ನೀರು 
ಇರೋದಿಲ್ಲಇದರಿಂದ ಕುಡಿಯೊ ನೀರಿಗೆವ್ಯವಸಾಯಕ್ಕೆ ಮತ್ತು ವಿದ್ಯುತ್ ಉತ್ಪಾದನೆಗೆಎಲ್ಲದಕ್ಕೂ ಕಷ್ಟ
ಪ್ರತಿದಿನ ಲೆಕ್ಕವಿಲ್ಲದೇ ನಾವು ವ್ಯರ್ಥ ಮಾಡೋ ನೀರು ಮತ್ತು ವಿದ್ಯುತ್ತಿನ ಬೆಲೆ ಈಗ ಎಲ್ಲರಿಗೂ 
ಗೊತ್ತಾಗಿರಬೇಕುಕೆಲವರಿಗೆ ಇದರ ಅರಿವಿದ್ದರುತಿಂಗಳಿಗೆ ಸರಿಯಾಗಿ ಬಿಲ್ ಮಾತ್ರ ಕಟ್ಟುತ್ತಾರೆ
ಮತ್ತೆ ಬೇಕಾಬಿಟ್ಟಿ ನೀರುವಿದ್ಯುತ್ ಬಳಸುತ್ತಾರೆ.
ಒಂದು ಅಂದಾಜಿನ ಪ್ರಕಾರನಮ್ಮ ರಾಜ್ಯದ ಜಲಾಶಯಗಳಲ್ಲಿ ಕೇವಲ ಕೆಲವೇ ದಿನಗಳಿಗಾಗುವಷ್ಟು ನೀರು 
ಮಾತ್ರ ಇದೆಅನಂತರ ನೀರುವಿದ್ಯುತ್ ಎರಡು ಇಲ್ಲನಮ್ಮ ರೈತರ ಜಮೀನಿನ ಬೆಳೆಯ ನೀರು 
ಬೆಂಗಳೂರಂತ ನಗರಗಳಿಗೆ ಕುಡಿಯಲು ನೀಡಲಾಗುತ್ತಿದೆಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕುಹಾಗಾಗಿ 
ನೀರಿನ ಮೂಲಗಳ ರಕ್ಷಣೆಕೆರೆಗಳ ಒತ್ತುವರಿ ತಪ್ಪಿಸುವುದುಮಳೆ ಕೊಯ್ಲುಮರಗಳ ರಕ್ಷಣೆಮಿತವಾಗಿ 
ನೀರು ಮತ್ತು ವಿದ್ಯುತ್ ಬಳಸುವುದು ನಮ್ಮೆಲ್ಲರ ಕರ್ತವ್ಯಮುಂದಿನ ಪೀಳಿಗೆಗಾಗಿ ನೀರು ಉಳಿಸೋಣ.


108 ಟಿಪ್ಪಣಿಗಳು

ಕನ್ನಡ ಜನಪ್ರಿಯ ಗಾದೆಗಳು (Kannada Popular Proverbs (Janapriya Gaadegalu))

