ಅಭಿಮಾನಿ

ನಾ ನಿಮಗೆ…


1 ಟಿಪ್ಪಣಿ

ಮನೆ ಬೇಕಾಗಿದೆ

ಬಾಡಿಗೆಗೊಂದು ಮನೆ ಬೇಕಾಗಿದೆ
ಎಂದೆನ್ನಿಸಿದ ಕೂಡಲೇ
ಬೀದಿ ಬೀದಿಯಲಿ ಅಲೆದಾಡಿದೆ
ಶನಿವಾರ-ಭಾನುವಾರಗಳು
ಹತ್ತು ಹಲವಾದವು
‘ಬ್ರಹ್ಮಚಾರಿಗಳಿಗೆ ಮನೆಯಿದೆ’
ಎಂಬ ಬೋರ್ಡ್
ಕಾಣಿಸದೆ ನಿರಾಸೆಯಾದೆ

ಮನೆ ಬೇಕೆಂದರೆ
ಅದಕ್ಕೊಬ್ಬ ಬ್ರೋಕರ್ ಇರಬೇಕು
ಅವನೇಳಿದ ಹಾಗೆ ನಡೀಬೇಕು
ಸರಿ, ಅವನನ್ನ ಹುಡುಕಿದೆ
‘ಮನೆ ತೋರೋ ಮಹಾರಾಯ’
ಎಂದು ಅವನ ಹೊಗಳಿದೆ

ನನ್ನ ಬರಿಗಣ್ನೆಗೆ ಕಾಣಿಸದ
ಎಲ್ಲಿಯೂ ಬೋರ್ಡ್ ತಗುಲಿ ಹಾಕದ
ಹತ್ತಾರು ಮನೆಗಳ
ತೋರಿದ ಕ್ಷಣದಲಿ
ಒನ್ದೊನ್ದಕು ಒಂದೊಂದು ಕಂಡೀಶನ್
ಒಂದೊಂದು ರೇಟು

ಮೂರು ಸಾವಿರಕೆ ಸಿಂಗಲ್ ರೂಮು
ಆರಕ್ಕೆ ಕಡಿಮೆಯಿಲ್ಲ ಡಬಲ್ ಬೆಡ್‍ರೂಮಿನ ಮನೆಯು
ಒಂದು ತಿಂಗಳ ಬಾಡಿಗೆಯ
ಹಣ ಕೊಡಬೇಕು ನನಗೆ
ಯಾವ ತೊಂದರೆ ಇಲ್ಲದೆ
ಕರಾರು ಮಾಡಿಸಿ ಮನೆ ಕೊಡಿಸುವೆ ನಿಮಗೆ
ಎಂದು ರೇಟು ಹೇಳಿದ ‘ಮಹಾರಾಯ’

ತಕ್ಕ ಮನೆಯೇನೋ ಸಿಕ್ಕಿತು
ಪಕ್ಕದಲ್ಲಿಯೆ ಪಾರ್ಕು-ಗೀಕು
ಎಲ್ಲ ಇದ್ದು ಮನಕೀಗ ಶಾಂತಿ ಇರದಾಗಿದೆ
ಮಾಲೀಕರ ಮನೆಯಲ್ಲಿ ದಿನ ರಾದ್ಧಾಂತ ನಡೆದಿದೆ
ಬೇರೊಂದು ಮನೆಯ ಹೊಸದಾಗಿ
ನಾ ಹುಡುಕಬೇಕಾಗಿದೆ

Advertisements