  1. ವೇದ ಸುಳ್ಳಾದರು ಗಾದೆ ಸುಳ್ಳಾಗದು.
  2. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
  3. ಕುಂಬಾರನಿಗೆ ವರುಷದೊಣ್ಣೆಗೆ ನಿಮಿಷ.
  4. ಎತ್ತು ಏರಿಗೆಳೀತುಕೋಣ ನೀರಿಗೆಳೀತು.
  5. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ
  6. ಕೈ ಕೆಸರಾದರೆ ಬಾಯಿ ಮೊಸರು.
  7. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
  8. ಹೆಣ್ಣಿಗೆ ಹಟವಿರಬಾರದುಗಂಡಿಗೆ ಚಟವಿರಬಾರದು.
  9. ಮಾತು ಬೆಳ್ಳಿಮೌನ ಬಂಗಾರ.
  10. ಮಾತು ಮನೆ ಮುರಿತುತೂತು ಓಲೆ ಕೆಡಿಸಿತು.
  11. ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
  12. ಮನೆಗೆ ಮಾರಿಊರಿಗೆ ಉಪಕಾರಿ.
  13.  ಆಳಾಗಬಲ್ಲವನು ಅರಸನಾಗಬಲ್ಲ.
  14.  ಊರಿಗೆ ದೊರೆ ಆದರೂ ತಾಯಿಗೆ ಮಗನೆ.
  15.  ಹೆತ್ತವರಿಗೆ ಹೆಗ್ಗಣ ಮುದ್ದು.
  16.  ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆಬಾಗಿಲು ಹಾಕಿದರಂತೆ.
  17.  ಗಿಡವಾಗಿ ಬಗ್ಗದ್ದುಮರವಾಗಿ ಬಗ್ಗೀತೇ?
  18.  ಮಾಡೋದೆಲ್ಲ ಅನಾಚಾರಮನೆ ಮುಂದೆ ಬೃಂದಾವನ.
  19.  ಮನಸಿದ್ದರೆ ಮಾರ್ಗ.
  20. ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ.
  21. ಆರಕ್ಕೇರಲಿಲ್ಲಮೂರಕ್ಕೀಳಿಯಲಿಲ್ಲ.
  22. ಆರು ಕೊಟ್ಟರೆ ಅತ್ತೆ ಕಡೆಮೂರು ಕೊಟ್ಟರೆ ಸೊಸೆ ಕಡೆ.
  23. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ.
  24. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
  25. ಅತ್ತೆಗೊಂದು ಕಾಲಸೊಸೆಗೊಂದು ಕಾಲ.
  26. ಬೆಕ್ಕು ಕಣ್ಮುಚ್ಚಿ ಹಾಳು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
  27. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.
  28. ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
  29. ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು.
  30. ಜಲ ಶೋಧಿಸಿ ನೀರು ತರ್ಬೇಕುಕುಲ ಶೋಧಿಸಿ ಹೆಣ್ಣು ತರ್ಬೇಕು.
  31. ಚಿಂತೆ ಇಲ್ಲದವನಿಗೆ ಸನ್ತೇಲು ನಿದ್ದೆ.
  32. ದೇವರು ವರ ಕೊಟ್ಟರು ಪೂಜಾರಿ ಕೊಡೆಬೇಕಲ್ಲ.
  33. ಹನುಮಂತಾನೆ ಬಾಲ ಕಡಿತಿರುವಾಗಇವನ್ಯಾವನೋ ಶಾವಿಗೆ ಕೇಳಿದನಂತೆ.
  34. ತುಂಬಿದ ಕೊಡ ತುಳುಕುವುದಿಲ್ಲ.
  35. ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
  36. ಹನಿ ಹನಿ ಸೇರಿದರೆ ಹಳ್ಳತೆನೆ ತೆನೆ ಸೇರಿದರೆ ಬಳ್ಳ.
  37. ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.
  38. ಹುಚ್ಚರ ಮದುವೆಯಲ್ಲಿ ಉನ್ಡೋನೆ ಜಾಣ.
  39. ಜಾಣನಿಗೆ ಮಾತಿನ ಪೆಟ್ಟುದಡ್ಡನಿಗೆ ದೊಣ್ಣೆ ಪೆಟ್ಟು.


4 ಟಿಪ್ಪಣಿಗಳು

Sundara Nadu- E Karunadu

Karnataka is the state in which you will find one or the other tourist place in each district which are historically, religiously, or by some other reason are important to visit. Let us have a glance at the ‘KARNATAKA’.

Karnataka is the southern state of India. Karnataka covers 1,91,791 Sq. Km of area with population around 6 crores (2007). Tamil nadu, Andrapradesh, Maharastra, Kerala and Goa are its neighbouring states. Kannada is the Administrative and local language. Kannada is the only language in which “you can write what you say”.

More information on Kannada can be obtained from the following link: http://en.wikipedia.org/wiki/Kannada

Karnataka is the dream state to Travel and Live there. You can find forest camps, Adventures Clubs, National Parks, Bird Sanctuaries, Trekking places, Palaces, Water falls and green, green ….every where. So visit Karnataka once in a life time and enrich your sweet memories.